ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mukesh Ambani: ಅಂಬಾನಿಯ ಆಂಟಿಲಿಯಾ ನಿವಾಸದ ಮೊದಲ ವಿದ್ಯುತ್ ಬಿಲ್ ಮೊತ್ತ ಎಷ್ಟು ಗೊತ್ತಾ? ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ !

ವಿಶ್ವದ ಎರಡನೇ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿರುವ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ(Mukesh Ambani) ಅವರ ಆಂಟಿಲಿಯಾದಲ್ಲಿ ತಿಂಗಳ ವಿದ್ಯುತ್ ಬಿಲ್ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದು ಒಬ್ಬ ಸಾಮಾನ್ಯ ವ್ಯಕ್ತಿ ಸರಾಸರಿ 30 ವರ್ಷಗಳಲ್ಲಿ ಗಳಿಸುವ ಆದಾಯಕ್ಕಿಂತ ಹೆಚ್ಚು ಎನ್ನುತ್ತದೆ ಅಂಕಿಅಂಶಗಳು.

ಮುಕೇಶ್ ಅಂಬಾನಿಯ ಆಂಟಿಲಿಯಾದ ಮೊದಲ ವಿದ್ಯುತ್ ಬಿಲ್ ಎಷ್ಟು ಗೊತ್ತೆ?

ಮುಂಬೈ: ವಿಶ್ವದ ಎರಡನೇ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿರುವ ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (Mukesh ambani) ಅವರ ಆಂಟಿಲಿಯಾದಲ್ಲಿ (Antilia) ತಿಂಗಳ ವಿದ್ಯುತ್ ಬಿಲ್ (Electricity bill) ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಇದು ಒಬ್ಬ ಸಾಮಾನ್ಯ ವ್ಯಕ್ತಿ ಸರಾಸರಿ 30 ವರ್ಷಗಳಲ್ಲಿ ಗಳಿಸುವ ಆದಾಯಕ್ಕಿಂತ ಹೆಚ್ಚು ಎನ್ನುತ್ತದೆ ಅಂಕಿಅಂಶಗಳು. ಮುಕೇಶ್ ಅಂಬಾನಿಯವರ 27 ಅಂತಸ್ತಿನ ಆಂಟಿಲಿಯಾ ಕಟ್ಟಡ ಅತ್ಯದ್ಭುತವಾದ ವಾಸ್ತುಶಿಲ್ಪ, ಹೆಲಿಪ್ಯಾಡ್‌, ಸ್ಪಾ, ದೇವಾಲಯ ಮತ್ತು 168 ಕಾರುಗಳಿಗೆ ಪಾರ್ಕಿಂಗ್‌ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ ಇಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಬಳಕೆಯಾಗುತ್ತದೆ. 2010ರಲ್ಲಿ ಈ ಕಟ್ಟಡದ ಮೊದಲ ವಿದ್ಯುತ್ ಬಿಲ್ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು. ವಿದ್ಯುತ್ ಬಿಲ್ ನ ಮೊತ್ತವು ರಾಷ್ಟ್ರವನ್ನು ಬೆಚ್ಚಿಬೀಳಿಸಿತ್ತು ಮಾತ್ರವಲ್ಲದೆ ಅಂಬಾನಿ ಜೀವನಶೈಲಿಯ ಭವ್ಯತೆಯನ್ನು ಪ್ರದರ್ಶಿಸಿತ್ತು.

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕನಸಿನ ಮನೆಯಾದ ಆಂಟಿಲಿಯಾ ನಿರ್ಮಾಣಕ್ಕೆ ಸರಿಸುಮಾರು ನಾಲ್ಕು ವರ್ಷಗಳು ಬೇಕಾದವು. 27 ಅಂತಸ್ತಿನ ಈ ಕಟ್ಟಡ ನಿರ್ಮಾಣ ಕಾರ್ಯ 2005 ರಲ್ಲಿ ಪ್ರಾರಂಭಗೊಂಡು 2010ರಲ್ಲಿ ಪೂರ್ಣಗೊಂಡಿತು. ಸುಮಾರು 200 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣವಾಗಿರುವ ಈ ಐಷಾರಾಮಿ ಬಂಗಲೆಯು ಬಕಿಂಗ್‌ಹ್ಯಾಮ್ ಅರಮನೆಯ ಅನಂತರ ವಿಶ್ವದ ಎರಡನೇ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿದೆ.

ಮುಕೇಶ್ ಅಂಬಾನಿ ಅವರ ನಿವಾಸಕ್ಕೆನೀಡಿರುವ 'ಆಂಟಿಲಿಯಾ' ಹೆಸರು ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಒಂದು ಪೌರಾಣಿಕ ಮತ್ತು ನಿಗೂಢತೆಯನ್ನು ಹೊಂದಿರುವ ದ್ವೀಪದಿಂದ ಸ್ಫೂರ್ತಿ ಪಡೆದಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಕಾರ ಆಂಟಿಲಿಯಾ ಜಾಗತಿಕವಾಗಿ ಅತ್ಯಂತ ದುಬಾರಿ ಖಾಸಗಿ ನಿವಾಸವಾಗಿದೆ.

antila1

ಮೊದಲ ವಿದ್ಯುತ್ ಬಿಲ್ ಎಷ್ಟು ಗೊತ್ತಾ?

ನಿರ್ಮಾಣದ ಒಂದು ವರ್ಷಗಳ ಬಳಿಕ ಅಂದರೆ 2010ರ ಫೆಬ್ರವರಿಯಲ್ಲಿ ಮುಕೇಶ್ ಮತ್ತು ನೀತಾ ಅಂಬಾನಿ ಅಧಿಕೃತವಾಗಿ ಆಂಟಿಲಿಯಾಗೆ ಬಂದು ನೆಲೆಯಾದರು. 4,00,000 ಚದರ ಅಡಿ ಹೊಂದಿರುವ ಈ ಕಟ್ಟಡದಲ್ಲಿ ಅನೇಕ ಐಷಾರಾಮಿ ಸೌಲಭ್ಯಗಳಿವೆ. ಹೀಗಾಗಿ ವಿದ್ಯುತ್ ಬಳಕೆ ಕೂಡ ಗಣನೀಯ ಪ್ರಮಾಣದಲ್ಲಿದೆ. ಈ ಕಟ್ಟಡಕ್ಕೆ ಮೊದಲ ಒಂದು ತಿಂಗಳ ಬಿಲ್ ನಲ್ಲಿ 6,37,240 ಯೂನಿಟ್ ವಿದ್ಯುತ್ ಬಳಕೆಯಾಗಿರುವುದನ್ನು ತೋರಿಸಿತ್ತು. ಇದರಿಂದ ಬರೋಬ್ಬರಿ 70,69,488 ರೂ. ಗಳ ಬೃಹತ್ ವಿದ್ಯುತ್ ಬಿಲ್ ಬಂದಿತ್ತು. ಅಂದರೆ ಕೇವಲ ಒಂದು ತಿಂಗಳಲ್ಲಿ 70 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವಿದ್ಯುತ್ ಬಿಲ್ ಅನ್ನು ಮುಕೇಶ್ ಅಂಬಾನಿ ಪಾವತಿಸಿದ್ದರು.

ಈ ಸುದ್ದಿಯನ್ನೂ ಓದಿ: ಮುಕೇಶ್ ಅಂಬಾನಿ ಕುಟುಂಬಕ್ಕೆ ಬೆದರಿಕೆ: ವ್ಯಕ್ತಿಯ ಬಂಧನ

ಯಾಕೆ ಬಂತು ದುಬಾರಿ ವಿದ್ಯುತ್ ಬಿಲ್?

ಆಂಟಿಲಿಯಾ ಕೇವಲ ಒಂದು ಮನೆಯಲ್ಲ. ಇಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆಯನ್ನು ಬೇಡುವ ಅನೇಕ ವೈಶಿಷ್ಟ್ಯಗಳಿವೆ. ಇದು ಹಲವು ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿವೆ. ಅವುಗಳಲ್ಲಿ ಮುಖ್ಯವಾಗಿ ತ್ವರಿತ ಮತ್ತು ತೊಂದರೆ ಮುಕ್ತ ಪ್ರಯಾಣಕ್ಕೆ ಮೂರು ಹೆಲಿಪ್ಯಾಡ್‌ಗಳು, 168 ಕಾರುಗಳಿಗೆ ಸ್ಥಳಾವಕಾಶವಿರುವ ಬಹುಮಹಡಿ ಪಾರ್ಕಿಂಗ್ ಸ್ಥಳ, ವಿಶ್ರಾಂತಿಗಾಗಿ ಒಂದು ಐಷಾರಾಮಿ ಸ್ಪಾ ಮತ್ತು ಆರೋಗ್ಯ ಕೇಂದ್ರ, ತಾಪಮಾನ ನಿಯಂತ್ರಿತ ಈಜುಕೊಳ, ಭವ್ಯ ದೇವಾಲಯ, ಟೆರೇಸ್ ಉದ್ಯಾನ, 27 ಮಹಡಿಗಳಲ್ಲಿ ಸಂಚರಿಸಲು ಒಂಬತ್ತು ಹೈ-ಸ್ಪೀಡ್ ಲಿಫ್ಟ್‌ಗಳು, 24/7 ಚಾಲನೆಯಲ್ಲಿರುವ ಹಲವು ಹೈಟೆಕ್ ಸೌಲಭ್ಯಗಳು ಆಂಟಿಲಿಯದಲ್ಲಿದೆ. ಇದರಿಂದಾಗಿ ಈ ವಿದ್ಯುತ್ ಬಿಲ್ ಮೊತ್ತ ದೊಡ್ಡದೇನಲ್ಲ.

ಮೊದಲು ಎಲ್ಲಿದ್ದರು?

ಆಂಟಿಲಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ಮುಖೇಶ್ ಅಂಬಾನಿ ತಮ್ಮ ಸಹೋದರ ಅನಿಲ್ ಅಂಬಾನಿ ಅವರೊಂದಿಗೆ ಮುಂಬೈನ ಕಫೆ ಪರೇಡ್ ಪ್ರದೇಶದಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್‌ನಲ್ಲಿ ವಾಸಿಸುತ್ತಿದ್ದರು. 19 ಅಂತಸ್ತಿನ ಕಟ್ಟಡವಾದ ಸೀ ವಿಂಡ್ ನಲ್ಲಿ ಅವರ ತಾಯಿ ಕೋಕಿಲಾಬೆನ್ ಅಂಬಾನಿ ಸೇರಿದಂತೆ ಇಡೀ ಅಂಬಾನಿ ಕುಟುಂಬದ ನಿವಾಸವಾಗಿತ್ತು. ಸೀ ವಿಂಡ್ ನಲ್ಲಿ 168 ಕಾರುಗಳಿದ್ದರೂ ಇದರಲ್ಲಿ ಅತಿ ವೇಗದ ಲಿಫ್ಟ್‌ಗಳು ಅಥವಾ ದುಬಾರಿ ಪಾರ್ಕಿಂಗ್ ಸ್ಥಳಗಳು ಇರಲಿಲ್ಲ. ಇದನ್ನು ಧೀರೂಭಾಯಿ ಅಂಬಾನಿ ಅವರು ಕಟ್ಟಿಸಿದ್ದರು.