Kartik Aaryan: ಫೋಟೊಶೂಟ್ನಲ್ಲಿ ಹ್ಯಾಂಡ್ಸಮ್ ಆಗಿ ಮಿಂಚಿದ ನಟ ಕಾರ್ತಿಕ್ ಆರ್ಯನ್
ಬಾಲಿವುಡ್ನ ರೊಮ್ಯಾಂಟಿಕ್ ಕಾಮಿಡಿ ‘ತು ಮೇರಿ ಮೈನ್ ತೇರಾ ಮೈನ್ ತೆರಾ ತು ಮೇರಿ' ಸಿನಿಮಾದ ಶೂಟಿಂಗ್ ನಡುವಿನ ಬ್ರೇಕ್ ವೇಳೆ ನಟ ಕಾರ್ತಿಕ್ ಆರ್ಯನ್ ಹಲವು ಫೋಟೊಗಳನ್ನು ಕ್ಲಿಕ್ಕಿಸಿದ್ದು ಅದನ್ನು ಹಂಚಿಕೊಂಡಿದ್ದಾರೆ. ರಾಜಸ್ಥಾನದ ನವಾಲ್ಗಢ್ನಲ್ಲಿ ಕ್ಲಿಕ್ಕಿಸಿರುವ ಈ ಫೋಟೊಗಳು ಈಗಾಗಲೇ ನೆಟ್ಟಿಗರ ಗಮನ ಸೆಳೆದಿವೆ.

Kartik Aaryan


ಕಾರ್ತಿಕ್ ಆರ್ಯನ್ ಬಾಲಿವುಡ್ನ ಬ್ಯುಸಿ ಹೀರೋಗಳಲ್ಲಿ ಒಬ್ಬರು. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಇದೀಗ ಕಾರ್ತಿಕ್ ಆರ್ಯನ್ 'ತು ಮೇರಿ ಮೈನ್ ತೇರಾ ಮೈನ್ ತೆರಾ ತು ಮೇರಿ' ಚಿತ್ರದ ಶೂಟಿಂ ನಲ್ಲಿದ್ದು ಈ ಸಂದರ್ಭದಲ್ಲಿ ತೆಗೆದ ಕೆಲವು ಫೋಟೊ ಶೇರ್ ಮಾಡಿದ್ದಾರೆ.

ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಅವರ ಹಾರರ್ ಚಿತ್ರ 'ಭೂಲ್ ಭುಲೈಯಾ 2' ಯಶಸ್ಸಿನ ಬಳಿಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ʼಪ್ಯಾರ್ ಕಾ ಪಂಚನಾಮ 2ʼ, ʼಸೋನು ಕೆ ಟಿಟು ಕಿ ಸ್ವೀಟಿʼ, ʼಲುಕಾ ಚುಪ್ಪಿʼ, ʼಪತಿ ಪತ್ನಿ ಔರ್ ವೋʼನಂತಹ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಕಾರ್ತಿಕ್ ಕೆಲವು ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ. ಇವನ್ನು ವಾಲ್ಗಢ್ನ ಸುಂದರ ಸ್ಥಳದಲ್ಲಿ ಕ್ಲಿಕ್ ಮಾಡಲಾಗಿದೆ. ನಟ ಪಿಂಕ್ ಫಾರ್ಮಲ್ ಶರ್ಟ್ ಮತ್ತು ಸ್ಟೈಲಿಶ್ ಜೀನ್ಸ್ ಧರಿಸಿ ಸಖತ್ ಯಂಗ್ ಬಾಯ್ ಆಗಿ ಕಾಣಿಸಿಕೊಂಡಿದ್ದಾರೆ.

'ಭೂಲ್ ಭುಲೈಯಾ 2` ಯಶಸ್ಸಿನ ನಂತರ, ಕಾರ್ತಿಕ್ ಶೀಘ್ರದಲ್ಲೇ `ಆಶಿಕಿ`3 ಮತ್ತು ‘ತು ಮೇರಿ ಮೈನ್ ತೇರಾʼದಂತಹ ವಿವಿಧ ಸೀಕ್ವೆಲ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ತುದಿಗಾಲಿನಲ್ಲಿಕಾಯುತ್ತಿದ್ದಾರೆ.

ಕಾರ್ತಿಕ್ ಆರ್ಯನ್ ನಟಿಸಿರುವ ʼತು ಮೇರಿ ಮೈನ್ ತೇರಾ, ಮೈನ್ ತೇರಾ ತು ಮೇರಿʼ ಚಿತ್ರವು 2026ರ ಪ್ರೇಮಿಗಳ ದಿನದಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಧರ್ಮ ಪ್ರೊಡಕ್ಷನ್ಸ್ ಮತ್ತು ನಮಃ ಪಿಕ್ಚರ್ಸ್ ನಿರ್ಮಿಸುತ್ತಿವೆ. ಸಮೀರ್ ವಿದ್ವಾನ್ಸ್ ನಿರ್ದೇಶಿಸುತ್ತಿರುವ ಈ ಚಿತ್ರವು ರೋಮ್ಯಾಂಟಿಕ್ ಕಾಮಿಡಿ ಕಥಾ ಹಂದರವನ್ನು ಒಳಗೊಂಡಿದೆ.