Savitri Jindal: ಸಾವಿತ್ರಿ ಜಿಂದಾಲ್ ದೇಶದ ಶ್ರೀಮಂತ ಮಹಿಳೆ; ಇವರ ಆಸ್ತಿ ಮೌಲ್ಯ ಎಷ್ಟು?
Forbes Billionaire List 2025: ಫೋರ್ಬ್ಸ್ ಬಿಲಿಯನೇರ್ ಪಟ್ಟಿ 2025 ರಿಲೀಸ್ ಆಗಿದ್ದು, ಹರಿಯಾಣದ ಶಾಸಕಿ, ಉದ್ಯಮಿ ಸಾವಿತ್ರಿ ಜಿಂದಾಲ್ ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇವರು 35.5 ಬಿಲಿಯನ್ ಡಾಲರ್ (30,37,11,37,50,000 ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ವಿಶೇಷ ಎಂದರೆ ಟಾಪ್ 10 ಮಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಸಾವಿತ್ರಿ ಜಿಂದಾಲ್.

ಸಾವಿತ್ರಿ ಜಿಂದಾಲ್.

ಹೊಸದಿಲ್ಲಿ: ಫೋರ್ಬ್ಸ್ ಬಿಲಿಯನೇರ್ ಪಟ್ಟಿ 2025 (Forbes Billionaire List 2025) ರಿಲೀಸ್ ಆಗಿದ್ದು, ಹರಿಯಾಣದ ಶಾಸಕಿ, ಉದ್ಯಮಿ ಸಾವಿತ್ರಿ ಜಿಂದಾಲ್ (Savitri Jindal) ಭಾರತದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ಇವರು 35.5 ಬಿಲಿಯನ್ ಡಾಲರ್ (30,37,11,37,50,000 ರೂ.) ಮೌಲ್ಯದ ಆಸ್ತಿ ಹೊಂದಿದ್ದಾರೆ. ಆ ಮೂಲಕ ಭಾರತದ ಶ್ರೀಮಂತರ ಪೈಕಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮೊದಲೆರಡು ಸ್ಥಾನದಲ್ಲಿದ್ದಾರೆ. ವಿಶೇಷ ಎಂದರೆ ಟಾಪ್ 10 ಮಿಲಿಯನೇರ್ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಮಹಿಳೆ ಸಾವಿತ್ರಿ ಜಿಂದಾಲ್.
ಜಿಂದಾಲ್ ಗ್ರೂಪ್ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ಅವರ ಸಾಮ್ರಾಜ್ಯ ಉಕ್ಕು, ವಿದ್ಯುತ್, ಸಿಮೆಂಟ್ ಮತ್ತು ಮೂಲಸೌಕರ್ಯ ಕ್ಷೇತ್ರಗಳಿಗೂ ವ್ಯಾಪಿಸಿದೆ. ಈ ಕಂಪನಿಯನ್ನು ಅವರ ಪತಿ 1970 ದಿ. ಓಂ ಪ್ರಕಾಶ್ ಜಿಂದಾಲ್ ಸ್ಥಾಪಿಸಿದ್ದಾರೆ. 2005ರಲ್ಲಿ ಓಂ ಪ್ರಕಾಶ್ ಜಿಂದಾಲ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿದರು. ಪತಿಯ ಮರಣದ ನಂತರ ಕಂಪನಿಯ ಜವಾಬ್ದಾರಿಯನ್ನು ಸಾವಿತ್ರಿ ವಹಿಸಿಕೊಂಡಿದ್ದಾರೆ.
Savitri Jindal Is India's Richest Woman With Over $35.5 Billion Net Worth ✅ Read More: https://t.co/qPWZLM7YE0 pic.twitter.com/anPqJb5Jg2
— Abhinand PS (@abhinandps) April 2, 2025
ಈ ಸುದ್ದಿಯನ್ನೂ ಓದಿ: Tea Export: ಚಹಾ ರಫ್ತು- ವಿಶ್ವದಲ್ಲೇ ಮೂರನೇ ಸ್ಥಾನಕ್ಕೇರಿದ ಭಾರತ
ಭಾರತದ ಟಾಪ್ 10 ಬಿಲಿಯನೇರ್‌ಗಳು
ಮುಖೇಶ್ ಅಂಬಾನಿ - $92.5 ಬಿಲಿಯನ್ (ರಿಲಯನ್ಸ್ ಇಂಡಸ್ಟ್ರೀಸ್)
ಗೌತಮ್ ಅದಾನಿ - $56.3 ಬಿಲಿಯನ್ (ಅದಾನಿ ಗ್ರೂಪ್)
ಸಾವಿತ್ರಿ ಜಿಂದಾಲ್ - $35.5 ಬಿಲಿಯನ್ (ಒಪಿ ಜಿಂದಾಲ್ ಗ್ರೂಪ್)
ಶಿವ ನಾದರ್ - $34.5 ಬಿಲಿಯನ್ (ಎಚ್‌ಸಿಎಲ್ ಟೆಕ್ನಾಲಜೀಸ್)
ದಿಲೀಪ್ ಶಾಂಘ್ವಿ - $24.9 ಬಿಲಿಯನ್ (ಸನ್ ಫಾರ್ಮಾಸ್ಯುಟಿಕಲ್ಸ್)
ಸೈರಸ್ ಪೂನವಲ್ಲ - $23.1 ಬಿಲಿಯನ್ (ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ)
ಕುಮಾರ್ ಬಿರ್ಲಾ - $20.9 ಬಿಲಿಯನ್ (ಆದಿತ್ಯ ಬಿರ್ಲಾ ಗ್ರೂಪ್)
ಲಕ್ಷ್ಮಿ ಮಿತ್ತಲ್ - $19.2 ಬಿಲಿಯನ್ (ಆರ್ಸೆಲರ್ ಮಿತ್ತಲ್)
ರಾಧಾಕಿಶನ್ ದಮಾನಿ - $15.4 ಬಿಲಿಯನ್ (ಡಿಮಾರ್ಟ್, ಇನ್ವೆಸ್ಟ್‌ಮೆಂಟ್ಸ್)
ಕುಶಾಲ್ ಪಾಲ್ ಸಿಂಗ್ - $14.5 ಬಿಲಿಯನ್ (ರಿಯಲ್ ಎಸ್ಟೇಟ್)
ಈ ವರ್ಷ ಭಾರತದಲ್ಲಿ ಐವರ ಹೊಸ ಶತಕೋಟ್ಯಾಧಿಪತಿಗಳು (ಬಿಲಿಯನೇರ್) ಉದಯಿಸಿದ್ದು, ಒಟ್ಟು ಸಂಖ್ಯೆ 205ಕ್ಕೆ ತಲುಪಿದೆ. ಭಾರತೀಯ ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು $941 ಬಿಲಿಯನ್ ಆಗಿದ್ದು, ಕರೆನ್ಸಿ ಏರಿಳಿತಗಳು ಮತ್ತು ಷೇರು ಕುಸಿತದಿಂದಾಗಿ ಕಳೆದ ವರ್ಷದ $954 ಬಿಲಿಯನ್‌ನಿಂದ ಸ್ವಲ್ಪ ಕಡಿಮೆಯಾಗಿದೆ.
ರಾಜಕೀಯದಲ್ಲಿಯೂ ಪ್ರಭಾವ
75 ವರ್ಷದ ಸಾವಿತ್ರಿ ಜಿಂದಾಲ್ 1950ರಲ್ಲಿ ಅಸ್ಸಾಂನ ತಿನ್ಸುಕಿಯಾದಲ್ಲಿ ಜನಿಸಿದರು. ಸಾವಿತ್ರಿ ಅವರ ಪತಿ ಒ.ಪಿ.ಜಿಂದಾಲ್ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದರು. 2004ರಲ್ಲಿ ಹರಿಯಾಣದ ಹಿಸಾರ್ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ನಿಂದ ಗೆದ್ದು ಒ.ಪಿ.ಜಿಂದಾಲ್ ಅವರು ಬೂಪಿಂದರ್ ಹೂಡಾ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರ ಮರಣದ ನಂತರ ರಾಜಕೀಯಕ್ಕೆ ಬಂದ ಸಾವಿತ್ರಿ ಜಿಂದಾಲ್ ಹಿಸಾರ್ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಗೆದ್ದು 2014ರವರೆಗೂ ಸಚಿವೆಯಾಗಿದ್ದರು. 2014ರಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಸೋತರು. 2024ರಲ್ಲಿ ಅವರು ಬಿಜೆಪಿ ಸೇರ್ಪಡೆಗೊಂಡರು. ಅದೇ ವರ್ಷ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಹಿಸಾರ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಗಳಿಸಿದ್ದಾರೆ.