ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Health Tips: ಒಮ್ಮೆ ಬಿಸಿ ಮಾಡಿದ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದು?

ಎಷ್ಟೋ ಜನ‌‌ ಒಮ್ಮೆ ಅಡುಗೆಗೆ ಬಳಸಿದ ಎಣ್ಣೆಯನ್ನೇ ಮತ್ತೆ ಮರು ಬಳಕೆ ಮಾಡುತ್ತಾರೆ. ಇಂತಹ ಎಣ್ಣೆಯನ್ನು ಬಳಸುವುದರಿಂದ ಆಲ್ಡಿಹೈಡ್‌ಗಳು, ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ ಎಂಬುದನ್ನು ವೈದ್ಯಕೀಯ ಸಂಶೋಧನೆಯು ಎಚ್ಚರಿಸಿದೆ. ಮರುಬಳಕೆ ಮಾಡುವ ಅಡುಗೆ ಎಣ್ಣೆಯಲ್ಲಿ ಇರುವ ವಿಷಕಾರಿ ಅಂಶಗಳು ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆ ಗಳಿಗೆ ಕಾರಣವಾಗುತ್ತವೆ.

ಬಳಸಿದ ಎಣ್ಣೆಯನನು ಎಷ್ಟು ಬಾರಿ ಬಿಸಿ ಮಾಡಿ ಉಪಯೋಗಿಸಬಹುದು?

Oil Reused

Profile Pushpa Kumari Apr 2, 2025 7:00 AM

ನವದೆಹಲಿ: ಯಾವುದೇ ರುಚಿಯಾದ ಆಹಾರ ತಯಾರಿಕೆಯಲ್ಲಿ ಎಣ್ಣೆ ಬಹಳಷ್ಟು ಮುಖ್ಯ. ಆದರೆ ಎಷ್ಟೋ ಜನ‌‌ ಒಮ್ಮೆ ಅಡುಗೆಗೆ ಬಳಸಿದ ಎಣ್ಣೆಯನ್ನೇ ಮತ್ತೆ ಮರುಬಳಕೆ ಮಾಡುತ್ತಾರೆ. ಇಂತಹ ಎಣ್ಣೆಯನ್ನು (Cooking Oil) ಬಳಸುವುದರಿಂದ ಆಲ್ಡಿಹೈಡ್‌ಗಳು, ವಿಷಕಾರಿ ಅಂಶಗಳು ಉತ್ಪತ್ತಿಯಾಗುತ್ತವೆ ಎಂಬುದನ್ನು ವೈದ್ಯಕೀಯ ಸಂಶೋಧನೆಯು ಎಚ್ಚರಿಸಿದೆ. ಮರುಬಳಕೆ ಮಾಡುವ ಅಡುಗೆ ಎಣ್ಣೆಯಲ್ಲಿ ಇರುವ ವಿಷಕಾರಿ ಅಂಶಗಳು ಬೊಜ್ಜು, ಮಧುಮೇಹ, ಹೃದ್ರೋಗ, ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹಾಗಿದ್ದರೆ ಒಮ್ಮೆ ಬಳಸಿದ ಎಣ್ಣೆಯನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದು? ಎನ್ನುವ ಗೊಂದಲ ಇದ್ದಲ್ಲಿ ಈ ಮಾಹಿತಿ ಓದಿ...

ಒಮ್ಮೆ ಬಳಸಿ ಶೇಖರಿಸಿಟ್ಟ ಅಡುಗೆ ಎಣ್ಣೆಯನ್ನು ಮತ್ತೆ ಬಳಸಿದರೆ ಆಲ್ಡಿ ಹೈಡ್ ಎಂಬ ವಿಷಕಾರಿ ರಾಸಾಯನಿಕ ಬಿಡುಗಡೆ ಆಗುತ್ತದೆ. ಇದು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆದರೆ ಈ ರಾಸಾಯನಿಕ ಅಂಶವು ಹಲವು ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಲಿದೆ. ಭಾರತೀಯ ಸುರಕ್ಷತಾ ಪ್ರಾಧಿ ಕಾರದ ಮಾರ್ಗ ಸೂಚಿ ಪ್ರಕಾರ ಮನೆಯಲ್ಲಿ ಅಡುಗೆಗೆ ಬಳಸಿದ ಎಣ್ಣೆಯನ್ನು ಗರಿಷ್ಠ ಮೂರು ಬಾರಿಗಿಂತ ಹೆಚ್ಚು ಬಳಸುವುದು ಅಪಾಯಕಾರಿ ಎನ್ನುವ ಅಂಶವನ್ನು ಬಹಿರಂಗಪಡಿಸಿದೆ. ಇದರಿಂದ ಉರಿಯೂತ, ಹೃದಯ ಸಮಸ್ಯೆ, ರಕ್ತದಲ್ಲಿ ಅಶುದ್ಧತೆ, ಬೊಜ್ಜು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ.

ಮರುಬಳಕೆ ಮಾಡಿದ ಎಣ್ಣೆ ಬಳಸಿದ್ರೆ ಈ ಸಮಸ್ಯೆ ಕಾಡಬಹುದು

ಹೃದ್ರೋಗ ಮತ್ತು ಮೆದುಳಿಗೆ ಹಾನಿ: ಒಮ್ಮೆ ಬಳಕೆ ಮಾಡಿದ ಎಣ್ಣೆಯನ್ನು ಮತ್ತೆ ಬಿಸಿ ಮಾಡಿದಾಗ ಅನೇಕ ವಿಷಕಾರಿ ಅಂಶಗಳು ಉತ್ಪಾದನೆಯಾಗಿ ಹಲವು ರೀತಿಯ ಸಮಸ್ಯೆಗಳು ಕಂಡುಬರುತ್ತವೆ. ಮತ್ತೆ ಬಳಸಿದ ಎಣ್ಣೆಯಲ್ಲಿ ಕೊಬ್ಬು ಟ್ರಾನ್ಸ್‌ ಆಗಿ‌ ‌ಬದಲಾಗುತ್ತದೆ. ಇದರಲ್ಲೇ ಮತ್ತೊಮ್ಮೆ ಏನಾದರೂ ತಯಾರಿಸಿದಾಗ ಕೆಟ್ಟ ಕೊಬ್ಬು ರಕ್ತನಾಳಗಳಲ್ಲಿ ಸೇರಿಕೊಂಡು ಹೃದಯಕ್ಕೆ ಒತ್ತಡ ತರುತ್ತದೆ. ಇದರಿಂದ ವಯಸ್ಸಾದಂತೆ ಮಿದುಳಿನ ಕಾರ್ಯಕ್ಷಮತೆ ಕ್ಷೀಣಿಸುತ್ತದೆ.

ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ: ಎಣ್ಣೆಯನ್ನು ಮರುಬಳಕೆ ಮಾಡಿದರೆ ಟ್ರಾನ್ಸ್ ಕೊಬ್ಬಿನಾಮ್ಲಗಳ ಪ್ರಮಾಣವು ಹೆಚ್ಚಾಗಿ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತದೆ. ಹಾಗಾಗಿ ಮರುಬಳಕೆ ಮಾಡಿದ ಸಂದರ್ಭದಲ್ಲಿ ಅದರಲ್ಲಿನ ಟ್ರಾನ್ಸ್ ಫ್ಯಾಟ್ ಹೆಚ್ಚಾಗುತ್ತದೆ. ಇವುಗಳನ್ನು ಅತಿಯಾಗಿ ಸೇವಿಸಿದರೆ, ದೇಹದಲ್ಲಿ ಕೊಬ್ಬಿನ ಶೇಕಡಾವಾರು ಪ್ರಮಾಣವು ಹೆಚ್ಚಾಗಿ ಕೊಬ್ಬು ಅಪಧಮನಿಗಳಲ್ಲಿ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡುತ್ತದೆ. 

ಕ್ಯಾನ್ಸರ್ ಅಪಾಯ: ನೀವು ಒಮ್ಮೆ ಬಳಸಿದ ಅಡುಗೆ‌ ಎಣ್ಣೆಯನ್ನು ಮತ್ತೆ ಬಳಸಿದರೆ, ಕ್ಯಾನ್ಸರ್ ಅಪಾಯವನ್ನು ಉಂಟು ಮಾಡುತ್ತದೆ. ಎಣ್ಣೆಯನ್ನು ಪದೇ ಪದೇ ಬಿಸಿ ಮಾಡುವ ಮೂಲಕ, ಸ್ವತಂತ್ರ ರಾಡಿಕಲ್‌ಗಳು ಬಿಡುಗಡೆಯಾಗಿ ಆ್ಯಂಟಿ-ಆಕ್ಸಿಡೆಂಟ್‌ಗಳು ನಾಶವಾಗುತ್ತದೆ. ಇದರಿಂದ ಪಿತ್ತ ಕೋಶದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್ ಇತ್ಯಾದಿಗಳ ಉಂಟಾಗುವ ಸಾಧ್ಯತೆ ಇದೆ.

ಇದನ್ನು ಓದಿ: Best Cooking Oil: ಉತ್ತಮ ಆರೋಗ್ಯಕ್ಕೆ ಯಾವ ಅಡುಗೆ ಎಣ್ಣೆ ಬೆಸ್ಟ್?

ಆ್ಯಸಿಡಿಟಿ ಸಮಸ್ಯೆ: ಎಣ್ಣೆಯನ್ನು ಮರುಬಳಕೆ ಮಾಡಿದರೆ ಉತ್ಪಾದನೆಯಾಗುವ ಮತ್ತೊಂದು ವಿಷಕಾರಿ ಅಂಶವೆಂದರೆ ಆ್ಯಸಿಡಿಟಿ. ಪ್ರತಿಬಾರಿ ಎಣ್ಣೆಯನ್ನು ಬಿಸಿ‌ ಮಾಡಿದಾಗಲೂ ಈ ಅಂಶದಲ್ಲಿ ಬದಲಾಗುತ್ತ ಹೋಗುತ್ತದೆ. ರುಚಿ ಹಾಗೂ ಬಣ್ಣದಲ್ಲಿ ಗಾಢವಾಗುತ್ತದೆ. ಇಂತಹ ಎಣ್ಣೆಯನ್ನು ಬಳಸಿದರೆ ಆ್ಯಸಿಡಿಟಿ, ಎದೆಯುರಿಯಂತಹ ಸಮಸ್ಯೆ ಎದುರಾಗಲಿದೆ.

ರಕ್ತದೊತ್ತಡ ಹೆಚ್ಚಳ: ಮರುಬಳಕೆ ಮಾಡಿದ ಎಣ್ಣೆಯನ್ನು ಬಳಸಿದ್ರೆ ರಕ್ತದೊತ್ತಡವು ತಕ್ಷಣವೇ ಏರಿಕೆ ಆಗುವುದು. ಪದೇ ಪದೆ ಬಳಕೆ ಮಾಡಿದ ಎಣ್ಣೆಯಲ್ಲಿ ನೈಟ್ರಿಕ್ ಆಕ್ಸೈಡ್ ಮತ್ತು ಹೀಮ್ ಆಮ್ಲಜನಕದ ಪ್ರಮಾಣ ಕಡಿಮೆ ಇರುತ್ತದೆ. ಇದರಿಂದಾಗಿ ಆಕ್ಸಿಡೇಟಿವ್ ಒತ್ತಡ, ಅಧಿಕ ರಕ್ತದೊತ್ತಡ, ಅಪಧಮನಿ ಸಮಸ್ಯೆ ಉಂಟು ಮಾಡುತ್ತದೆ.