Saturday, 18th May 2024

ಆರೋಗ್ಯ ಕ್ಷೇತ್ರದಲ್ಲಿ ಧನಸಹಾಯ ವೃದ್ಧಿ: ಎಲ್ಲದಕ್ಕೂ ಉತ್ತಮ

ವಿಶ್ಲೇಷಣೆ

ಡಾ.ವಿನೋದ್ ಕೆ.ಪಾಲ್

ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಶಾಲವಾದ ಆರೋಗ್ಯ ಖಾತ್ರಿ ವ್ಯಾಪ್ತಿಯಿಂದ ಜನರಿಗೆ ದೊಡ್ಡ ಉಳಿತಾಯವಿದೆ. ಇದರ ಪ್ರಾರಂಭದಿಂದಲೂ ೬.೫ ಕೋಟಿ ಉಚಿತ ಆಸ್ಪತ್ರೆಗಳ ಮೂಲಕ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಜನರಿಗೆ ವೈಯ್ಯಕ್ತಿಕವಾಗಿ ವೈಯಕ್ತಿಕವಾಗಿ ನಿಧಿಯಾಚೆಗಿನ ವೆಚ್ಚ (ಒಒಪಿಇ) ದಲ್ಲಿ ೧,೩೫,೦೦೦ ಕೋಟಿ ರು.ಗಳ ಸಂಚಿತ ಉಳಿತಾಯವನ್ನು ನೀಡಿದೆ ಎಂದು ಅಂದಾಜಿಸಲಾಗಿದೆ.

ಎಲ್ಲರಿಗೂ ಕೈಗೆಟಕುವ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗೆ ಸಾರ್ವತ್ರಿಕ ಅವಕಾಶವನ್ನು ರಾಷ್ಟ್ರೀಯ ಆರೋಗ್ಯ ನೀತಿ(ಎನ್. ಎಚ್. ಪಿ)
ಕಲ್ಪಿಸುತ್ತದೆ. ಈ ಗುರಿಯನ್ನು ಸಾಧಿಸಲು, ಆರೋಗ್ಯ ಮೂಲಸೌಕರ್ಯವನ್ನು ರಚಿಸಲು, ಸೇವೆಗಳನ್ನು ಸುಧಾರಿಸಲು ಮತ್ತು ಆರೋಗ್ಯ ಭರವಸೆಯನ್ನು ಒದಗಿಸಲು ಅತ್ಯುತ್ತಮವಾದ ವ್ಯವಸ್ಥೆ ಮತ್ತು ಅದಕ್ಕಾಗಿ ಅಧಿಕ ಸಾರ್ವಜನಿಕ ವೆಚ್ಚಗಳುನ್ನು ಹೊಂದಿಸಿಕೊಳ್ಳುವ ಅಗತ್ಯವಿದೆ. ರಾಷ್ಟ್ರೀಯ ಆರೋಗ್ಯ ಖಾತೆಗಳ (ಎನ್. ಎಚ್. ಎ) ಸರಣಿ ಡೇಟಾದಿಂದ ಇತ್ತೀಚಿನ ವರ್ಷಗಳಲ್ಲಿ ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸುವ ರಾಷ್ಟ್ರದ ಬದ್ಧತೆಯು ೨೦೨೦-೨೧ ಮತ್ತು ೨೦೨೧-೨೨ ರ ತಾತ್ಕಾಲಿಕ ಅಂದಾಜುಗಳನ್ನು ಒಳಗೊಂಡಂತೆ ಏರಿಕೆಯಾಗಿರುವುದು ಸ್ಪಷ್ಟವಾಗಿ ಗೋಚರವಾಗುತ್ತದೆ
೨೦೧೪-೧೫ ಮತ್ತು ೨೦೨೧-೨೨ ರ ನಡುವೆ ಜಿಡಿಪಿಯ ಅನುಪಾತದಲ್ಲಿ ಸರಕಾರಿ ಆರೋಗ್ಯ ವೆಚ್ಚವು (ಜಿ.ಎಚ್.ಇ) ೬೩% ರಷ್ಟು ಹೆಚ್ಚಾಗಿ ಅಭೂತಪೂರ್ವ ಏರಿಕೆ ಕಂಡಿದೆ ಎಂದು ರಾಷ್ಟ್ರೀಯ ಆರೋಗ್ಯ ಖಾತೆಗಳ (ಎನ್. ಎಚ್. ಎ) ಅಂದಾಜು ಲೆಕ್ಕಾಚಾಗಳು ತೋರಿಸುತ್ತವೆ.

೨೦೧೪-೧೫ ರಲ್ಲಿ ಸರಕಾರಿ ಆರೋಗ್ಯ ವೆಚ್ಚವು (ಜಿ.ಎಚ್.ಇ) ಜಿಡಿಪಿಯ ೧.೧೩% ರಷ್ಟಿತ್ತು, ಮತ್ತು ೨೦೧೯-೨೦ ರಲ್ಲಿ ೧.೩೫% ಗೆ ಏರಿಕೆ ಕಂಡಿತು. ಇದು ಕ್ರಮವಾಗಿ ೨೦೨೦-೨೧ ರಲ್ಲಿ ೧.೬೦% ಆಯಿತು ಮತ್ತು ೨೦೨೧-೨೨ ರಲ್ಲಿ ೧.೮೪% ಕ್ಕೆ ಏರಿತು. ತಲಾವಾರು ಲೆಕ್ಕದಲ್ಲಿ, ೨೦೧೪-೧೫ ಮತ್ತು ೨೦೧೯-೨೦ ರ ನಡುವೆ ಸರಕಾರಿ ಆರೋಗ್ಯ ವೆಚ್ಚವು (ಜಿ.ಎಚ್.ಇ) ೧,೧೦೮ ರು. ರಿಂದ ೨,೦೧೪ ರು.ಗೆ ಏರಿಕೆ ಕಂಡಿದೆ. ಸರಕಾರದ ತಲಾವಾರು ವೆಚ್ಚದ ಹೆಚ್ಚಳವು ೨೦೨೦-೨೧ ರಲ್ಲಿ ೨,೩೨೨ ರು. ಮತ್ತು ೨೦೨೧-೨೨ ರಲ್ಲಿ ೩,೧೫೬ ರು. ಅನ್ನು ತಲುಪಿತು ಹಾಗೂ ನಿಶ್ಚಿತ ಹಂತ ತಲುಪುವುದರೊಂದಿಗೆ ಮುಂದುವರೆದಿದೆ, ಮತ್ತು ತಾತ್ಕಾಲಿಕ ಅಂದಾಜಿನ ಪ್ರಕಾರ ೨೦೧೪-೧೫ ರ ಮಟ್ಟಕ್ಕಿಂತ ಮೂರು ಪಟ್ಟು ಹೆಚ್ಚು ವ್ಯಯವಾಯಿತು.

ಮತ್ತೊಂದು ಪ್ರಮುಖ ವಿಷಯವೆಂದರೆ, ಸರಕಾರದ ಹಣಕಾಸು ವಿಮೆಯ ಮೇಲಿನ ವೆಚ್ಚವು ೨೦೧೩-೧೪ ರಲ್ಲಿ ಕೇವಲ ೪,೭೫೭ ಕೋಟಿ ರು.ಯಿತ್ತು, ಮತ್ತು ಇದು ೨೦೨೧-೨೨ ರಲ್ಲಿ ೨೦,೭೭೧ ಕೋಟಿ ರು.ಗೆ ತಲುಪಿತು ಹಾಗೂ ೪.೪ ಪಟ್ಟು ಹೆಚ್ಚಾಗಿದೆ. ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ
ಆರೋಗ್ಯ ಯೋಜನೆ (ಎ.ಬಿ.ಪಿ.ಎಂ.ಜೆ.ಎ.ವೈ.) ಮತ್ತು ರಾಜ್ಯ ಆರೋಗ್ಯ ಭರವಸೆ/ವಿಮಾ ಯೋಜನೆಗಳಿಗೆ ಹೆಚ್ಚುತ್ತಿರುವ ಹೂಡಿಕೆಗಳನ್ನು ಕೂಡಾ ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಸರಕಾರದ ಅನುದಾನಿತ ಆರೋಗ್ಯ ವಿಮೆ, ಸರಕಾರಿ ಉದ್ಯೋಗಿಗಳಿಗೆ ವೈದ್ಯಕೀಯ ಮರುಪಾವತಿ ಮತ್ತು ಸಾಮಾಜಿಕ ಆರೋಗ್ಯ ವಿಮಾ ಕಾರ್ಯಕ್ರಮಗಳನ್ನು ಒಳಗೊಂಡಂತೆ, ಆರೋಗ್ಯದ ಮೇಲಿನ ಸಾಮಾಜಿಕ ಭದ್ರತಾ ವೆಚ್ಚದ ಪಾಲು ೨೦೧೪-೧೫ ರಲ್ಲಿ
೫.೭% ಇತ್ತು , ಮತ್ತು ಅದು ೨೦೧೯-೨೦ ರಲ್ಲಿ ಒಟ್ಟು ಆರೋಗ್ಯದ ಖರ್ಚು ೯.೩% ಕ್ಕೆ ಏರಿಕೆ ಕಂಡಿದೆ.

ಈ ಬೆಳವಣಿಗೆಯು, ಎನ್. ಎಚ್. ಪಿ. ಯೋಜನೆಯಲ್ಲಿ ೨೦೧೭ ರಿಂದ ಕಲ್ಪಿಸಿದಂತೆ ಆರೋಗ್ಯ ರಕ್ಷಣೆಯಲ್ಲಿ ಹೆಚ್ಚಿದ ಸರಕಾರಿ ಹೂಡಿಕೆಯ ಕಡೆಗೆ ಧನಾತ್ಮಕ ಬದಲಾವಣೆಯನ್ನು ಸ್ಪಷ್ಟವಾಗಿ ಸೂಚಿಸುತ್ತವೆ ಮತ್ತು ಆರೋಗ್ಯ ವೆಚ್ಚಗಳಿಗಾಗಿ ವ್ಯಕ್ತಿಗಳ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತವೆ. ಸಂತಸದ ಸುದ್ದಿಯೆಂದರೆ, ೨೦೧೪-೧೫ ಮತ್ತು ೨೦೧೯-೨೦ ರ ನಡುವೆ ೬೨.೬% ರಿಂದ ೪೭.೧% ಕ್ಕೆ ಇಳಿದು, ವೈಯಕ್ತಿಕವಾಗಿ ನಿಧಿಯಾಚೆ ಗಿನ ವೆಚ್ಚದಲ್ಲಿ (ಒಒಪಿಇ) ಸ್ಥಿರವಾದ ಇಳಿಕೆ ಕಂಡುಬಂದಿದೆ.

ಎನ್. ಎಚ್. ಎ.ಯ ತಾತ್ಕಾಲಿಕ ಅಂದಾಜಿನ ಪ್ರಕಾರ ವೈಯಕ್ತಿಕವಾಗಿ ನಿಽಯಾಚೆಗಿನ ವೆಚ್ಚದ (ಒಒಪಿಇ) ಪಾಲನ್ನು ೨೦೨೦-೨೧ ರ ೪೪.೪% ರಿಂದ ೨೦೨೧-೨೨ ರಲ್ಲಿ ೩೯.೪% ಕ್ಕೆ ಕಡಿಮೆ ಮಾಡುವುದರೊಂದಿಗೆ ಈ ಇಳಿಮುಖ ಪ್ರವೃತ್ತಿಯು ಮುಂದುವರೆದಿದೆ. ೨೦೧೪-೧೫ ರಿಂದ ೭ ವರ್ಷಗಳ ಅವಧಿಯಲ್ಲಿ ವೈಯಕ್ತಿಕವಾಗಿ ನಿಽಯಾಚೆಗಿನ ವೆಚ್ಚದಲ್ಲಿ (ಒಒಪಿಇ) ೩೭% ನಷ್ಟು ಅಭೂತಪೂರ್ವ ಕುಸಿತ ಕಂಡುಬಂದಿದೆ. ನಮ್ಮ ನಾಗರಿಕರಿಗೆ
ಹಣದ ಹೊರೆ ಕಡಿಮೆ ಮಾಡಿ, ಅವರಿಗೆ ಗಮನಾರ್ಹ ಆರ್ಥಿಕ ಪರಿಹಾರವನ್ನು ತಂದುಕೊಟ್ಟಿದೆ.

ಗಮನಾರ್ಹವಾಗಿ, ಕೋವಿಡ್ ೧೯ ಸಾಂಕ್ರಾಮಿಕದ ವರ್ಷಗಳಲ್ಲಿ (ಅಂದರೆ ೨೦೨೦-೨೧ ಮತ್ತು ೨೦೨೧-೨೨), ವೈಯಕ್ತಿಕವಾಗಿ ನಿಧಿಯಾಚೆಗಿನ ವೆಚ್ಚ (ಒಒಪಿಇ) ಕ್ಷೀಣಿಸುತ್ತಲೇ ಇತ್ತು. ಗಂಭೀರ ವೈರಸ್‌ನಿಂದಾಗಿ ಹೆದರಿದ ಜನತೆ, ವಿಸ್ಮಯಕಾರಿಯಾಗಿ ಹೆಚ್ಚಿನ ಆರೋಗ್ಯ ರಕ್ಷಣೆಯ ಅಗತ್ಯತೆಯ ಹಿನ್ನೆಲೆ ಯಲ್ಲಿ ಬದುಕು ಕಂಡರು. ಈ ನಡುವೆ, ಕ್ಷೀಣಿಸುತ್ತಿರುವ ವೈಯಕ್ತಿಕ ನಿಧಿಯಾಚೆಗಿನ ವೆಚ್ಚ (ಒಒಪಿಇ) ಅನ್ನು ಹೊಂದಿಸಿಕೊಳ್ಳುವುದು ಸರಕಾರದ ಪಾಲಿಗೆ ಅಸಾಧಾರಣ ಕೆಲಸವಾಯಿತು. ಇದು ಆರೋಗ್ಯ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವ, ಸೇವೆಗಳಿಗೆ ಪ್ರವೇಶ ಮತ್ತು ಆರ್ಥಿಕ ರಕ್ಷಣೆಗಾಗಿ ಸರಕಾರವು ತೆಗೆದುಕೊಂಡ ಕ್ರಮಗಳ ಪರಿಣಾಮಕಾರಿತ್ವವನ್ನು ಒತ್ತಿಹೇಳುತ್ತದೆ.

ಕಳೆದ ದಶಕದಲ್ಲಿ ವೈಯಕ್ತಿಕವಾಗಿ ನಿಧಿಯಾಚೆಗಿನ ವೆಚ್ಚ (ಒಒಪಿಇ) ಕ್ಷೀಣಿಸುತ್ತಿರುವುದು ಖಚಿತವಾಗಿದೆ. ಸರಕಾರವು ಹಲವಾರು ನೂತನ ಉಪಕ್ರಮ ಗಳನ್ನು ವ್ಯವಸ್ಥೆಗೊಳಿಸಿ, ಸಕ್ರಿಯಗೊಳಿಸುವವರಿಂದ ಈ ಫಲಿತಾಂಶವು ಹೊರಹೊಮ್ಮಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ
ಯೋಜನೆ (ಎ.ಬಿ.ಪಿ.ಎಂ.ಜೆ.ಎ.ವೈ.) ಯ ವಿಶಾಲವಾದ ಆರೋಗ್ಯ ಖಾತ್ರಿ ವ್ಯಾಪ್ತಿಯಿಂದ ಜನರಿಗೆ ದೊಡ್ಡ ಉಳಿತಾಯವಿದೆ. ಇದರ ಪ್ರಾರಂಭದಿಂದಲೂ ೬.೫ ಕೋಟಿ ಉಚಿತ ಆಸ್ಪತ್ರೆಗಳ ಮೂಲಕ, ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಎ.ಬಿ.ಪಿ.ಎಂ.ಜೆ.ಎ.ವೈ.) ಅಡಿಯಲ್ಲಿ
ಜನರಿಗೆ ವೈಯ್ಯಕ್ತಿಕವಾಗಿ ವೈಯಕ್ತಿಕವಾಗಿ ನಿಧಿಯಾಚೆಗಿನ ವೆಚ್ಚ (ಒಒಪಿಇ) ದಲ್ಲಿ ೧,೩೫,೦೦೦ ಕೋಟಿ ರು.ಗಳ ಸಂಚಿತ ಉಳಿತಾಯವನ್ನು ನೀಡಿದೆ ಎಂದು ಅಂದಾಜಿಸಲಾಗಿದೆ.

ಕ್ಯಾನ್ಸರ್ ಸೇರಿದಂತೆ ಗಂಭೀರ ರೋಗ ಪರಿಸ್ಥಿತಿಗಳಿಗೆ ಶಸ್ತ್ರ ಚಿಕಿತ್ಸಾ ಮತ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಕಳೆದ ಹಲವಾರು ವರ್ಷಗಳಲ್ಲಿ ಫಲಾನುಭವಿಗಳು ಸ್ವತ್ತುಗಳನ್ನು ಅಡಮಾನ ಅಥವಾ ಮಾರಾಟ ಮಾಡಬೇಕಾಗಿಲ್ಲ. ರಾಷ್ಟ್ರೀಯ ಮಾದರಿ ಸಮೀಕ್ಷೆಯ (೨೦೧೭-೧೮) ಪ್ರಕಾರ
ಸರಕಾರಿ ಸೌಲಭ್ಯಗಳ ಬಳಕೆ, ವಿಶೇಷವಾಗಿ ಒಳರೋಗಿಗಳ ಆರೈಕೆ ಮತ್ತು ಸಾಂಸ್ಥಿಕ ಹೆರಿಗೆಗೆ ಹೆಚ್ಚಿದೆ. ಉಚಿತ ಆಂಬ್ಯುಲೆ ಸೇವೆಗಳು, ಬಲವರ್ಧಿತ ಸರಕಾರಿ ಮಾಧ್ಯಮಿಕ ಮತ್ತು ತೃತೀಯ ಸೇವೆಗಳು ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಡಯಾಲಿಸಿಸ್ ಕಾರ್ಯಕ್ರಮವು (ಇದರ ಅಡಿಯಲ್ಲಿ ೨೦೧೬ ರಿಂದ ೨.೫೯ ಕೋಟಿ ಉಚಿತ ಡಯಾಲಿಸಿಸ್ ಅವಧಿಗಳನ್ನು ನಡೆಸಲಾಗಿದೆ)ರೋಗಿಯ ಪಾಲಿಗೆ ವೈಯಕ್ತಿಕವಾಗಿ ನಿಧಿಯಾಚೆಗಿನ ವೆಚ್ಚ (ಒಒಪಿಇ) ಗಳನ್ನು ತಪ್ಪಿಸುವಲ್ಲಿ ಪ್ರಮುಖ ಕೊಡುಗೆಗಳಾಗಿವೆ.

ಡ್ರಗ್ಸ್ ಮತ್ತು ಡಯಾಗ್ನೋಸ್ಟಿಕ್ಸ್ ವೈಯಕ್ತಿಕವಾದ ವೆಚ್ಚದ / ಖರ್ಚಿನ ಪ್ರಮುಖ ಕಾರಣವಾಗಿದೆ. ಎಎಎಂಗಳು; ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳು ಸೇರಿದಂತೆ, ೧,೬೯,೦೦೦ ಆಯುಷ್ಮಾನ್ ಆರೋಗ್ಯ ಕೇಂದ್ರಗಳಲ್ಲಿ ಲಭ್ಯ ಸೌಲಭ್ಯಗಳಲ್ಲಿ ಉಚಿತ ಔಷಧಗಳು ಮತ್ತು ರೋಗನಿರ್ಣಯ ಸೇವೆಗಳನ್ನು ನಿರಂತರವಾಗಿ ಸುಧಾರಿಸುವುದು ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಉಳಿತಾಯಕ್ಕೆ ಕಾರಣವಾಯಿತು. ಉಪ ಕೇಂದ್ರಗಳು, ಎಎಎಂಗಳು ೧೦೫ ಔಷ
ಧಿಗಳನ್ನು ಮತ್ತು ೧೪ ರೋಗನಿರ್ಣಯ ಪರೀಕ್ಷೆಗಳನ್ನು ಉಚಿತವಾಗಿ ನೀಡುತ್ತವೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಎಎಎಂ ಗಳು ೧೭೨ ಔಷಽಗಳು ಮತ್ತು ೬೩ ರೋಗನಿರ್ಣಯ ಪರೀಕ್ಷೆಗಳನ್ನು ಉಚಿತವಾಗಿ ಒದಗಿಸಲು ಕಡ್ಡಾಯಗೊಳಿಸಲಾಗಿದೆ.

ಎಎಎಂಗಳಲ್ಲಿ ಕಡ್ಡಾಯಗೊಳಿಸಿದ ಕಾರಣದಿಂದಾಗಿ, ಸಾಂಕ್ರಾಮಿಕವಲ್ಲದ ರೋಗಗಳ (ಉದಾಹರಣೆಗೆ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಮೆಲ್ಲಿಟಸ್) ಆರಂಭಿಕ ತಪಾಸಣೆ ಮತ್ತು ಉಚಿತ ಚಿಕಿತ್ಸೆಯು ಆರೋಗ್ಯಕರ ಜೀವನವನ್ನು ಹೆಚ್ಚಿಸುತ್ತದೆ, ಗಂಭೀರತೆ ಮತ್ತು ದುರಂತವನ್ನು ತಪ್ಪಿಸುತ್ತದೆ. ರೋಗಿಗಳ ಪಾಲಿಗೆ, ಅವರ ಭವಿಷ್ಯದ ಗಂಭೀರ ಜೀವ-ಅಪಾಯಕಾರಿ ತೊಡಕುಗಳ ಚಿಕಿತ್ಸೆಗಾಗಿ ಖರ್ಚು ಪೂರಕ ಹಣಕಾಸು ಒದಗಿಸುತ್ತದೆ.

ಇಂದು, ೧೦,೦೦೦ ಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳ ಮೂಲಕ, ೧,೯೦೦ ಕ್ಕೂ ಹೆಚ್ಚು ಗುಣಮಟ್ಟದ ಜೆನೆರಿಕ್ ಔಷಧಗಳು ಮತ್ತು ಸುಮಾರು ೩೦೦ ಶಸಚಿಕಿತ್ಸಾ ವಸ್ತುಗಳನ್ನು ಕಡಿಮೆ ದರದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಅಪ್ರಾಯೋಗಿಕವಾಗಿ ಮಾರಾಟ ಮಾಡಲಾಗುತ್ತಿದೆ. ೨೦೧೪ ರಿಂದ ಈ ಯೋಜನೆ ಯಿಂದ ಗ್ರಾಹಕರಿಗೆ ೨೮,೦೦೦ ಕೋಟಿ ರು. ಉಳಿತಾಯವಾಗಿದೆ ಎಂದು ಅಂದಾಜುಗಳು ತೋರಿಸುತ್ತವೆ. ಅಂತೆಯೇ, ಅಭಿಧಮನಿಯ ಸ್ಟೆಂಟ್‌ಗಳು, ಮೂಳೆ ಮಂಡಿ ಇಂಪ್ಲಾಂಟ್‌ಗಳು, ಕ್ಯಾನ್ಸರ್ ಔಷಧಿಗಳು ಮತ್ತು ಇತರ ಅಗತ್ಯ ಔಷಧಿಗಳ ಬೆಲೆ ನಿಯಂತ್ರಣದಿಂದ ಜನರಿಗೆ ವಾರ್ಷಿಕ ೨೭,೦೦೦ ಕೋಟಿ ರು. ಉಳಿತಾಯವಾಗುತ್ತದೆ.

ಆರ್ಥಿಕ ಸಮೀಕ್ಷೆಗಳು ಸರಕಾರದಿಂದ ಆರೋಗ್ಯ-ಸಂಬಂಧಿತ ವೆಚ್ಚದಲ್ಲಿ ಹೆಚ್ಚುತ್ತಿರುವುದನ್ನು ವರದಿ ಮಾಡುತ್ತವೆ. ಜಿಡಿಪಿಯ ವರದಿಯಂತೆ, ಇದು ೨೦೨೦-೨೧ ರಲ್ಲಿ ೧.೬% ಮತ್ತು ೨೦೨೧-೨೨ ರಲ್ಲಿ ೨.೨% (ಪರಿಷ್ಕೃತ ಅಂದಾಜು) ಆಗಿದೆ. ಆರೋಗ್ಯ ಸೇವೆಗಳು ಮತ್ತು ಸರಕುಗಳ ಮೇಲಿನ ವೆಚ್ಚದ ಹೊರತಾಗಿ, ಆರ್ಥಿಕ ಸಮೀಕ್ಷೆಗಳ ಅಂದಾಜುಗಳು ಆರೋಗ್ಯದ ಪ್ರಮುಖ ಸಾಮಾಜಿಕ ನಿರ್ಧಾರಕಗಳಾದ ನೀರು ಸರಬರಾಜು ಮತ್ತು ನೈರ್ಮಲ್ಯದ
ಮೇಲೆ ಸಹ ಒಳಗೊಂಡಿರುತ್ತವೆ.

ಸುರಕ್ಷಿತ ಕುಡಿಯುವ ನೀರು ಮತ್ತು ನೈರ್ಮಲ್ಯವು ಗಮನಾರ್ಹವಾದ ಧನಾತ್ಮಕ ಆರೋಗ್ಯ ಪರಿಣಾಮಗಳನ್ನು ಹೊಂದಿದೆ. ೨೦೧೯ ರಲ್ಲಿ ಜಲ ಜೀವನ್ ಮಿಷನ್ ಪ್ರಾರಂಭವಾಗುವ ಸಮಯದಲ್ಲಿ ಕೇವಲ ೩.೨೩ ಕೋಟಿ (ಒಟ್ಟು ೧೯.೪ ಕೋಟಿ) ಗ್ರಾಮೀಣ ಕುಟುಂಬಗಳು (ಅಂದರೆ ೧೭%) ನಲ್ಲಿ ನೀರಿನ ಅವಕಾಶವನ್ನು ಹೊಂದಿದ್ದವು. ಈಗಿನ ಸಮಕಾಲೀನ ಮಾಹಿತಿಯಂತೆ, ೧೪.೭ ಕೋಟಿ ಗ್ರಾಮೀಣ ಕುಟುಂಬಗಳು (ಅಂದರೆ ೭೬%) ಮನೆಗೆ ನಲ್ಲಿನೀರಿನ ಸಂಪರ್ಕವನ್ನು ಹೊಂದಿವೆ. ಡಬ್ಲ್ಯುಎಚ್‌ಒ ವರದಿಯ ಪ್ರಕಾರ, ಒಮ್ಮೆ ಪ್ರತಿ ಗ್ರಾಮೀಣ ಮನೆಗಳಲ್ಲಿ ಟ್ಯಾಪ್ ನೀರು ಲಭ್ಯವಾದರೆ, ಅದು ೫ ವರ್ಷಗಳ
ಅವಧಿಯಲ್ಲಿ ಒಟ್ಟು ೪ ಲಕ್ಷ ಜೀವಗಳನ್ನು ಉಳಿಸುತ್ತದೆ. ಅಂತೆಯೇ, ಸ್ವಚ್ಛ ಭಾರತ್ ಮಿಷನ್ -ಗ್ರಾಮೀಣ್ , ಗ್ರಾಮೀಣ ಭಾರತವನ್ನು ಬಯಲು ಶೌಚ ಮುಕ್ತ (ಒಡಿಎಫ್) ಗೊಳಿಸಲು ಕಾರಣವಾಯಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿಸಿದೆ, ೨೦೧೪ – ಅಕ್ಟೋಬರ್ ೨೦೧೯ ರ ನಡುವೆ ಅತಿಸಾರ ಮತ್ತು ಪ್ರೋಟೀನ್-ಶಕ್ತಿಯ ಅಪೌಷ್ಟಿಕತೆಯಿಂದಾಗಿ ಉಂಟಾಗುವ ೩,೦೦,೦೦೦ ಕ್ಕೂ ಹೆಚ್ಚು ಮರಣಗಳನ್ನು ತಪ್ಪಿಸಲಾಗಿದೆ.

ಸಾರ್ವಜನಿಕ ಆರೋಗ್ಯ ವೆಚ್ಚದಲ್ಲಿ ಹೆಚ್ಚುತ್ತಿರುವ ಪ್ರವೃತ್ತಿಗಳು ಮತ್ತು ವೈಯಕ್ತಿಕವಾದ ವೆಚ್ಚದ / ಖರ್ಚಿನಲ್ಲಿ ಸ್ಥಿರವಾದ ಇಳಿಕೆಯು ಮತ್ತು ಆರೋಗ್ಯ ರಕ್ಷಣೆಯ ಸಾಮಾಜಿಕ ಭದ್ರತಾ ಯೋಜನೆಗಳ ಪಾಲು / ಷೇರುಗಳನ್ನು ಸರಕಾರವು ಹೆಚ್ಚಿಸುವುದರೊಂದಿಗೆ, ಹೆಚ್ಚು ಪ್ರಗತಿಪರ ಆರೋಗ್ಯ ವ್ಯವಸ್ಥೆಯತ್ತ ಧನಾತ್ಮಕ ನಡೆಯನ್ನು ಸೂಚಿಸುತ್ತದೆ. ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ವೈದ್ಯಕೀಯ ಕಾಲೇಜುಗಳು ಮತ್ತು ಹೊಸ ಎಐಐಎಂಎಸ್ ಗಳನ್ನು ರಚಿಸುವ ಗುರಿಯನ್ನು ಹೊಂದಿದೆ), ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಮೂಲಸೌಕರ್ಯ ಮಿಷನ್ (ನಿರ್ಣಾಯಕ ಆರೈಕೆ ಘಟಕಗಳನ್ನು
ರಚಿಸಲು ಇತ್ಯಾದಿ) ಮತ್ತು ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆ ಪ್ಯಾಕೇಜ್ (ಮೈ) ನಂತಹ ವಿವಿಧ ಯೋಜನೆಗಳ ಅಡಿಯಲ್ಲಿ ಮೂಲ ಸೌಕರ್ಯ ಬೆಂಬಲಕ್ಕಾಗಿ ನಿಧಿಗಳು ಮಕ್ಕಳ ಮತ್ತು ವಯಸ್ಕ ಐಸಿಯುಗಳು ಇತ್ಯಾದಿಗಳನ್ನು ಅಭಿವೃದ್ಧಿಪಡಿಸುವಲ್ಲಿ), ದೇಶದ ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುತ್ತಿವೆ. ಇದಲ್ಲದೆ, ೧೫ ನೇ ಹಣಕಾಸು ಆಯೋಗದಡಿ (೭೦,೦೦೦ ಕೋಟಿ ರು.) ಸ್ಥಳೀಯ ಸಂಸ್ಥೆಗಳಿಗೆ ಆರೋಗ್ಯ ಅನುದಾನವನ್ನು ಪ್ರಾಥಮಿಕ ಆರೋಗ್ಯ ವ್ಯವಸ್ಥೆಗೆ ಚುಚ್ಚಲಾಗುತ್ತಿದೆ.

ಈ ಬಂಡವಾಳ ವೆಚ್ಚಗಳು ದೇಶದಲ್ಲಿ ಆರೋಗ್ಯ ರಕ್ಷಣೆಯ ವ್ಯವಸ್ಥೆ/ ಸ್ವತ್ತುಗಳನ್ನು ಸೃಷ್ಟಿಸುವುದಲ್ಲದೆ, ದೀರ್ಘಾವಧಿಯಲ್ಲಿ ಸರಕಾರದ ಆದಾಯದ ವೆಚ್ಚವನ್ನು ಹೆಚ್ಚಿಸುತ್ತವೆ ಮತ್ತು ಕೇಂದ್ರ ಮತ್ತು ರಾಜ್ಯಗಳ ಒಟ್ಟಾರೆ ಸರಕಾರಿ ಆರೋಗ್ಯ ವೆಚ್ಚವನ್ನು ಮತ್ತಷ್ಟು ಹೆಚ್ಚಿಸುತ್ತವೆ. ಭಾರತದ ಆರೋಗ್ಯ ವ್ಯವಸ್ಥೆಯು ಸಾರ್ವಜನಿಕ ಆರೋಗ್ಯ ವ್ಯಾಪ್ತಿ (ಯುನಿವರ್ಸಲ್ ಹೆಲ್ತ ಕವರೇಜ್) ಅನ್ನು ಮುಂದಿನ ದಿನಗಳಲ್ಲಿ ವಾಸ್ತವಿಕವಾಗಿಸಲು ಹಾಗೂ ವಿಸ್ತರಿಸಲು, ಅದರ ಯೋಜನೆಗಳು ರಚನೆ-ಕಾರ್ಯನಿರ್ವಹಣೆ-ಪರಿವರ್ತನೆಯ ಹಾದಿಯಲ್ಲಿದೆ. ಈ ಪ್ರಯತ್ನದಲ್ಲಿ, ಆರೋಗ್ಯಕ್ಕಾಗಿ ಸರಕಾರದ
ಹಣಕಾಸು ಹೆಚ್ಚಿಸುವ ಇತ್ತೀಚಿನ ಪ್ರವೃತ್ತಿಗಳು, ಉಪಕ್ರಮಗಳು ಮತ್ತು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿವೆ ಹಾಗೂ ಜನರ ವೈಯ್ಯಕ್ತಿಕವಾಗಿ / ಜೇಬಿನ ವೆಚ್ಚ (ಒಒಪಿಇ) ಗಳ ಒತ್ತಡ ಕಡಿಮೆಯಾಗುತ್ತಿದೆ.

(ಲೇಖಕರು: ನಿತಿ ಆಯೋಗ್ (ಆರೋಗ್ಯ) ಸದಸ್ಯ)

Leave a Reply

Your email address will not be published. Required fields are marked *

error: Content is protected !!