ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲೋಕೋ ಪೈಲಟ್ ಮೇಲೆ ಪತ್ನಿಯಿಂದಲೇ ಡೆಡ್ಲಿ ಅಟ್ಯಾಕ್‌-ವಿಡಿಯೊ ವೈರಲ್

ಲೋಕೋ ಪೈಲಟ್‌ವೊಬ್ಬರ ಮೇಲೆ ಪತ್ನಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಆತ ರಹಸ್ಯವಾಗಿ ರೆಕಾರ್ಡ್ ಮಾಡಿದ್ದು, ಇದೀಗ ಆ ವಿಡಿಯೋವನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌(Viral Video) ಆಗುತ್ತಿದೆ.

ಲೋಕೋ ಪೈಲಟ್ ಮೇಲೆ ಪತ್ನಿಯಿಂದಲೇ ಡೆಡ್ಲಿ ಅಟ್ಯಾಕ್‌

ಮಧ್ಯಪ್ರದೇಶ: ರೈಲ್ವೆ ಉದ್ಯೋಗಿಯೊಬ್ಬರು ಪತ್ನಿಯಿಂದ ದೌರ್ಜನ್ಯಕ್ಕೆ ಒಳಗಾಗಿದ್ದು, ಇದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬಳಿಕ ಸಾಕ್ಷಿ ಸಮೇತವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪತ್ನಿಯ ಮೇಲೆ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿರುವ ಅವರು, ಹಲ್ಲೆಯ ವಿಡಿಯೊವನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಲೋಕೋ ಪೈಲಟ್ ಆಗಿರುವ ಸತ್ನಾ ಜಿಲ್ಲೆಯ 30 ವರ್ಷದ ಲೋಕೇಶ್ ಮಾಂಝಿ ಅವರು ಪತ್ನಿ ಹರ್ಷಿತಾ ರಾಯಕ್ವಾರ್ ಅವರು ತಮ್ಮ ಮೇಲೆ ಹಲವು ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಲೋಕೇಶ್ ರಹಸ್ಯವಾಗಿ ರೆಕಾರ್ಡ್ ಮಾಡಿದ ವಿಡಿಯೋವನ್ನು ಕೂಡ ಪೊಲೀಸರಿಗೆ ನೀಡಿದ್ದಾರೆ. ಈ ವಿಡಿಯೊದಲ್ಲಿ(Viral Video) ಹರ್ಷಿತಾ ತಮ್ಮ ಮನೆಯಲ್ಲಿ ಲೋಕೇಶ್ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ಕಾಣಬಹುದು.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಸಾಕಷ್ಟು ಮಂದಿಯ ಗಮನ ಸೆಳೆದಿದೆ. ಇದನ್ನು ಪುರುಷರ ಹಕ್ಕುಗಳ ಗುಂಪು, ಎನ್ ಸಿಎಂ ಇಂಡಿಯಾ ಕೌನ್ಸಿಲ್ ಫಾರ್ ಮೆನ್ ಅಫೇರ್ಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿತ್ತು. ಇದರಿಂದ ಈ ವಿಡಿಯೋ ಬಹುಬೇಗನೆ ವೈರಲ್ ಆಯಿತು.

ವಿಡಿಯೊ ಇಲ್ಲಿದೆ



ಎಕ್ಸ್ ನಲ್ಲಿ ವಿಡಿಯೊ ಹಂಚಿಕೊಂಡಿರುವ ಪುರುಷರ ಹಕ್ಕುಗಳ ಗುಂಪು, ಮಧ್ಯಪ್ರದೇಶದ ಅಜಯ್‌ಗಢದ ಸತ್ನಾದಲ್ಲಿರುವ 30 ವರ್ಷದ ಲೋಕೋ ಪೈಲಟ್ ಲೋಕೇಶ್ ಕುಮಾರ್ ಮಾಂಝಿ ಅವರ ಮೇಲೆ ಪತ್ನಿ ಹರ್ಷಿತಾ ಮತ್ತು ಅತ್ತೆ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಕೌಟುಂಬಿಕ ಹಿಂಸಾಚಾರದಿಂದ ಗಂಡನನ್ನು ರಕ್ಷಿಸಲು ಭಾರತದಲ್ಲಿ ಯಾವುದೇ ಕಾನೂನು ಇಲ್ಲ. ಯಾಕೆಂದರೆ ಕಾನೂನಿನ ಪ್ರಕಾರ ಮಹಿಳೆ ಮಾತ್ರ ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾಗುವವಳು ಮತ್ತು ದೂರುದಾರಳಾಗಬಹುದು. ಇದು ಎಂತಹ ನಾಚಿಕೆಗೇಡು ಎಂದು ಹೇಳಿದೆ. ವಿಡಿಯೋ ವೈರಲ್ ಆದ ಬಳಿಕ ಪತ್ನಿ ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಪತಿಯ ಪೂರ್ವಜರ ಮನೆಗೆ ಹೋಗಿ ಕ್ಷಮೆಯಾಚಿಸಲು ಬಯಸುತ್ತಿದ್ದಾಳೆ. ಈಗ ಅವಳನ್ನು ನಂಬಬಹುದೇ ಎಂದು ಪ್ರಶ್ನಿಸಿದೆ.

ಏನಿದೆ ವಿಡಿಯೊದಲ್ಲಿ ?

ವೈರಲ್ ಆಗಿರುವ ವಿಡಿಯೋದಲ್ಲಿ ಹರ್ಷಿತಾ ಅವರು ಲೋಕೇಶ್ ಅವರ ಟೀ ಶರ್ಟ್ ಅನ್ನು ಎಳೆದು ಅವರಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಮಗಳು ಹಲ್ಲೆ ಮಾಡುವುದನ್ನು ಮುಂದುವರಿಸುತ್ತಿದ್ದರೂ ಅತ್ತೆ ಅದನ್ನು ತಡೆಯುವ ಪ್ರಯತ್ನ ಮಾಡಿದರೂ ಹರ್ಷಿತಾ ಆಕೆಯನ್ನು ನಿರ್ಲಕ್ಷಿಸಿ ಹಲ್ಲೆಯನ್ನು ಮುಂದುವರಿಸಿದ್ದಾಳೆ. ಸಂಬಂಧಿ ಯುವಕನೊಬ್ಬ ಮಗುವನ್ನು ಹಿಡಿದುಕೊಂಡು ಘಟನೆಯನ್ನು ವೀಕ್ಷಿಸುತ್ತಿರುವುದು ಕೂಡ ಈ ವಿಡಿಯೋದಲ್ಲಿ ಸೆರೆಯಾಗಿದೆ.

ಹರ್ಷಿತಾಳ ತಂದೆ ಪೆಟ್ರೋಲ್ ಪಂಪ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ವರದಕ್ಷಿಣೆ ತೆಗೆದುಕೊಳ್ಳದೆ ನಾನು ಆಕೆಯನ್ನು ಮದುವೆಯಾಗಿದ್ದೇನೆ. ಆದರೂ ಆಕೆ ನನ್ನ ಪೋಷಕರೊಂದಿಗೆ ನಾನು ಸಂವಹನ ನಡೆಸುವುದನ್ನು ತಡೆಯುತ್ತಿದ್ದಾಳೆ. ಅವರು ನಮ್ಮ ಮನೆಗೆ ಬರುವುದನ್ನು ಕಡಿಮೆ ಮಾಡಿಸಿದ್ದಾಳೆ. ನನಗೆ ಸ್ನೇಹಿತರೊಂದಿಗೆ ಸಂವಹನ ನಡೆಸಲು ಬಿಡುತ್ತಿಲ್ಲ ಎಂದು ಲೋಕೇಶ್ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video: ವಿಮಾನ ನಿಲ್ದಾಣದಲ್ಲಿ ಅರೆಬೆತ್ತಲಾದ ಮಹಿಳೆ- ವಿಡಿಯೊ ಪುಲ್‌ ವೈರಲ್

ಈ ಕುರಿತು ಪೊಲೀಸರಿಗೆ ದೂರು ನೀಡಿದರೆ ತನಗೆ ಮತ್ತು ಮಗುವಿಗೆ ಹಾನಿ ಮಾಡುವುದಾಗಿಯೂ ಆಕೆ ಬೆದರಿಕೆ ಹಾಕಿದ್ದಾಳೆ ಎಂದು ಲೋಕೇಶ್ ಹೇಳಿಕೊಂಡಿದ್ದಾರೆ. ಒಮ್ಮೆ ಆಕೆ ಸೊಳ್ಳೆ ನಿವಾರಕ ಸೇವಿಸಿದ್ದಾಳೆ. ಇದರಿಂದ ನನಗೆ ತುಂಬಾ ಭಯವಾಗಿದೆ ಮತ್ತು ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ದೂರು ದಾಖಲಿಸಿರುವ ಪೊಲೀಸ್ ವರಿಷ್ಠಾಧಿಕಾರಿ ಸಾಯಿ ಕೃಷ್ಣ ಎಸ್. ತೋಟಾ ಅವರು ಲೋಕೇಶ್ ಅವರ ದೂರು ಮತ್ತು ಸಾಕ್ಷ್ಯವನ್ನು ಸ್ವೀಕರಿಸಿರುವುದಾಗಿ ಹೇಳಿಕೊಂಡಿದ್ದಾರೆ. ತನಿಖೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.