Stock Market: ಟ್ರಂಪ್ ಟಾರಿಫ್ ಘೋಷಣೆಗೆ ಮುನ್ನ ಸೆನ್ಸೆಕ್ಸ್, ನಿಫ್ಟಿ ಜಿಗಿತ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಸೇರಿದಂತೆ ಹಲವು ದೇಶಗಳ ವಿರುದ್ಧ ಆಮದು ತೆರಿಗೆ ಹೆಚ್ಚಿಸುವ ಘೋಷಣೆಯ ಸಮಯ ಸಮೀಪಿಸುತ್ತಿದ್ದರೂ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಧವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಜಿಗಿಯಿತು. ಸೆನ್ಸೆಕ್ಸ್ 592 ಅಂಕ ಏರಿಕೆಯಾಗಿ 76,617ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 166 ಅಂಕ ಗಳಿಸಿಕೊಂಡು 23,332ಕ್ಕೆ ಸ್ಥಿರವಾಯಿತು.

ಸಾಂದರ್ಭಿಕ ಚಿತ್ರ.

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಭಾರತ ಸೇರಿದಂತೆ ಹಲವು ದೇಶಗಳ ವಿರುದ್ಧ ಆಮದು ತೆರಿಗೆ ಹೆಚ್ಚಿಸುವ ಘೋಷಣೆಯ ಸಮಯ ಸಮೀಪಿಸುತ್ತಿದ್ದರೂ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಬುಧವಾರ ಸೆನ್ಸೆಕ್ಸ್ ಮತ್ತು ನಿಫ್ಟಿ ಜಿಗಿಯಿತು. ಸೆನ್ಸೆಕ್ಸ್ 592 ಅಂಕ ಏರಿಕೆಯಾಗಿ 76,617ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 166 ಅಂಕ ಗಳಿಸಿಕೊಂಡು 23,332ಕ್ಕೆ ಸ್ಥಿರವಾಯಿತು (Stock Market). ಬ್ಲೂಚಿಪ್ ಹೆವಿವೇಟ್‌ಗಳಾದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಗಣನೀಯ ಚೇತರಿಕೆ ದಾಖಲಿಸಿತು. ಮಾರುಕಟ್ಟೆಯಲ್ಲಿ ಉಭಯ ಸೂಚ್ಯಂಕಗಳ ಜಿಗಿತಕ್ಕೂ ಪುಷ್ಟಿ ಕೊಟ್ಟಿತು. ಬಿಎಸ್‌ಇನಲ್ಲಿ ಲಿಸ್ಟೆಡ್ ಕಂಪನಿಗಳ ಮಾರುಕಟ್ಟೆ ಮೌಲ್ಯವು 412 ಲಕ್ಷ ಕೋಟಿ ರೂಪಾಯಿಗೆ ಏರಿತು. 2.81 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಯಿತು.
ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಐಟಿ ಇಂಡೆಕ್ಸ್‌ಗಳು ಅನುಕ್ರಮವಾಗಿ 1% ಮತ್ತು 0.8% ಏರಿಕೆಯಾಯಿತು. ಎಲ್‌ಟಿಐ ಮೈಂಡ್ ಟ್ರೀ, ಇನ್ಫೋಸಿಸ್, ಟೆಕ್ ಮಹೀಂದ್ರಾ, ಪರ್ಸಿಸ್ಟೆಂಟ್ ಸಿಸ್ಟಮ್ಸ್ ಷೇರು ದರ ಏರಿತು.
ಈ ಸುದ್ದಿಯನ್ನೂ ಓದಿ: Gold Rate: ಬಂಗಾರದ ದರ ಸ್ಫೋಟ: 10 ಗ್ರಾಮ್‌ಗೆ 91,000 ರೂ.; ಕಾರಣವೇನು?
ಮಂಗಳವಾರ ಸಾವಿರಾರು ಅಂಕ ಕುಸಿತಕ್ಕೀಡಾಗಿದ್ದ ಸೆನ್ಸೆಕ್ಸ್ ಮರು ದಿನ ಚೇತರಿಸಿದಂತಾಗಿದೆ. 12 ಸೆಕ್ಟರ್‌ಗಳೂ ಪಾಸಿಟಿವ್ ವಲಯದಲ್ಲಿ ಚೇತರಿಸಿತ್ತು. ಸ್ಮಾಲ್ ಕ್ಯಾಪ್ ಮತ್ತು ಮಿಡ್ ಕ್ಯಾಪ್ ಷೇರುಗಳೂ ಚೇತರಿಸಿತ್ತು.
ಏಷ್ಯಾದ ಇತರ ಷೇರು ಮಾರುಕಟ್ಟೆಗಳಲ್ಲಿ ಬುಧವಾರ ಸೂಚ್ಯಂಕಗಳು ಕುಸಿಯಿತು. ಡಾಲರ್ ಎದುರು ರುಪಾಯಿ ಮೌಲ್ಯ 85.49 ರುಪಾಯಿಯಷ್ಟಿತ್ತು. ಬ್ರೆಂಟ್ ಕಚ್ಚಾ ತೈಲ ದರ ಬ್ಯಾರೆಲ್‌ಗೆ 74.42 ಡಾಲರ್ ನಷ್ಟಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಏಪ್ರಿಲ್ ಒಂದರಂದು 5,901 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.