ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nayanthara: ಡಿವೋರ್ಸ್‌ ತಗೋತಿದ್ದಾರಾ ನಯನತಾರ? ಈ ಬಗ್ಗೆ ನಟಿ ಹೇಳಿದ್ದೇನು?

ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಜೋಡಿಗೆ ಸಾಕಷ್ಟು ಪ್ಯಾನ್ ಫಾಲೊ ವರ್ಸ್ ಕೂಡ ಇದೆ. ಆದರೆ ಇಬ್ಬರ ನಡುವೆ ಸಾಕಷ್ಟು ವಿಚಾರಕ್ಕೆ ವೈಮನಸ್ಸು ಮೂಡಿದ್ದು ಇಬ್ಬರು ಕೂಡ ಪರಸ್ಪರ ದೂರಾಗುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ನಟಿ ನಯನತಾರ ಅವರು ತಮ್ಮ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಡಿವೋರ್ಸ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ವಿಘ್ನೇಶ್‌ ಶಿವನ್‌ಗೆ ನಯನತಾರ ಡಿವೋರ್ಸ್‌? ನಟಿ ಹೇಳಿದ್ದೇನು?

Profile Pushpa Kumari Jul 11, 2025 6:30 PM

ನವದೆಹಲಿ: ಬಹುಭಾಷಾ ನಟಿ ನಯನತಾರ (Nayanthara) ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರಾದ ನಟಿ ನಯನತಾರ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರ ಜೋಡಿಗೆ ಸಾಕಷ್ಟು ಪ್ಯಾನ್ ಫಾಲೊವರ್ಸ್ ಕೂಡ ಇದೆ.. ಆದರೆ ಇಬ್ಬರ ನಡುವೆ ಸಾಕಷ್ಟು ವಿಚಾರಕ್ಕೆ ವೈಮನಸ್ಸು ಮೂಡಿದ್ದು ಇಬ್ಬರು ಕೂಡ ಪರಸ್ಪರ ದೂರಾಗುತ್ತಿದ್ದಾರೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೆ ನಟಿ ನಯನತಾರ ಅವರು ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ಡಿವೋರ್ಸ್ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ನಟಿ ನಯನತಾರ ಅವರು ಸೋಶಿಯಲ್ ಮಿಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿದ್ದು ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಕೂಡ ಹೊಂದಿದ್ದಾರೆ. ಅವರು ತಮ್ಮ ಪತಿ ವಿಘ್ನೇಶ್ ಹಾಗೂ ಮುದ್ದು ಮಕ್ಕಳ ಜೊತೆಗೆ ಫ್ಯಾಮಿಲಿ ಟ್ರಿಪ್, ವಿದೇಶಿ ಪ್ರವಾಸ ಇತರ ಫೋಟೊವನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ತಮ್ಮ ಪತಿ ವಿಘ್ನೇಶ್ ಅವರೊಂದಿಗಿನ ಫೋಟೊವನ್ನು ಶೇರ್ ಮಾಡಿಕೊಂಡಿದ್ದು ಅವರಿಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ ಚೆನ್ನಾಗಿಯೇ ಇದ್ದಾರೆ ಎಂಬುದನ್ನು ಈ ಮೂಲಕ ಸ್ಪಷ್ಟೀಕರಿಸಿದ್ದಾರೆ.

Nayanthara 2

ವಿಘ್ನೇಶ್ ಶಿವನ್ ಜೊತೆ ನಟಿ ನಯನತಾರ ಅವರು ಫೋಟೋಗೆ ಪೋಸ್ ನೀಡಿದ್ದು ವಿಶೇಷ ಕ್ಯಾಪ್ಶನ್ ನನ್ನು ಕೂಡ ನೀಡಿದ್ದಾರೆ. ನಮ್ಮ ಬಗ್ಗೆ ಇತರರು ಸುಳ್ಳು ಸುದ್ದಿಗಳನ್ನು ಹಬ್ಬಿದಾಗ ನಮ್ಮ ಪ್ರತಿಕ್ರಿಯೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗೆ, ದಂಪತಿಗಳು ಬೇರ್ಪಡುತ್ತಿದ್ದಾರೆ ಎಂಬ ಗಾಸಿಪ್ ಹರಿದಾಡಿದ್ದ ಕಾರಣಕ್ಕೆ ಅವೆಲ್ಲ ಸುಳ್ಳು ಎಂಬರ್ಥದಲ್ಲಿ ನಟಿ ನಯನತಾರ ಅವರು ಈ ಫೋಟೊ ಹಂಚಿಕೊಂಡು ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನು ಓದಿ:Life Today Movie: ಕನ್ನಡದ ಲೈಫ್ ಟುಡೇ ಸಿನಿಮಾದ ವಿಶೇಷ ಹಾಡಿಗೆ ದನಿಯಾದ ತಮಿಳಿನ‌ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಜಿ.ವಿ ಪ್ರಕಾಶ್

ಸದ್ಯ ನಟಿ ನಯನತಾರಾ ಅವರು ಸಾಲು ಸಾಲು ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರಿಕ್ಷಿತ ಟಾಕ್ಸಿಕ್ ಸಿನಿಮಾದಲ್ಲಿ ನಟಿ ನಯನ ತಾರ ಅವರು ವಿಭಿನ್ನಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದರ ಜೊತೆಗೆ ಲಯನ್, ಚಿರು157, ನಯನ ತಾರ81, ಡಿಯರ್ ಸ್ಟೂಡೆಂಟ್ಸ್ ಸೇರಿದಂತೆ ಅನೇಕ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿ ಸಲಿದ್ದಾರೆ. ನಟ ಚಿರಂಜೀವಿ ಅವರೊಂದಿಗೆ ಮೆಗಾ 157 ಸಿನಿಮಾದಲ್ಲಿ ಕೂಡ ಅಭಿನಯಿಸಲಿದ್ದಾರೆ.

ಈಗಾಗಲೇ ಚಿತ್ರದ ಚಿತ್ರೀಕರಣವೂ ಪ್ರಾರಂಭವಾಗಿದೆ.‌ ಚಿರಂಜೀವಿ ಅವರೊಂದಿಗೆ ನಟಿ ನಯನತಾರ ಅವರು ಈ ಹಿಂದೆ ಸೈರಾ ನರಸಿಂಹ ರೆಡ್ಡಿ ಸಿನಿಮಾ ಮಾಡಿದ್ದು ಈ ಸಿನಿಮಾ 2019 ತೆರೆ ಕಂಡಿತ್ತು. ಬಳಿಕ 2022ರಲ್ಲಿ ಗಾಡ್‌ಫಾದರ್ ಸಿನಿಮಾ ಕೂಡ ಮಾಡಿದ್ದು ಇವೆರಡು ಸಿನಿಮಾ ಬಹುದೊಡ್ಡ ಮಟ್ಟದ ಯಶಸ್ಸು ನೀಡಿರಲಿಲ್ಲ. ಇದೀಗ ಈ ಜೋಡಿ ಮತ್ತೆ ಮೆಗಾ157 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದು ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ.