ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Earthquake: ಥೈಲ್ಯಾಂಡ್‍ ಭೂಕಂಪ- ರಕ್ಷಣಾ ಕಾರ್ಯಾಚರಣೆಯಲ್ಲಿರುವ ʻಸಿಂಬಾʼ ಫುಲ್‌ ವೈರಲ್‌!

ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ(Earthquake) ಸಂಭವಿಸಿದ್ದು, ಇದರಿಂದ ಕಟ್ಟಡಗಳು ಕುಸಿದು ಅನೇಕ ಜನರು ಸಾವನ್ನಪ್ಪಿದ್ದಾರೆ. ಇದೀಗ ಭೂಕಂಪದ ಅವಶೇಷಗಳಡಿಯಲ್ಲಿ ಜೀವಕ್ಕಾಗಿ ಹೋರಾಡುವವರನ್ನು ಪತ್ತೆ ಮಾಡಲು ಗೋಲ್ಡನ್ ರಿಟ್ರೀವರ್ ಸಿಂಬಾ ಅಲ್ಲಿ ಓಡಾಡಿದ್ದ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿವೆ.

ಭೂಕಂಪ ಸ್ಥಳದಲ್ಲಿ ʻಸಿಂಬಾʼ ಕರಾಮತ್ತು! ವಿಡಿಯೊ ನೋಡಿ

Profile pavithra Apr 2, 2025 3:22 PM

ಥೈಲ್ಯಾಂಡ್‌ : ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನಲ್ಲಿ ಭಾರೀ ಭೂಕಂಪ(Earthquake) ಸಂಭವಿಸಿದ್ದು, ಇದರಿಂದ ಕಟ್ಟಡಗಳು ಕುಸಿದು ಅನೇಕ ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದೀಗ ಭೂಕಂಪನದ ಅವಶೇಷಗಳಡಿಯಲ್ಲಿ ಸಿಲುಕಿರುವವರನ್ನು ಗೋಲ್ಡನ್ ರಿಟ್ರೀವರ್ ಶ್ವಾನ ಹುಡುಕಾಟ ನಡೆಸುತ್ತಿರುವ ಹಲವಾರು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿವೆ. ಬ್ಯಾಂಕಾಕ್‍ನ ನಜ್ಜುಗುಜ್ಜಾದ ಕಟ್ಟಡದ ಅವಶೇಷಗಳಡಿಯಲ್ಲಿ ಬದುಕುಳಿದವರನ್ನು ಕಂಡುಹಿಡಿದು ಅವರನ್ನು ರಕ್ಷಿಸಲು ಈ ತರಬೇತಿ ಪಡೆದ ನಾಯಿ ಓಡಾಡುವುದು ಇದರಲ್ಲಿ ಸೆರೆಯಾಗಿದೆ.

ವೈರಲ್ ಆದ ಈ ವಿಡಿಯೊಗಳಲ್ಲಿ ಕಂಡುಬಂದ ನಾಯಿಯನ್ನು 2022 ರಲ್ಲಿ ಅನಿಮಲ್ ಆರ್ಮಿಯಲ್ಲಿ ತರಬೇತಿ ಪಡೆದ ಗೋಲ್ಡನ್ ರಿಟ್ರೀವರ್ ಸಿಂಬಾ ಎಂದು ಗುರುತಿಸಲಾಗಿದೆ. ಭೂಕಂಪವಾದ ಸ್ಥಳಕ್ಕೆ ಸ್ನಿಫಿಂಗ್ ಕೌಶಲ್ಯ ಮತ್ತು ತೀಕ್ಷ್ಣ ದೃಷ್ಟಿಯನ್ನು ಹೊಂದಿರುವ ಈ ನಾಯಿ ರಕ್ಷಣಾ ಅಧಿಕಾರಿಯೊಂದಿಗೆ ಬಂದಿದೆ ಮತ್ತು ಬ್ಯಾಂಕಾಕ್‍ನಲ್ಲಿ ಭೂಕಂಪ ಪೀಡಿತ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ತಂಡಕ್ಕೆ ಸಹಾಯ ಮಾಡಿದೆ.

ಶ್ವಾನದ ವಿಡಿಯೊ ಇಲ್ಲಿದೆ ನೋಡಿ...



ಸಿಂಬಾ ನಾಯಿಯಂತೆ , ಇನ್ನೂ ಕೆಲವು ನಾಯಿಗಳನ್ನು ಭೂಕಂಪ ಪೀಡಿತ ಸ್ಥಳಗಳಿಗೆ ಕರೆದುಕೊಂಡು ಬರಲಾಗಿದೆ. ಅವುಗಳ ಮೂಲಕ ಅವಶೇಷಗಳ ಅಡಿಯಲ್ಲಿ ಇನ್ನು ಜೀವಕ್ಕಾಗಿ ಉಸಿರಾಡುತ್ತಿರುವ ಜನರನ್ನು ರಕ್ಷಿಸಲಾಗುತ್ತಿದೆ. ನ್ಯಾಷನಲ್ ರೆಸ್ಕ್ಯು ಡಾಗ್ ಸಂಘಟನೆಯಾದ ಕೆ 9 ಉಸರ್ ಥೈಲ್ಯಾಂಡ್, ನಾಯಿಗಳು ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುವ ಹಲವಾರು ವಿಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತವೆ. ಸಿಂಬಾ, ಕೆ 9 ನರೀ, ಸಹಾರಾ ಮತ್ತು ಇತರ ಕೆಲವು ನಾಯಿಗಳನ್ನು ದೇಶದ ರಾಜಧಾನಿಯಲ್ಲಿ ರಕ್ಷಣಾ ಕಾರ್ಯಾಚರಣೆಯ ಭಾಗವಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದಾಗಿ ತಿಳಿದುಬಂದಿದೆ.

ಮಾರ್ಚ್ 28, 2025 ರಂದು ಮ್ಯಾನ್ಮಾರ್‌ನ ಮಾಂಡಲೆ ಬಳಿ 7.7 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿ ಸಾಕಷ್ಟು ಹಾನಿ ಮತ್ತು ಪ್ರಾಣಹಾನಿ ಸಂಭವಿಸಿದೆ. ಥೈಲ್ಯಾಂಡ್ ಸೇರಿದಂತೆ ಆಗ್ನೇಯ ಏಷ್ಯಾದಾದ್ಯಂತ ಭೂಕಂಪನದ ಅನುಭವವಾಗಿದ್ದು, ಬ್ಯಾಂಕಾಕ್‍ನಲ್ಲಿ ಕಟ್ಟಡಗಳು ನಡುಗಿದ್ದು, ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಭೂಕಂಪವು ಮ್ಯಾನ್ಮಾರ್‌ನಲ್ಲಿ ಹೆಚ್ಚು ಹಾನಿಯನ್ನುಂಟುಮಾಡಿದೆ. ಈಗಾಗಲೇ ಸಾವಿನ ಸಂಖ್ಯೆ 1,600 ದಾಟಿದೆ ಮತ್ತು ಸಾವಿರಾರು ಜನರು ಗಾಯಗೊಂಡಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ. ಪೀಡಿತ ಪ್ರದೇಶಗಳಿಗೆ ನೆರವು ಒದಗಿಸಲು ಅಧಿಕಾರಿಗಳು ಕೆಲಸ ಮಾಡುತ್ತಿರುವುದರಿಂದ ಪರಿಹಾರ ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Earthquake: ಮ್ಯಾನ್ಮಾರ್‌ನಲ್ಲಿ ಭೂಕಂಪ; ಸುರಕ್ಷಿತವಾಗಿ ತಾಯ್ನಾಡಿಗೆ ಬಂದ ಕನ್ನಡಿಗರು

ಥೈಲ್ಯಾಂಡ್‍ನಲ್ಲಿ ಸಂಭವಿಸಿದ ಭೂಕಂಪದ ಪರಿಣಾಮದಿಂದ ಬ್ಯಾಂಕಾಕ್‍ನಲ್ಲಿ ಹೆಚ್ಚು ಹಾನಿಯಾಗಿದೆ. ಅಲ್ಲಿ ಅನೇಕ ಕಟ್ಟಡಗಳು ಬಿದ್ದು, ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ರಾಜಧಾನಿಯನ್ನು ವಿಪತ್ತು ಪ್ರದೇಶವೆಂದು ಗೊತ್ತುಪಡಿಸಿದ ನಂತರ ಹಾನಿಯನ್ನು ಸಮೀಕ್ಷೆ ಮಾಡಲು ಮತ್ತು ಬಾಧಿತರಾದವರಿಗೆ ಸಹಾಯ ಮಾಡಲು ರಕ್ಷಣಾ ಸಿಬ್ಬಂದಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ.