Better Sleep: ಉತ್ತಮ ನಿದ್ರೆಗೆ ಮಲಗುವ ಮುನ್ನ ಈ ಆಹಾರಗಳನ್ನು ಸೇವಿಸಿ!
ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳಷ್ಟು ಅತ್ಯಗತ್ಯವಾಗಿದ್ದು ಆರೋಗ್ಯಕರ ಜೀವನಶೈಲಿಗೆ ದಿನಕ್ಕೆ 6-8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎನ್ನುತ್ತಾರೆ ತಜ್ಞರು. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾದ್ರೆ ಚೆನ್ನಾಗಿ ನಿದ್ರೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದಲ್ಲಿ ಈ ಮಾಹಿತಿ ಓದಿ.


ನವದೆಹಲಿ: ಇಂದಿನ ಒತ್ತಡದ ಜೀವನಶೈಲಿಯಿಂದಾಗಿ ಅನೇಕ ಜನರು ನೆಮ್ಮದಿಯಿಂದ ನಿದ್ರಾ ಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಬದಲಾದ ಜೀವನ ಶೈಲಿ, ಅಸಮತೋಲನ ಆಹಾರ ಪದ್ಧತಿ ಇತ್ಯಾದಿ ಕ್ರಮ ಸರಿಯಾದ ನಿದ್ರೆಗೆ ಸಮಸ್ಯೆ ಉಂಟು ಮಾಡಬಹುದು. ಉತ್ತಮ ಆರೋಗ್ಯಕ್ಕೆ ನಿದ್ರೆ ಬಹಳಷ್ಟು (Better Sleep) ಅತ್ಯಗತ್ಯವಾಗಿದ್ದು ಆರೋಗ್ಯಕರ ಜೀವನ ಶೈಲಿಗೆ ದಿನಕ್ಕೆ 6-8 ಗಂಟೆಗಳ ನಿದ್ದೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ಕಾರಿ ಎನ್ನುತ್ತಾರೆ ತಜ್ಞರು. ನಿದ್ರಾಹೀನತೆಯಿಂದ ಮಾನಸಿಕ ಖಿನ್ನತೆ, ರಕ್ತದ ಒತ್ತಡ, ಬೊಜ್ಜು ಮತ್ತಿತರ ಸಮಸ್ಯೆ ಕಾಣಿಸಿಕೊಳ್ಳಬಹುದು. ಆದರೆ ಉತ್ತಮ ನಿದ್ರೆಯನ್ನು ಪಡೆಯಲು ಆಹಾರ ಸೇವನೆ ಕೂಡ ಬಹಳಷ್ಟು ಮುಖ್ಯವಾಗಿದ್ದು ಮೆಗ್ನೀಸಿ ಯಮ್, ಕ್ಯಾಲ್ಸಿಯಂ, ಜೀವಸತ್ವಗಳಂತಹ ಅಗತ್ಯ ಪೋಷಕಾಂಶ ಗಳು ನಿದ್ರಾ ಹೀನತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತವೆ. ಹಾಗಾದ್ರೆ ಚೆನ್ನಾಗಿ ನಿದ್ರೆ ಮಾಡಲು ಯಾವ ಆಹಾರವನ್ನು ಸೇವಿಸಬೇಕು ಎನ್ನುವ ಗೊಂದಲ ಇದ್ದಲ್ಲಿ ಈ ಮಾಹಿತಿ ಓದಿ.
ಬಾಳೆ ಹಣ್ಣಿನ ಸೇವನೆ:
ರಾತ್ರಿ ಮಲಗುವ ಮೊದಲು ಬಾಳೆ ಹಣ್ಣನ್ನು ಸೇವನೆ ಮಾಡಿದರೆ ಮಲಗಿದ ಕೂಡಲೇ ನಿದ್ದೆ ಬರುತ್ತದೆ ಎಂದು ತಜ್ಞರು ಕೂಡ ಸಲಹೆ ನೀಡುತ್ತಾರೆ. ಈ ಹಣ್ಣಿ ನಲ್ಲಿ ಹೆಚ್ಚು ಪ್ರಮಾಣದ ಮೆಗ್ನೀಸಿಯಮ್ ಅಂಶವು ಇರಲಿದ್ದು ಇದು ಒತ್ತಡವನ್ನು ನಿವಾರಣೆ ಮಾಡಿ, ಸ್ನಾಯುಗಳಿಗೆ ಬಲ ನೀಡಲಿದೆ. ಮುಖ್ಯ ವಾಗಿ, ದೇಹದಲ್ಲಿ ಸೆರೊಟೊನಿನ್ ಮತ್ತು ಮೆಲಟೊನಿನ್ ಹಾರ್ಮೋನ್ ಮಟ್ಟವನ್ನು ಈ ಹಣ್ಣು ಹೆಚ್ಚಿಸಿ, ಉತ್ತಮ ನಿದ್ರೆಗೆ ಸಹಕರಿಸಲಿದೆ.
ಕಿತ್ತಳೆ ಅಥವಾ ದ್ರಾಕ್ಷಿ ಹಣ್ಣುಗಳು:
ವಿಟಮಿನ್ ' ಸಿ ಕೊರತೆ ಇದ್ದವರು ನಿದ್ರಾಹೀನತೆಯಿಂದ ಬಳಲುತ್ತಿರು ತ್ತಾರೆ. ಅಂತಹವರು ವಿಟಮಿನ್ ಸಿ ಅಂಶವಿರುವ ಹಣ್ಣು ಮತ್ತು ತರಕಾರಿ ಗಳನ್ನು ಸೇವಿಸಿದರೆ ಬಹಳಷ್ಟು ಉತ್ತಮ.ಹಾಗಾಗಿ ಕಿತ್ತಳೆ ಮತ್ತು ದ್ರಾಕ್ಷಿ ಯಂತಹ ಹಣ್ಣನ್ನು ರಾತ್ರಿ ಸೇವನೆ ಮಾಡಿದ್ದಲ್ಲಿ ಇವು ಮೆಲಟೋನಿನ್ ಎಂಬ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತವೆ.
ಓಟ್ಸ್:
ಓಟ್ಸ್ ದೇಹದಲ್ಲಿ ಸಿರೊಟೋನಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಹೆಚ್ಚು ಪ್ರಮಾಣದಲ್ಲಿ ಇರಲಿದ್ದು ಓಟ್ಸ್ ನಲ್ಲಿರುವ ಫೈಬರ್ ರಾತ್ರಿಯ ಸಮಯದಲ್ಲಿ ಉತ್ತಮ ನಿದ್ರೆಗೆ ಸಹಕಾರಿ ಸುತ್ತದೆ.ಇವು ಆರೋಗ್ಯಕರ ಮೊನೊಸಾಚುರೇಟೆಡ್ ಕೊಬ್ಬುಗಳು ಮತ್ತು ಆಂಟಿ ಆಕ್ಸಿಡೆಂಟ್‌ಗಳಿಂದ ತುಂಬಿರುತ್ತವೆ. ಇದು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಿ ರಾತ್ರಿ ಸಂದರ್ಭದಲ್ಲಿ ಎಚ್ಚರಗೊಳ್ಳುವುದನ್ನು ಕಡಿಮೆ ಮಾಡುತ್ತದೆ.
ಕಿವಿ ಹಣ್ಣು:
ಕಿವಿ ಹಣ್ಣನ್ನು ಸೇವಿಸದರು ಉತ್ತಮ ನಿದ್ರೆಗೆ ಸಹಕಾರಿ. ಏಕೆಂದರೆ ಇದರಲ್ಲಿ ಸಿರೊಟೋನಿನ್ ಹೆಚ್ಚು ಪ್ರಮಾಣದಲ್ಲಿದ್ದು ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ. ಈ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇರಲಿದ್ದು ಮಲ ಗುವ ಮುನ್ನ ಕಿವಿ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಪ್ರಯೋಜನವನ್ನು ನೀಡಿ ಉತ್ತಮ ನಿದ್ರೆಗೆ ಸಹಕಾರಿಯಾಗ ಲಿದೆ.
ಹಾಲು:
ಒಂದು ಕಪ್ ಉಗುರುಬೆಚ್ಚಗಿನ ಹಾಲು ಉತ್ತಮ ನಿದ್ರೆಗೆ ಸಹಾಯ ಮಾಡು ತ್ತದೆ. ಒಂದು ಚಿಟಿಕೆ ಅರಿಶಿನ ಸೇರಿಸಿ ಹಾಲನ್ನು ಕುಡಿದರೆ ರಾತ್ರಿ ಉತ್ತಮ ನಿದ್ರೆಯು ಬರಲಿದೆ.ಹಾಲಿನಲ್ಲಿ ಟ್ರಿಪ್ಟೊಫಾನ್ ಮತ್ತು ಸಿರೊಟೋ ನಿನ್ ಇದ್ದು ಜೊತೆಗೆ ಹಾಲು ಕ್ಯಾಲ್ಸಿಯಂನ ಉತ್ತಮ ಮೂಲ. ಇದು ಒತ್ತಡ ದೂರ ಮಾಡಿ ರಾತ್ರಿ ಚೆನ್ನಾಗಿ ನಿದ್ರೆ ಭರಿಸುವಂತೆ ಮಾಡಲಿದೆ.
ಇದನ್ನು ಓದಿ: Health Tips: ಒಮ್ಮೆ ಬಿಸಿ ಮಾಡಿದ ಅಡುಗೆ ಎಣ್ಣೆಯನ್ನು ಎಷ್ಟು ಬಾರಿ ಮರುಬಳಕೆ ಮಾಡಬಹುದು?
ಕುಂಬಳಕಾಯಿ ಬೀಜಗಳು:
ಕುಂಬಳಕಾಯಿ ಬೀಜಗಳು ಆರೋಗ್ಯಕ್ಕೂ ಉತ್ತಮ ವಾಗಿದ್ದು ಇದರಲ್ಲಿ ಆರೋಗ್ಯಕರ ಕೊಬ್ಬುಗಳು, ಮೆಗ್ನೀಸಿಯಮ್ ಮತ್ತು ಹೃದಯ ಮತ್ತು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುವ ಇತರ ಪೋಷಕಾಂಶಗಳು ಇದೆ. ಇದು ನಿದ್ರೆಯನ್ನು ಉತ್ತೇಜಿಸುವ ಅಮೈನೋ ಆಮ್ಲವಾಗಿದ್ದು ಈ ಬೀಜ ಗಳಲ್ಲಿನ ಸತುಗಳು ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿ ಯಾಗಲಿದೆ.
ಡಾರ್ಕ್ ಚಾಕೊಲೇಟ್:
ಊಟದ ನಂತರ ಚಾಕೊಲೇಟ್ ಸೇವನೆಯ ಹವ್ಯಾಸವು ಉತ್ತಮ ನಿದ್ರೆಗೆ ಉತ್ತೇಜನ ನೀಡುವುದು. ಡಾರ್ಕ್ ಚಾಕೊಲೇಟ್‍ಗಳು ಸಿರೊಟೋನಿನ್ ಅಂಶ ಹೊಂದಿದ್ದು ಇದು ಒತ್ತಡ ನಿವಾರಿಸಿ ಉತ್ತಮ ನಿದ್ರೆಗೆ ಸಹಾಯ ಮಾಡುವುದು.