Kareena Kapoor: ಬಿಕಿನಿ ತೊಟ್ಟು ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಕರೀನಾ! ಹಾಟ್ ಲುಕ್ಗೆ ಫ್ಯಾನ್ಸ್ ಫುಲ್ ಫಿದಾ
ಹಿಂದಿ ಚಿತ್ರರಂಗದ (Bollywood) ಪ್ರಸಿದ್ಧ ನಟಿ ಕರೀನಾ ಕಪೂರ್ ಖಾನ್ ಇತ್ತೀಚೆಗೆ ವೈಯಕ್ತಿಕ ವಿಚಾರ ವಾಗಿಯೂ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈ ಭಾರಿ ಗ್ರೀಸ್ನಲ್ಲಿ ವೇಕೇಶನ್ ಎಂಜಾಯ್ ಮಾಡುತ್ತಿರುವ ಕರೀನಾ, ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಬೋಲ್ಡ್ ಫೋಟೋಗಳನ್ನು ಹಂಚಿಕೊಂಡಿದ್ದು ನೆಟ್ಟಿಗರ ಹೃದಯ ಗೆದ್ದಿದ್ದಾರೆ.



ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಟಾಪ್ ನಟಿಯರಲ್ಲಿ ಒಬ್ಬರು. ಕರೀನಾ ಕಪೂರ್ ಇಂಡಸ್ಟ್ರಿಗೆ ಕಾಲಿಟ್ಟು 25 ವರ್ಷಕಳೆದಿದೆ. ಈಗಲೂ ಬಾಲಿವುಡ್ ನಲ್ಲಿ ಬಹು ಬೇಡಿಕೆ ನಟಿ ಎನಿಸಿಕೊಂಡಿದ್ದಾರೆ. ಸದ್ಯ ನಟಿ ವೆಕೇಶನ್ ಮೂಡ್ನಲ್ಲಿದ್ದು ಗ್ರೀಸ್ ಗೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ.

25 ವರ್ಷಗಳ ಹಿಂದೆ ನಿರ್ಮಾಪಕ ಜೆ. ಪಿ. ದತ್ತ ಅವರ ರೆಫ್ಯೂಜಿ ಸಿನಿಮಾದಲ್ಲಿ ಕರೀನಾ ಮೊದಲ ಬಾರಿಗೆ ನಟಿಸಿದ್ದರು. ಈ ಸಿನಿಮಾ 2000, ಜೂನ್ 30 ರಂದು ಬಿಡುಗಡೆಯಾಯಿತು. ಆ ಬಳಿಕ 3 ಇಡಿಯಟ್ಸ್ , ಜಬ್ ವೀ ಮೆಟ್, ಕಭಿ ಖುಷಿ ಕಭಿ ಗಮ್, ಓಂಕಾರ, ಬಜರಂಗಿ ಭಾಯಿ ಜಾನ್, ಇತ್ಯಾದಿ ಹಲವು ಹಿಟ್ ಸಿನಿಮಾದಲ್ಲಿ ಕಾಣಿಸಿಕೊಂಡರು.

ಕರೀನಾ ಕಪೂರ್ ಇದೀಗ ವೆಕೇಷನ್ ಮೂಡ್ನಲ್ಲಿದ್ದು ಸಖತ್ ಎಂಜಾಯ್ ಮಾಡಿದ್ದಾರೆ. ನಟಿ ಮೊನೊಕಿನಿ ಲುಕ್ ನಲ್ಲಿ ಮಿಂಚಿದ್ದು ಬಹಳಷ್ಟು ಬೋಲ್ಡ್ ಆಗಿ ಕಂಡಿದ್ದಾರೆ. ಸಮುದ್ರ ತೀರದ ಮುಂಭಾಗದಲ್ಲಿ ನಟಿ ಕರೀನಾ ಅವರು ಅತ್ಯಮೂಲ್ಯ ಕ್ಷಣಗಳನ್ನು ಕಳೆದ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟನೆಯ ಹೊರತಾಗಿ ಕರೀನಾ ಕಪೂರ್ ಫ್ಯಾಶನ್ ಸೆನ್ಸ್ಗೆ ಹೆಸರು ವಾಸಿಯಾಗಿದ್ದಾರೆ. ಅದ್ಬುತ ಫ್ಯಾಷನ್ ಆಯ್ಕೆ ಗಳಿಂದಲೂ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸುವ ನಟಿ ಹಾಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

ಕರೀನಾ ಖಾನ್ ನ್ಯೂಡ್ ಶೇಡ್ನ "ಟೋಟೆಮ್" ಬ್ರಾಂಡ್ನ ಮೋನೋಕಿನಿ ಧರಿಸಿದ್ದು ಅದು ಅವರ ಫಿಟ್ ಪಿಗರ್ ಅನ್ನು ಮತ್ತಷ್ಟು ಹೈಲೈಟ್ ಮಾಡಿದೆ. ಫೋಟೋಗಳಲ್ಲಿ ಅವರು ಬೀಚ್ನಲ್ಲಿ ಎಂಜಾಯ್ ಮಾಡುತ್ತಿರುವ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಕರೀನಾ ಯಾವಾಗಲೂ ತಮ್ಮ ಆಕರ್ಷಕ ಸ್ಟೈಲ್ ನಿಂದ ಹೆಚ್ಚು ಹೈಲೈಟ್ ಆಗುತ್ತಾರೆ. ಇನ್ನೊಂದು ಫೋಟೋದಲ್ಲಿ ಅವರು ಹಳದಿ ಬಿಕಿನಿಯಲ್ಲಿ ಸೆಕ್ಸಿ ಯಾಗಿ ಕಾಣಿಸಿಕೊಂಡಿದ್ದಾರೆ. 44 ವರ್ಷದ ಕರೀನಾ ‘ನೋ-ಮೇಕಪ್,' 'ನೋ-ಫಿಲ್ಟರ್’ ಲುಕ್ನಿಂದ ಸಹಜ ಸೌಂದರ್ಯವನ್ನು ತೋರಿಸಿದ್ದಾರೆ.

ಸಿನಿಮಾ ರಂಗದಲ್ಲಿ ಕರೀನಾ ಅವರಿಗೆ ಸಖತ್ ಬೇಡಿಕೆ ಇದೆ. ಅದ್ಭುತ ನಟನೆ ಮತ್ತು ಗ್ಲಾಮರ್ನಿಂದಾಗಿ ಅವರು ಅಭಿಮಾನಿಗಳನ್ನು ಸೆಳೆದುಕೊಂಡಿದ್ದಾರೆ.