Summer Tips: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಈ ಆಹಾರ ಕ್ರಮ ಪಾಲಿಸಿ!
Summer Tips: ವಾತಾವರಣಕ್ಕೆ ಅನುಗುಣವಾಗಿ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ದೇಹವು ಆರೋಗ್ಯ ಯುತವಾಗಿ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ ಕೆಲವು ಆಹಾರಗಳನ್ನು ತಪ್ಪಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.

Summer Food

ನವದೆಹಲಿ: ಬೇಸಿಗೆಯಲ್ಲಿ ದೇಹವು ಬೆವರಿ ಡಿ-ಹೈಡ್ರೇಷನ್ ಅಥವಾ ನಿರ್ಜಲೀಕರಣ ಉಂಟಾಗುವುದು ಸಾಮಾನ್ಯವಾಗಿದೆ. ಬಿಸಿಲಿನ ತಾಪಕ್ಕೆ ದೇಹ ದಲ್ಲಿ ನೀರಿನ ಕೊರತೆ ಉಂಟಾಗಿ ಹೀಟ್ ಸ್ಟ್ರೋಕ್, ಅಲರ್ಜಿ, ಜೀರ್ಣ ಕ್ರಿಯೆಯ ಅಪಾಯಗಳನ್ನು ಉಂಟು ಮಾಡಬಹುದು. ಆದ್ದರಿಂದ ವಾತಾವರಣಕ್ಕೆ (Summer Tips) ಅನುಗುಣವಾಗಿ ಆಹಾರ ಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಕೊಂಡರೆ ದೇಹವು ಆರೋಗ್ಯಯುತವಾಗಿ ಇರುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕೆಲವು ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿ ಕೆಲವು ಆಹಾರಗಳನ್ನು ತಪ್ಪಿಸಬೇಕಾಗುತ್ತದೆ. ಬೇಸಿಗೆಯಲ್ಲಿ ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ.
ಕಲ್ಲಂಗಡಿ
ಬೇಸಿಗೆಯಲ್ಲಿ ಹೆಚ್ಚಾಗಿ ಸಿಗುವ ಹಣ್ಣುಗಳಲ್ಲಿ ಕಲ್ಲಂಗಡಿಯು ಒಂದು, ಇದರಲ್ಲಿ ನೀರಿನಾಂಶವು ಹೆಚ್ಚಳವಾಗಿ ಇದ್ದು, ಇದನ್ನು ಬೇಸಿಗೆಯಲ್ಲಿ ಸೇವನೆ ಮಾಡಿದರೆ ದೇಹವು ತಂಪಾಗಿರುವುದು.ಕಲ್ಲಂಗಡಿಯಲ್ಲಿ ಇರುವ ಲೈಕೋ ಪೆನ್ ಅಂಶವು ಚರ್ಮಕ್ಕೆ ಬಿಸಿಲಿನಿಂದ ಆಗುವ ಹಾನಿಯನ್ನು ತಪ್ಪಿಸುತ್ತದೆ. ಇದರ ಸೇವನೆ ಚರ್ಮಕ್ಕೂ ಒಳಿತು. ಇದು ಮೊಶ್ಚಿರೈಸ್ ಗುಣದ ಜೊತೆಗೆ ಚರ್ಮಕ್ಕೆ ನೈಸರ್ಗಿಕ ಕ್ಲೆನ್ಸರ್ ಆಗಿ ಕೆಲಸ ಮಾಡುವುದು. ಕಲ್ಲಂಗಡಿಯನ್ನು ಸಲಾಡ್ ಅಥವಾ ಇತರ ರೂಪದಲ್ಲಿ ಸೇವನೆ ಮಾಡಬಹುದು.
ಮೊಸರು
ಪ್ರೊಬಯೋಟಿಕ್ ಅಂಶ ಹೆಚ್ಚಾಗಿ ಇರುವ ಮೊಸರಿನ ಸೇವನೆ ಈ ಬೇಸಿಗೆಯಲ್ಲಿ ಉತ್ತಮ. ಇದು ಜೀರ್ಣಕ್ರಿಯೆಯನ್ನು ಉತ್ತಮವಾಗಿಸುವ ಜೊತೆಗೆ ದೇಹಕ್ಕೆ ತಂಪಿನ ಅನುಭವ ಕೊಡುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಕೂಡ ಉತ್ತಮ ಪ್ರಮಾಣದಲ್ಲಿದ್ದು, ಮೂಳೆ ಮತ್ತು ಹಲ್ಲುಗಳನ್ನು ಬಲ ಪಡಿಸುವುದು. ಪ್ರೋಟೀನ್ ಹೊಂದಿರುವ ಮೊಸರು ಈ ಬೇಸಗೆಗೆ ಆರೋಗ್ಯಕರ ಅನುಭವ ನೀಡಲಿದೆ.
ಜೀರಿಗೆ ನೀರು
ಬೇಸಿಗೆಯಲ್ಲಿ ಜೀರಿಗೆ ನೀರಿನ ಸೇವನೆ ಬಹಳ ಉತ್ತಮ. ಆದ್ದರಿಂದ ಬೇಸಿಗೆಯಲ್ಲಿ ಜೀರಿಗೆ ನೀರನ್ನು ಬಳಕೆ ಮಾಡುವ ಅಭ್ಯಾಸ ಮಾಡಿಕೊಳ್ಳಿ. ಇದು ದೇಹದಲ್ಲಿ ಉಷ್ಣಾಂಶ ಕಡಿಮೆ ಮಾಡುವ ಜೊತೆಗೆ ಉರಿಯೂತದ ಸಮಸ್ಯೆಯನ್ನು ಕೂಡ ಕಡಿಮೆ ಮಾಡುತ್ತದೆ. ಅಲ್ಲದೆ ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಪ್ರಮಾಣ ಅಧಿಕ ಇದ್ದು ಬೇಸಿಗೆಯಲ್ಲಿ ಕಾಡುವ ಅಲರ್ಜಿ ಯಂತಹ ಸಮಸ್ಯೆಗೆ ಮುಕ್ತಿ ನೀಡುತ್ತದೆ.
ಎಳನೀರು
ಅದೇ ರೀತಿ ಬೇಸಿಗೆಯಲ್ಲಿ ಎಳನೀರಿನ ಸೇವನೆ ಬಹಳ ಉತ್ತಮ. ರಾಸಾ ಯನಿಕಗಳಿಂದ ಕೂಡಿದ ತಂಪು ಪಾನೀಯಗಳಿಗಿಂತ ಈ ಎಳನೀರನ್ನು ಕುಡಿಯುವುದರಿಂದ ಹಲವು ಆರೋಗ್ಯ ಲಾಭ ಪಡೆಯಬಹುದು.
ಹಸಿರು ಸೊಪ್ಪು
ಅದೇ ರೀತಿ ಬೇಸಿಗೆಯಲ್ಲಿ ಹಸಿರು ಸೊಪ್ಪುಗಳಾದ ಪಾಲಕ್, ಎಲೆಕೋಸು ಇತ್ಯಾದಿ ಹಸಿರು ಸೊಪ್ಪು ಸೇವಿಸಬೇಕು.ಇಂತಹ ತರಕಾರಿಗಳಲ್ಲಿ ನೀರಿನ ಅಂಶ ಹೆಚ್ಚಿರುತ್ತದೆ. ಇವುಗಳನ್ನು ಹಾಗೆ ಸೇವಿಸಬಹುದು ಅಥವಾ ಸಲಾಡ್, ಮಜ್ಜಿಗೆಯಲ್ಲಿ ಸೇರಿಸಿ ಅಥವಾ ಸ್ಮೂದಿಯಾಗಿ ಬಳಸಬಹುದು.
ಇವುಗಳನ್ನು ತಪ್ಪಿಸಿ:
ಎಣ್ಣೆಯುಕ್ತ ಆಹಾರ ತಪ್ಪಿಸಿ:ಬೇಸಿಗೆಯಲ್ಲಿ ಎಣ್ಣೆಯುಕ್ತ ಆಹಾರವನ್ನು ತಪ್ಪಿಸಿ. ಹುರಿದ ಮತ್ತು ಎಣ್ಣೆಯುಕ್ತ ಆಹಾರ ಪದಾರ್ಥಗಳು ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿಸುತ್ತದೆ.ಅದೇ ರೀತಿ ಬೇಸಿಗೆಯಲ್ಲಿ ಮಾಂಸಾಹಾರ ಸೇವನೆಯನ್ನು ಮಿತಗೊಳಿಸಲು ಪ್ರಯತ್ನಿಸಿ.
ಇದನ್ನು ಓದಿ: Health Tips: ಬೇಸಿಗೆಯಲ್ಲಿ ಯಾವ ಬಗೆಯ ಚರ್ಮದ ಆರೈಕೆ ಹೇಗಿರಬೇಕು?
ಆಲ್ಕೋಹಾಲ್ ಅಥವಾ ಕೆಫೀನ್ ಅನ್ನು ಮಿತವಾಗಿ ಸೇವಿಸಿ: ಬೇಸಿಗೆಯಲ್ಲಿ ಆಲ್ಕೋಹಾಲ್ ಅಥವಾ ಕೆಫಿನ್ ನನ್ನು ಮಿತವಾಗಿ ಸೇವಿಸಿ. ಅತಿಯಾಗಿ ಕೆಫಿನ್ ಅಂಶವನ್ನು ಸೇವಿಸುವುದರಿಂದ ನೀವು ಆಹಾರವನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಲು ಸಾಧ್ಯವಾಗುವುದಿಲ್ಲ. ಕೆಫಿನ್ ಸೇವನೆ ಹೆಚ್ಚಾದರೆ ಗ್ಯಾಸ್ಟಿಕ್ ಸಮಸ್ಯೆ ,ಜೀರ್ಣಕ್ರಿಯೆ ಸಮಸ್ಯೆ ಉಂಟು ಮಾಡುತ್ತದೆ.ಹಾಗಾಗಿ ಬೇಸಿಗೆಯಲ್ಲಿ ಆದಷ್ಟು ಆಲ್ಕೋಹಾಲ್ ಮತ್ತು ಕೆಫೀನ್ ಅಂಶವಿರುವ ಆಹಾರ ಪದಾರ್ಥಗಳನ್ನು ಸೇವಿಸುವುದನ್ನು ಕಡಿಮೆ ಮಾಡಿ.
ಸೋಡಾ :ಬೇಸಿಗೆಯಲ್ಲಿ ಕಾರ್ಬೊನೇಟೆಡ್ ಪಾನೀಯಗಳ ಸೇವನೆ ಮಾಡಲೇ ಬಾರದು. ಹೆಚ್ಚಿನ ಜನರು ಬಾಯಾರಿಕೆ ಸಂದರ್ಭ ಸೋಡಾದಂತಹ ಜ್ಯೂಸ್ ಸೇವನೆ ಮಾಡುತ್ತೀರಿ. ಆದರೆ ಇದು ಇದು ಅತ್ಯಂತ ಅನಾ ರೋಗ್ಯಕರ ಪಾನಿಯವಾಗಿದ್ದು, ಇದರಲ್ಲಿ ಸಕ್ಕರೆಯು ಅಧಿಕವಾಗಿರುತ್ತದೆ.