ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Arshad Warsi: ಬಾಲಿವುಡ್‌ ನಟನ ವಿರುದ್ಧ RCB ಫ್ಯಾನ್‌ ಕೆಂಡಾಮಂಡಲ; ಕಾರಣ ಏನ್‌ ಗೊತ್ತಾ?

Actor Arshad Warsi: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು RCB ಮುಖಾಮುಖಿಯಾಗಿತ್ತು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡಕ್ಕೆ ಗೆಲುವು ಒದಗಿಸುವಲ್ಲಿ ವಿರಾಟ್ ಕೊಹ್ಲಿಯೇ ವಿಫಲರಾಗಿದ್ದರು. ವಿರಾಟ್ ನನ್ನು ಗುಜರಾತ್ ಟೈಟನ್ಸ್ ನ ವೇಗಿ ಆಟಗಾರ ಅರ್ಷದ್ ಖಾನ್ ಔಟ್ ಮಾಡಿದ್ದರು.ಆದರೆ ಆರ್ ಸಿಬಿ ಫ್ಯಾನ್ಸ್ ಹೆಸರನ್ನು ತಪ್ಪಾಗಿ ಅರ್ಥೈಸಿಕೊಂಡು ಅರ್ಷದ್ ಖಾನ್ ಬದಲಿಗೆ ಅರ್ಷದ್ ವಾರ್ಸಿ ಅವರ ಫೋಟೋಗೆ ಟ್ರೋಲ್, ಮೀಮ್ಸ್‌ ಮಾಡಿದ್ದಾರೆ.

ಬಾಲಿವುಡ್ ನಟನ ವಿರುದ್ಧ RCB ಫ್ಯಾನ್ಸ್ ಕಿಡಿ; ಕಾರಣ ಏನು?

Profile Pushpa Kumari Apr 3, 2025 4:21 PM

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ತಂಡವು ಈ ಬಾರಿ ಐಪಿಎಲ್ 18ನೇ ಆವೃತ್ತಿಯಲ್ಲಿ ಮೊದಲೆರಡು ಪಂದ್ಯಗಳಲ್ಲಿ ಜಯಗಳಿಸಿತ್ತು. ಈ ಮೂಲಕ ಬ್ಯಾಕ್‌ ಟು ಬ್ಯಾಕ್‌ ಗೆಲುವಿನ ಬಳಿಕ ಕಪ್ ಗೆಲ್ಲುವ ಭರವಸೆ ಹೆಚ್ಚಿತ್ತು. ಆದರೆ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸೋಲುವ ಮೂಲಕ ಆರ್‌ಸಿಬಿ ಮುಖಭಂಗ ಎದುರಿಸುವಂತಾಗಿದೆ. ಆರ್‌ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿದ್ದು ಗೆಲುವಿನ ಭರವಸೆ ಹುಟ್ಟುಹಾಕಿತ್ತು. ಕ್ರಿಕೆಟ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli) ಓಪನಿಂಗ್ ಬ್ಯಾಟಿಂಗ್ ಅದ್ಬುತವಾಗಿರುತ್ತೆ ಎಂದು ಕುತೂಹಲದ್ದಲ್ಲಿದ್ದ ಆರ್‌ಸಿಬಿ ಫ್ಯಾನ್ಸ್ ಗೆ ಬಾರಿ ನಿರಾಸೆ ಆಗಿತ್ತು. ಎರಡನೇ ಓವರ್‌ಗೆ ನಾಲ್ಕು ಎಸೆತದಲ್ಲಿಯೇ ಕಿಂಗ್ ಕೊಹ್ಲಿ ಔಟ್ ಆಗಿದ್ದು, ವಿರಾಟ್‌ನನ್ನು ಗುಜರಾತ್ ಟೈಟನ್ಸ್‌ನ ವೇಗಿ ಆಟಗಾರ ಅರ್ಷದ್ ಖಾನ್ ಔಟ್ ಮಾಡಿದ್ದರು. ಆದರೆ ಕಿಂಗ್ ಕೊಹ್ಲಿ ಔಟ್ ಆಗುತ್ತಿದ್ದಂತೆ ಬೈಗುಳ ತಿಂದದ್ದು ಮಾತ್ರ ಬಾಲಿವುಡ್ ನಟ ಎಂಬುದೇ ಇಲ್ಲಿ ಆಶ್ಚರ್ಯವಾಗಿದೆ. ಕೊಹ್ಲಿ ಔಟ್ ಆಗಿದ್ದಕ್ಕೆ ಬಾಲಿವುಡ್ ನಟ ಅರ್ಷದ್ ವಾರ್ಸಿಯನ್ನು ಆರ್ ಸಿಬಿ ಫ್ಯಾನ್ಸ್ ತರಾಟೆಗೆ ತೆಗೆದು ಕೊಂಡಿದ್ದಾರೆ.

RCB ಫ್ಯಾನ್ಸ್‌ ಪೋಸ್ಟ್‌ ಇಲ್ಲಿದೆ



ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು RCB ಮುಖಾಮುಖಿಯಾಗಿತ್ತು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ತಂಡಕ್ಕೆ ಗೆಲುವು ಒದಗಿಸುವಲ್ಲಿ ವಿರಾಟ್ ಕೊಹ್ಲಿಯೇ ವಿಫಲರಾಗಿದ್ದರು. ವಿರಾಟ್ ನನ್ನು ಗುಜರಾತ್ ಟೈಟನ್ಸ್ ನ ವೇಗಿ ಆಟಗಾರ ಅರ್ಷದ್ ಖಾನ್ ಔಟ್ ಮಾಡಿದ್ದರು.ಆದರೆ ಆರ್ ಸಿಬಿ ಫ್ಯಾನ್ಸ್ ಹೆಸರನ್ನು ತಪ್ಪಾಗಿ ಅರ್ಥೈಸಿಕೊಂಡು ಅರ್ಷದ್ ಖಾನ್ ಬದಲಿಗೆ ಅರ್ಷದ್ ವಾರ್ಸಿ ಅವರ ಫೋಟೋಗೆ ಟ್ರೋಲ್, ಮೀಮ್ಸ್‌ ಮಾಡಿದ್ದಾರೆ.

ಇದನ್ನು ಓದಿ: Virat Kohli: ಚೆನ್ನೈ ಪಂದ್ಯದಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

ಅಸಲಿಗೆ ನಟ ಅರ್ಷದ್ ವಾರ್ಸಿ ಮತ್ತು ವಿರಾಟ್ ಕೊಹ್ಲಿ ಸೋಲಿಗೆ ಯಾವುದೇ ಸಂಬಂಧ ಇಲ್ಲ. ಹಾಗಿದ್ದರೂ ವಿರಾಟ್ ಸೋತಿದ್ದು ಅರ್ಷಿದ್ ಕಾರಣಕ್ಕೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಅಭಿಮಾನಿಗಳು ಗರಂ ಆಗಿದ್ದಾರೆ. ಆರ್‌ಸಿಬಿ ಅಭಿಮಾನಿಗಳ ಈ ಅತಿರೇಖದ ವರ್ತನೆ ಬಾಲಿವುಡ್ ನಟ ಅರ್ಷದ್ ವಾರ್ಸಿ ಅವರನ್ನು ಶಾಕ್ ಆಗುವಂತೆ ಮಾಡಿದೆ. ಈ ಹಿಂದೆ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ವಿರಾಟ್ ಕೊಹ್ಲಿಯ ಕ್ಯಾಚ್ ಹಿಡಿದಿದ್ದ ನ್ಯೂಝಿಲೆಂಡ್​ನ ಗ್ಲೆನ್ ಫಿಲಿಪ್ಸ್​ಗೆ ಬೈಯ್ಯುವ ಬದಲಿಗೆ ಕೊಹ್ಲಿ ಫ್ಯಾನ್ಸ್ ಫಿಲಿಪ್ಸ್ ಕಂಪೆನಿಯನ್ನು ಸಹ ಟಾರ್ಗೆಟ್ ಮಾಡಿದ್ದರು. ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಗುಜರಾತ್ ಟೈಟನ್ಸ್ ತಂಡವು 8 ವಿಕೆಟ್‌ಗಳ ಕಬಳಿಸಿ ಅತ್ಯುತ್ತಮ ಆಟದ ಪ್ರದರ್ಶನ ನೀಡಿದೆ. ಮುಂಬರುವ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲುವ ಓಟದತ್ತಾ ಮತ್ತೆ ಕಂಬ್ಯಾಕ್ ಆಗುತ್ತಾ ಎಂದು ಕಾದು ನೋಡಬೇಕು.