ಅಕ್ರಮಕ್ಕೆ ಸಹಕರಿಸಲಿಲ್ಲ ಎಂದು ಕುತಂತ್ರದಿಂದ ಅವಿಶ್ವಾಸ ಮಂಡಿಸಿ ತೊಂದರೆ ನೀಡಲಾಗಿದೆ : ಮಾಜಿ ಆಧ್ಯಕ್ಷೆ ಗಂಭೀರ ಆರೋಪ
ನಂದಿ ಪಂಚಾಯಿತಿ ಒಂದು ಪ್ರವಾಸಿ ತಾಣ, ಇಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಿ ಪಂಚಾಯಿತಿಗೆ ಉತ್ತಮ ಆದಾಯ ಬರುವಂತೆ ಮಾಡಬೇಕು, ಮಾದರಿ ಪಂಚಾಯಿತಿ ಮಾಡ ಬೇಕು ಎಂದು ಪಂಚಾಯಿತಿ ವ್ಯಾಪ್ತಿಯ ಅಕ್ರಮ ರೆಸಾರ್ಟ್, ಲೇಔಟ್, ಹೋಟೆಲ್ ಗಳ ಲೈಸೆ ನ್ಸ್ರದ್ದು ಮಾಡಿ, ಲೀಗಲ್ ಮಾಡಬೇಕು. ಪಂಚಾಯಿತಿಗೆ ಆದಾಯ ಹೆಚ್ವಿಸ ಬೇಕೆಂದು ಮುಂದುವರೆದೆ

ಹಲವಾರು ಅಕ್ರಮ ಬಿಲ್, ಜಮೀನುಗಳ ಪರಭಾರೆಗೆ ಅವಕಾಶ ನೀಡಲಿಲ್ಲ, ಸದಸ್ಯರೊಬ್ಬರ ಒತ್ತಡಕ್ಕೆ ಮಣಿಯಲಿಲ್ಲ ಎಂದು ಕುತಂತ್ರದಿAದ ನನ್ನ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಗಿದೆ ಎಂದು ನಂದಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ಗಂಭೀರ ಆರೋಪ ಮಾಡಿದರು.

ಚಿಕ್ಕಬಳ್ಳಾಪುರ : ನಂದಿ ಗ್ರಾ.ಪಂನಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿದೆ. ಹಲವಾರು ಅಕ್ರಮ ಬಿಲ್, ಜಮೀನುಗಳ ಪರಭಾರೆಗೆ ಅವಕಾಶ ನೀಡಲಿಲ್ಲ, ಸದಸ್ಯರೊಬ್ಬರ ಒತ್ತಡಕ್ಕೆ ಮಣಿಯಲಿಲ್ಲ ಎಂದು ಕುತಂತ್ರದಿಂದ ನನ್ನ ವಿರುದ್ಧ ಅವಿಶ್ವಾಸ ಮಂಡನೆ ಮಾಡಲಾಗಿದೆ ಎಂದು ನಂದಿ ಗ್ರಾ.ಪಂ ಮಾಜಿ ಅಧ್ಯಕ್ಷೆ ಮಾಲಿನಿ ಶ್ರೀನಿವಾಸ್ ಗಂಭೀರ ಆರೋಪ ಮಾಡಿ ದರು. ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತ ನಾಡಿ, 17 ತಿಂಗಳು ಗ್ರಾ.ಪಂ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದು, ಪಂಚಾಯಿತಿ ವ್ಯಾಪ್ತಿ ಯಲ್ಲಿ ಹಲವು ರೆಸಾರ್ಟ್, ಲೇಔಟ್‌ಗಳಿವೆ. ಅವುಗಳ ಅಕ್ರಮವನ್ನೆಲ್ಲ ಬಯಲಿಗೆಳೆದು ಪಂಚಾಯಿತಿಗೆ ಆದಾಯಹೆಚ್ವಿಸುವ ಗುರಿ ಹೊಂದಲಾಗಿತ್ತು. ಆದರೆ ಆದರೆ ಕೆಲ ಸದಸ್ಯರ ಅಕ್ರಮ ದಂಧೆ ಗಳಿಗೆ ಬೆಂಬಲ ಕೊಡಲಿಲ್ಲ,
ಅಕ್ರಮ ಬಿಲ್ಲುಗಳಿಗೆ ಸಹಿ ಹಾಕಲಿಲ್ಲ, ಒಬ್ಬ ಸದಸ್ಯ ಒತ್ತಡಕ್ಕೆ ನಾನು ಒಪ್ಪಲಿಲ್ಲ ಎಂಬ ಕಾರಣಕ್ಕೆ ನನ್ನ ವಿರುದ್ಧ ಅವಿಸ್ವಾಸ ನಿರ್ಣಯ ಮಂಡಿಸಿ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ: Chikkaballapur Breaking: ಆಶ್ರಮದ ಮೇಲೆ ಕಣ್ಣು ಹಾಕಿರುವ ರಿಯಲ್ ಎಸ್ಟೇಟ್ ದಂಧೆಕೋರರ ಉಪಟಳ ನಿಲ್ಲಲಿ: ಜ್ಯೋತಿ ಆರೋಪ
ನಂದಿ ಪಂಚಾಯಿತಿ ಒಂದು ಪ್ರವಾಸಿ ತಾಣ, ಇಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕಿ ಪಂಚಾಯಿತಿಗೆ ಉತ್ತಮ ಆದಾಯ ಬರುವಂತೆ ಮಾಡಬೇಕು, ಮಾದರಿ ಪಂಚಾಯಿತಿ ಮಾಡಬೇಕು ಎಂದು ಪಂಚಾಯಿತಿ ವ್ಯಾಪ್ತಿಯ ಅಕ್ರಮ ರೆಸಾರ್ಟ್, ಲೇಔಟ್, ಹೋಟೆಲ್ ಗಳ ಲೈಸೆನ್ಸ್ರದ್ದು ಮಾಡಿ, ಲೀಗಲ್ ಮಾಡಬೇಕು. ಪಂಚಾಯಿತಿಗೆ ಆದಾಯ ಹೆಚ್ವಿಸ ಬೇಕೆಂದು ಮುಂದುವರೆದೆ. ಆದರೆ ನನ್ನ ಜೊತೆ ಗೆದ್ದ ಕೆಲ ಸದಸ್ಯರು ಅಕ್ರಮ ಲೇಔಟ್ ಗಳಿಗೆ ಬೆಂಬಲ ನೀಡಬೇಕು, ಅಕ್ರಮ ಲ್ಯಾಂಡ್ ಕನ್ವರ್ಷನ್‌ಗೆ ಒಪ್ಪಿಕೊಳ್ಳಬೇಕು ಎಂದು ಒತ್ತಾಯ ಹೇರಿದರು ಎಂದು ಆರೋಪಿಸಿದರು.
ಅಕ್ರಮ ಸರದಾರರ ಜತೆ ಉಪಾಧ್ಯಕ್ಷ ಮಲ್ಲಪ್ಪ ಸೇರಿ ಅಕ್ರಮ ಬಿಲ್ಲುಗಳಿಗೆ ಸಹಿ ಹಾಕುವಂತೆ ಒತ್ತಾಯಿಸಿದರು. ನಾನೊಬ್ಬ ಹೆಣ್ಣಾಗಿ ಎಲ್ಲವನ್ನು ದಿಟ್ಟತನದಿಂದ ನಿರಾಕರಿಸಿದೆ. ಹಲವು ಸದಸ್ಯರು ಇಂತಹ ಕೆಲಸಗಳಿಗೆ ಹೆಚ್ಚ ಕಿರುಕುಳ ನೀಡಿದ್ದು ಜೆಸಿಬಿ ಮಂಜುನಾಥ್ ನನ್ನ ಒತ್ತಡಕ್ಕೆ ಮಣಿದರೆ ಬೆಂಬಲಿಸುತ್ತೇನೆ ಎಂದಿದ್ದರು. ಯಾವುದಕ್ಕೂ ಆಸ್ಪದ ನೀಡದ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪೊಲೀಸ್ ದೂರು ನೀಡಿ ಜಾತಿ ನಿಂದನೆ ಕೇಸು ದಾಖಲಿಸಿದ್ದಾರೆ ಎಂದರು.
ಏನೇ ಮಾಡಿದರೂ ಈ ಮಾಲಿನಿ ನಮ್ಮ ಮಾತು ಕೇಳೋದಿಲ್ಲ ಎಂಬುದು ಖಾತರಿ ಆದಾಗ ಅವಿಶ್ವಾಸ ನಿರ್ಣಯ ಮಂಡಿಸಿ, ನನ್ನ ಅಧಿಕಾರ ಕಸಿದುಕೊಂಡಿದ್ದಾರೆ. ನನ್ನಂತೆಯೇ ಕ್ಷೇತ್ರ ದಲ್ಲಿ ಎಷ್ಟೋ ಪಂಚಾಯಿತಿಗಳಲ್ಲಿ ಹೆಣ್ಣುಮಕ್ಕಳು ಅಧ್ಯಕ್ಷರಾಗಿ, ಸದಸ್ಯರಾಗಿ ಆಯ್ಕೆ ಯಾಗಿದ್ದು, ಕೆಲಸ ಮಾಡುತ್ತಿರಬಹುದು ಮತ್ತೊಬ್ಬರಿಗೆ ಗುಲಾಮರಾಗಿ ತಲೆ ತಗ್ಗಿಸಿಕೊಂಡು ಅವರು ಹೇಳಿದ ಕಡೆ ಸಹಿ ಹಾಕಬೇಡಿ ಅಲ್ಲಿ ನಡೆಯುವ ಅಕ್ರಮ ಅನ್ಯಾಯ ದಿಟ್ಟವಾಗಿ ಎದುರಿಸಿ ಎಂದು ಸಲಹೆ ನೀಡಿದರು.