ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿದ್ಯಾರ್ಥಿನಿಯರನ್ನು ಅಮಾನುಷವಾಗಿ ಥಳಿಸಿದ ಪ್ರಿನ್ಸಿಪಾಲ್‌; ಶಾಕಿಂಗ್‌ ವಿಡಿಯೊ ವೈರಲ್‌

ತೆಲಂಗಾಣದ ವಿಕಾರಾಬಾದ್‍ನ ಕೊಟ್ಟಗುಡೆಮ್ ಸಮಾಜ ಕಲ್ಯಾಣ ಬಾಲಕಿಯರ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಶಾಲಾ ಪ್ರಾಂಶುಪಾಲೆ ಶೈಲಲತಾ ಅನುಮತಿ ಇಲ್ಲದೆ ಶಾಲಾ ಆವರಣದಿಂದ ಹೊರಬಂದ ಮೂವರು ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ಆಕ್ರೋಶಕ್ಕೆ ಕಾರಣವಾಗಿದೆ.

ವಿದ್ಯಾರ್ಥಿನಿಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಪ್ರಿನ್ಸಿಪಾಲ್‌; ಕಾರಣವೇನು?

Profile pavithra Apr 2, 2025 3:39 PM

ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೆಚ್ಚು ಅಪರಾಧಗಳಲ್ಲಿ ತೊಡಗಿಕೊಳ್ಳುತ್ತಿದ್ದರಿಂದ ಶಾಲಾ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಹೆಚ್ಚು ನಿಗಾವಹಿಸುತ್ತಾರೆ. ಹಾಗೇ ಅನುಮತಿಯಿಲ್ಲದೆ ಶಾಲಾ ಆವರಣದಿಂದ ಹೊರಹೋಗದಂತೆ ನಿರ್ಬಂಧ ಹೇರುತ್ತಾರೆ. ಹೀಗಿರುವಾಗ ತೆಲಂಗಾಣದ ವಿಕಾರಾಬಾದ್‍ನಲ್ಲಿ ಶಾಲಾ ಪ್ರಾಂಶುಪಾಲರೊಬ್ಬರು ಅನುಮತಿ ಇಲ್ಲದೆ ಶಾಲಾ ಆವರಣದಿಂದ ಹೊರಬಂದ ಮೂವರು ವಿದ್ಯಾರ್ಥಿನಿಯರಿಗೆ ಹಿಗ್ಗಾಮಗ್ಗಾ ಥಳಿಸಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿ ಆಕ್ರೋಶಕ್ಕೆ ಕಾರಣವಾಗಿದೆ. ತೆಲಂಗಾಣ ಸ್ಪೀಕರ್ ಗಡ್ಡಂ ಪ್ರಸಾದ್ ಅವರು ಪ್ರಾಂಶುಪಾಲರಾದ ಶೈಲಲತಾ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದಾರಂತೆ.

ವೈರಲ್ ಆದ ವಿಡಿಯೊದಲ್ಲಿ ಪ್ರಿನ್ಸಿಪಾಲ್‌ ಶೈಲಲತಾ ಕ್ಲಾಸ್‍ ರೂಂನಲ್ಲಿ ತಪ್ಪು ಮಾಡಿದ ವಿದ್ಯಾರ್ಥಿನಿಯರನ್ನು ತನ್ನ ಮುಂದೆ ನಿಲ್ಲಿಸಿಕೊಂಡಿದ್ದು, ಆಗ ವಿದ್ಯಾರ್ಥಿನಿಯೊಬ್ಬಳು ಕೈ ಮುಗಿದು ಕ್ಷಮೆಯಾಚಿಸಿದ್ದಾಳೆ. ಆದರೆ ಪ್ರಿನ್ಸಿಪಾಲ್‌ ಪುಸ್ತಕವನ್ನು ಮಡಚಿಕೊಂಡು ಅದರಿಂದ ಅವರಿಗೆ ಕಪಾಳಮೋಕ್ಷ ಮಾಡಿದ್ದಾಳೆ. ನಂತರ ಅವರನ್ನು ತರಾಟೆಗೆ ತೆಗೆದುಕೊಂಡು ಮತ್ತೆ ಕೈಗಳಿಂದ ಅವರಿಗೆ ಕಪಾಳಮೋಕ್ಷ ಮಾಡಿದ್ದಾಳೆ.

ವಿದ್ಯಾರ್ಥಿನಿಯರಿಗೆ ಪ್ರಿನ್ಸಿಪಾಲ್‌ ಥಳಿಸಿದ ವಿಡಿಯೊ ಇಲ್ಲಿದೆ ನೋಡಿ...



ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ವಿಕಾರಾಬಾದ್‍ನ ಕೊಟ್ಟಗುಡೆಮ್ ಸಮಾಜ ಕಲ್ಯಾಣ ಬಾಲಕಿಯರ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಶಾಲೆಯಲ್ಲಿ ಪ್ರಾಂಶುಪಾಲರು ಅನುಮತಿಯಿಲ್ಲದೇ ಯಾವುದೇ ವಿದ್ಯಾರ್ಥಿ ಶಾಲಾ ಆವರಣದಿಂದ ಹೊರಹೋಗದಂತೆ ನಿಯಮ ವಿಧಿಸಲಾಗಿತ್ತು. ಆದರೂ ಈ ಮೂರು ವಿದ್ಯಾರ್ಥಿನಿಯರು ಪ್ರಿನ್ಸಿಪಾಲ್‌ ಅನುಮತಿಯಿಲ್ಲದೆ ಶಾಲಾ ಆವರಣದಿಂದ ಹೊರಹೋಗಲು ಪ್ರಯತ್ನಿಸಿದ್ದಾರೆ. ಹಾಗಾಗಿ ಆಕೆ ಇವರನ್ನು ಶಿಕ್ಷಿಸಿದ್ದಾಳಂತೆ.

ಪ್ರಿನ್ಸಿಪಾಲ್‌ ಈ ವೇಳೆ ಅವಹೇಳನಕಾರಿ ಭಾಷೆಯನ್ನು ಬಳಸಿದ್ದು, ಒಬ್ಬ ಹುಡುಗಿಯನ್ನು "ಕಳ್ಳಿ" ಎಂದು ಕರೆದಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಒಬ್ಬ ಹುಡುಗಿ ತನ್ನ ಪೋಷಕರಿಗೆ ತಿಳಿಸಿದ್ದು, ಅದು ತಿಳಿದು ಪ್ರಿನ್ಸಿಪಾಲ್‌ ಆಕೆಯನ್ನು ಮತ್ತಷ್ಟು ಅವಮಾನಿಸಿದ್ದಾಳೆ ಎಂದು ಆರೋಪಿಸಲಾಗಿದೆ.

ಪ್ರಿನ್ಸಿಪಾಲ್‌ ವಿದ್ಯಾರ್ಥಿಗಳನ್ನು ಅವಮಾನಿಸುವುದು ಅಥವಾ ದೈಹಿಕ ಹಲ್ಲೆ ನಡೆಸಿದ್ದು ಇದೇ ಮೊದಲಲ್ಲ. ಈ ಶಿಕ್ಷಣ ಸಂಸ್ಥೆ ಕಳೆದ ತಿಂಗಳು ಆತ್ಮಹತ್ಯೆ ಪ್ರಕರಣಕ್ಕಾಗಿ ಭಾರೀ ಸುದ್ದಿಯಾಗಿತ್ತು. ವಿದ್ಯಾರ್ಥಿನಿಯೊಬ್ಬಳು ಈ ಶಾಲಾ ಕಟ್ಟಡದ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದಕ್ಕೆ ಪ್ರಾಂಶುಪಾಲೆಯ ಅಸಭ್ಯ ವರ್ತನೆಯೇ ಕಾರಣವಾಗಿರಬಹುದು ಎಂದು ಆರೋಪಿಸಲಾಗಿದೆ. ಈ ಸಂದರ್ಭದಲ್ಲಿ ತೆಲಂಗಾಣ ಸ್ಪೀಕರ್ ಗಡ್ಡಂ ಪ್ರಸಾದ್ ಅವರು ಪ್ರಾಂಶುಪಾಲೆ ಶೈಲಲತಾ ಅವಳನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಮರಾಠಿ ಭಾಷೆ ಬಗ್ಗೆ ಅಗೌರವ ತೋರಿದ ಸೆಕ್ಯೂರಿಟಿ ಗಾರ್ಡ್- ಮುಂದೇನಾಯ್ತು? ವಿಡಿಯೊ ನೋಡಿ

ತೆಲಂಗಾಣ ಶಾಲೆಯಲ್ಲಿ ಇಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಶಾಲೆ ಮುಗಿದ ನಂತರ ಸ್ಪೇಷಲ್ ಕ್ಲಾಸ್ ಮಾಡುವ ನೆಪದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಎ.ಎಸ್.ರಾವ್ ನಗರದ ಖಾಸಗಿ ಶಾಲೆಯ ಪ್ರಾಂಶುಪಾಲನ ವಿರುದ್ಧ ಕುಶೈಗುಡ ಪೊಲೀಸರು ಪ್ರಕರಣ ದಾಖಲಿಸಿದ್ದರು. 10 ನೇ ತರಗತಿಯ ನಾಲ್ವರು ಬಾಲಕಿಯರು ನೀಡಿದ ದೂರಿನ ಆಧಾರದ ಮೇಲೆ ಪ್ರಾಂಶುಪಾಲನ ವಿರುದ್ಧ ಬಿಎನ್ಎಸ್ ಸೆಕ್ಷನ್ 74 (ಗೌರವಕ್ಕೆ ಧಕ್ಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.