Chikkaballapur News: ಕಾಯ್ದೆಗಳು ಕಾರ್ಮಿಕರ ಬದುಕನ್ನು ದುಸ್ತರಗೊಳಿಸುತ್ತದೆ: ಜಿ.ಸಿದ್ದಗಂಗಪ್ಪ
ಕಾರ್ಮಿಕರನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದು, ಪ್ರಶ್ನೆ ಮಾಡುವಂತೆ ಇಲ್ಲ, ಹೋರಾಟ ಮಾಡುವಂತಿಲ್ಲ, ಇಂತಹ ಕಾಯ್ದೆಗಳು ಕಾರ್ಮಿಕರ ಬದುಕನ್ನು ದುಸ್ತರಗೊಳಿಸುತ್ತದೆ ಎಂದ ಅವರು ಸರ್ಕಾರದ ಹೊಸ ಕಾರ್ಮಿಕ ನೀತಿಗಳು ಮುಷ್ಕರ ನಡೆಸುವ ಹಕ್ಕನ್ನು ಮೊಟಕುಗೊಳಿಸಿ, ದುಡಿತದ ಸಮಯವನ್ನು ಹೆಚ್ಚಿಸುವುದರ ಜೊತೆಗೆ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸಿವೆ.


ಗೌರಿಬಿದನೂರು: ಕೇಂದ್ರದ ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ದೇಶದ್ಯಾಂತ ಇಂದು ಮೂವತ್ತು ಕೋಟಿಗೂ ಹೆಚ್ಚು ಕಾರ್ಮಿಕರು ಬೀದಿಗಳಿದು ಮುಷ್ಕರ ಮಾಡುತ್ತಿದ್ದಾರೆ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಕಾಮ್ರೇಡ್ ಜಿ.ಸಿದ್ದಗಂಗಪ್ಪ ತಿಳಿಸಿದರು.
ಅವರು ಬುಧವಾರ ಅಂಬೇಡ್ಕರ್ ವೃತ್ತದಲ್ಲಿ ಹಮ್ಮಿಕೊಂಡಿದ್ದ, ಮುಷ್ಕರದಲ್ಲಿ ಭಾಗವಹಿಸಿ ಮಾತನಾಡಿ, ಪ್ರಧಾನಿ ಮೋದಿ ಅವರು ಕಾರ್ಮಿಕರ ಮೇಲೆ ಮಾರಾಣಾಂತಿಕ ಕಾಯ್ದೆಗಳನ್ನು ತರಲು ಹೊರಟಿದ್ದಾರೆ, ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿ ಹಾಗೂ ಕಾರ್ಪೋರೇಟ್ ಪರ ನೀತಿ ಅನುಸರಿಸುತ್ತಿರುವುದರಿಂದ ದೇಶದ ಕಾರ್ಮಿಕರಿಗೆ ಕೆಲಸದ ಭದ್ರತೆ, ವೇತನ ಭದ್ರತೆ ಇಲ್ಲದಂ ತಾಗುತ್ತಿದೆ.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಅವರು ರೂಪಿಸಿರುವ ಕಾಯ್ದೆಗಳ ಪ್ರಕಾರ ಕಾರ್ಮಿಕರನ್ನು ಯಾವಾಗ ಬೇಕಾದರೂ ಕೆಲಸದಿಂದ ತೆಗೆದು ಹಾಕಬಹುದು, ಪ್ರಶ್ನೆ ಮಾಡುವಂತೆ ಇಲ್ಲ, ಹೋರಾಟ ಮಾಡುವಂತಿಲ್ಲ, ಇಂತಹ ಕಾಯ್ದೆ ಗಳು ಕಾರ್ಮಿಕರ ಬದುಕನ್ನು ದುಸ್ತರಗೊಳಿಸುತ್ತದೆ ಎಂದ ಅವರು ಸರ್ಕಾರದ ಹೊಸ ಕಾರ್ಮಿಕ ನೀತಿಗಳು ಮುಷ್ಕರ ನಡೆಸುವ ಹಕ್ಕನ್ನು ಮೊಟಕುಗೊಳಿಸಿ, ದುಡಿತದ ಸಮಯವನ್ನು ಹೆಚ್ಚಿಸುವು ದರ ಜೊತೆಗೆ ಕಾರ್ಮಿಕ ಸಂಘಟನೆಗಳನ್ನು ದುರ್ಬಲ ಗೊಳಿಸಿವೆ. ಇದರ ವಿರುದ್ದ ಇಂದು ಕಾರ್ಮಿಕರು ದೇಶದ್ಯಾಂತ ಸಾರ್ವತಿಕ ಮುಷ್ಕರ ನಡೆಸುತ್ತಿದ್ದಾರೆ ಎಂದ ಅವರು, ತಾಲ್ಲೂಕಿನಲ್ಲಿ ರೈತರ ಮತ್ತು ಕಾರ್ಮಿಕ ಸಮಸ್ಯೆ ಹೇಳ ತೀರದಂತಾಗಿದೆ.
ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರ ರೈತರ ಜಮೀನನ್ನು ಕಬಳಿಸಿ, ರಿಯಲ್ ಎಸ್ಟೇಟ್ ದಂಧೆಗೆ ಎಡೆ ಮಾಡಿಕೊಟ್ಟಿದೆ, ಇದರ ವಿರುದ್ಧ ಉಗ್ರ ಹೋರಾಟ ಮಾಡುತ್ತೆವೆ ಎಂದು ಅವರು ಎಚ್ಚರಿಕೆ ನೀಡಿದರು.
ಮುಷ್ಕರದಲ್ಲಿ ಅಶ್ವಥ್ಥಪ್ಪ, ಅನೂಡಿ ನಾಗಾರಾಜ್, ಬಾಬುರೆಡ್ಡಿ, ವಾಟದಹೊಸಹಳ್ಳಿ ನಾಗರಾಜ್ ಅಂಗನವಾಡಿ ಜಿಲ್ಲಾಧ್ಯಕ್ಷೆ ವೆಂಕಟಲಕ್ಷಮ್ಮ, ರಾಧಮ್ಮ ಜಯಮಂಗಲ, ರಾಜಮ್ಮ ನರಸಮ್ಮ ಮುಂತಾದವರು