'ಯಶಸ್ವಿ ಜೈಸ್ವಾಲ್‌ಗೆ 9, ಹಾರ್ದಿಕ್ ಪಾಂಡ್ಯಗೆ 7': ಟೀಮ್ ಇಂಡಿಯಾ ಆಟಗಾರರಿಗೆ ರೇಟಿಂಗ್ ನೀಡಿದ ಕ್ರಿಸ್ ಗೇಲ್!
Chris Gayle Rates Indian Cricketers: ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್, ಭಾರತ ಕ್ರಿಕೆಟ್ ತಂಡದ ಪ್ರಸ್ತುತ ತಲೆಮಾರಿನ ಆಟಗಾರರಿಗೆ ರೇಟಿಂಗ್ ನೀಡಿದ್ದಾರೆ. ಯಶಸ್ವಿ ಜೈಸ್ವಾಲ್‌ಗೆ 9 ಅಂಕ ನೀಡಿದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ 7 ಅಂಕವನ್ನು ನೀಡಿದ್ದಾರೆ.

ಭಾರತ ತಂಡದ ಆಟಗಾರರಿಗೆ ರೇಟಿಂಗ್ ನೀಡಿದ ಕ್ರಿಸ್ ಗೇಲ್.

ನವದೆಹಲಿ: ಪ್ರಸ್ತುತ ಭಾರತ ಕ್ರಿಕೆಟ್ (Indian Cricket Team) ತಂಡ ಅತ್ಯಂತ ಬಲಿಷ್ಠವಾಗಿದ. ಏಕೈಕ ಸಮಯದಲ್ಲಿ ಎರಡು ತಂಡಗಳನ್ನು ಆಯ್ಕೆ ಮಾಡಬಹುದು ಹಾಗೂ ಯಾವುದೇ ತಂಡದ ವಿರುದ್ಧ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಟಿ20ಐ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ ಭಾರತ ಎರಡು ತಂಡಗಳನ್ನು ಹೊಂದಿದೆ. ಪೈಪೋಟಿ ಅತ್ಯಂತ ಕಠಿಣವಾಗಿರುವ ಕಾರಣ ಹಲವು ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿ. ಈ ಟೂರ್ನಿಯಿಂದ ಹಲವಾರು ಪ್ರತಿಭಾವಂತ ಆಟಗಾರರು ಬೆಳಕಿಗೆ ಬಂದಿದ್ದಾರೆ. ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್ ಹಾಗೂ ರಿಷಭ್ ಪಂತ್ (Rishabh Pant) ಅವರು ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದರು.
ಇನ್‌ಸೈಡ್‌ಸ್ಪೋರ್ಟ್ಸ್ ಸಂದರ್ಶನದಲ್ಲಿ ಭಾಗವಹಿಸಿದ್ದ ವೆಸ್ಟ್ ಇಂಡೀಸ್ ಮಾಜಿ ಸ್ಪೋಟಕ ಆರಂಭಿಕ ಕ್ರಿಸ್ ಗೇಲ್, ಭಾರತೀಯ ಕ್ರಿಕೆಟಿಗರಿಗೆ ರೇಟಿಂಗ್ ನೀಡಿದ್ದಾರೆ. ಭಾರತ ಟೆಸ್ಟ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರಿಗೆ 10 ಅಂಕಗಳಿಗೆ 9 ಅಂಕವನ್ನು ನೀಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಈಗಾಗಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದಾರೆ ಹಾಗೂ ಹಲವು ದಾಖಲೆಗಳನ್ನು ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಮಿಂಚಿದರೆ, ಏಕದಿನ ಕ್ರಿಕೆಟ್‌ನಲ್ಲಿ ಮಿಂಚುತ್ತಿರುವ ಶುಭಮನ್ ಗಿಲ್‌ಗೆ ವಿಂಡೀಸ್ ದಿಗ್ಗಜ 10ಕ್ಕೆ 9 ಅಂಕವನ್ನು ನೀಡಿದ್ದಾರೆ.
IPL 2025: ವಿರಾಟ್ ಕೊಹ್ಲಿಯ ಬೆರಳಿನ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಆರ್‌ಸಿಬಿ ಕೋಚ್ ಆಂಡಿ ಫ್ಲವರ್!
ಟಿ20ಐ ಕ್ರಿಕೆಟ್‌ನಲ್ಲಿ ತಮ್ಮ ಸ್ಟ್ರೈಕ್ ರೇಟ್ ಮೂಲಕ ಗಮನ ಸೆಳೆದಿರುವ ಅಭಿಷೇಕ್ ಶರ್ಮಾಗೆ ಕ್ರಿಸ್ ಗೇಲ್ 10 ಕ್ಕೆ 8 ಅಂಕವನ್ನು ನೀಡಿದ್ದಾರೆ. ಇನ್ನು ಕನ್ನಡಿಗ ಕೆಎಲ್ ರಾಹುಲ್‌ಗೆ 10ಕ್ಕೆ 8 ಅಂಕವನ್ನು ಕೊಟ್ಟಿದ್ದಾರೆ. ಕೆಎಲ್ ರಾಹುಲ್ ಅವರು ಅದ್ಭುತ ಪ್ರತಿಭೆಯನ್ನು ಹೊಂದಿದ್ದಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ. ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ಸತತವಾಗಿ ಎಡವುತ್ತಿದ್ದಾರೆ. ಇನ್ನು ಐಪಿಎಲ್ ಸ್ಟಾರ್ ಆಟಗಾರ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಋತುರಾಜ್ ಗಾಯಕ್ವಾಡ್‌ಗೆ ಕ್ರಿಸ್ ಗೇಲ್ 7 ಅಂಕವನ್ನು ನೀಡಿದ್ದಾರೆ. ಈಗಾಗಲೇ ಭಾರತ ತಂಡದ ಪರ ಹಲವು ಪಂದ್ಯಗಳನ್ನು ಆಡಿದ್ದಾರೆ. ಆದರೆ, ಅವರು ತಮ್ಮ ಸಾಮರ್ಥ್ಯವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಬೀತುಪಡಿಸಬೇಕಾದ ಅಗತ್ಯವಿದೆ.
IPL 2025: ʻಐಪಿಎಲ್ ಸರಾಸರಿ ದಾಖಲೆʼ-ರೋಹಿತ್ ಶರ್ಮಾ ವಿರುದ್ಧ ಮೈಕಲ್ ವಾನ್ ಟೀಕೆ!
ಟಿ20ಐ ಕ್ರಿಕೆಟ್‌ನ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಒಬ್ಬರು ಎಂದು ನಂಬಿರುವ ವೆಸ್ಟ್ ಇಂಡೀಸ್ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್, ಭಾರತ ಟಿ20ಐ ತಂಡದ ನಾಯಕನಿಗೆ 9 ಅಂಕವನ್ನು ನೀಡಿದ್ದಾರೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ ಹಾಗೂ ಪಂಜಾಬ್ ಕಿಂಗ್ಸ್ ಪರ ಅತ್ಯತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ಶ್ರೇಯಸ್ ಅಯ್ಯರ್‌ಗೂ 8 ಅಂಕವನ್ನು ನೀಡಿರುವ ಕ್ರಿಸ್ ಗೇಲ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ 7 ಅಂಕವನ್ನು ನೀಡಲಾಗಿದೆ. ಏಕೆಂದರೆ, ಭಾರತ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಡೆಪ್ತ್ ತಂದುಕೊಡುವ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿ ಜೀವನದಲ್ಲಿ ಗಾಯದಿಂದ ಸಾಕಷ್ಟು ಹಿನ್ನಡೆ ಅನುಭವಿಸಿದ್ದಾರೆ. ಇನ್ನು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರನ್ನು ಹೊಗಳಿಸಿದ ವಿಂಡೀಸ್ ದಿಗ್ಗಜ 10ಕ್ಕೆ 8 ಅಂಕವನ್ನು ನೀಡಿದ್ದಾರೆ.