ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಮ್ಮ ಮದ್ವೆ ದಿನವೂ ಪ್ರಾಣಿಪ್ರೇಮ ಮೆರೆದ ಆದರ್ಶ ದಂಪತಿ; ವಿಡಿಯೊ ನೋಡಿ

ಪ್ರಾಣಿ ಸ್ನೇಹಿ ದಂಪತಿ ಮಾಯಾಂಕ್ ಮೈಥಾನಿ ಮತ್ತು ಮುಗ್ಧಾ ಖತ್ರಿ ತಮ್ಮ ಮದುವೆಯ ದಿನ ತಮಗಿರುವ ಪ್ರಾಣಿಪ್ರೇಮವನ್ನು ವ್ಯಕ್ತಪಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಈ ದಂಪತಿ ಮದುವೆಯ ದಿನ ಮೆರವಣಿಗೆಯಲ್ಲಿ ಪ್ರಾಣಿಗಳ ಬಗ್ಗೆ ಸಹಾನುಭೂತಿಯ ಅದ್ಭುತವಾದ ಸಂದೇಶವನ್ನು ಹಂಚಿಕೊಂಡಿದ್ದು, ಈ ವಿಡಿಯೊ ವೈರಲ್(Viral Video) ಆಗಿ ನೆಟ್ಟಿಗರ ಮನಗೆದ್ದಿದೆ.

ಈ ದಂಪತಿಯ ಪ್ರಾಣಿಪ್ರೇಮ ಕಂಡು ನೆಟ್ಟಿಗರು ಫುಲ್‌ ಫಿದಾ!

Profile pavithra Apr 3, 2025 5:21 PM

ನವದೆಹಲಿ: ಕೆಲವರಿಗೆ ಪ್ರಾಣಿಗಳ ಮೇಲಿನ ಪ್ರೀತಿ ಎಷ್ಟಿರುತ್ತದೆ ಎಂದರೆ ಸಾಕುಪ್ರಾಣಿಗಳನ್ನು ತಮ್ಮ ಮನೆಯ ಸದಸ್ಯರಂತೆ ಬಹಳ ಮುದ್ದಿನಿಂದ ಸಾಕುತ್ತಾರೆ. ಅದೇ ರೀತಿ ಇಲ್ಲೊಂದು ಪ್ರಾಣಿ ಸ್ನೇಹಿ ದಂಪತಿ ತಮ್ಮ ಮದುವೆಯ ದಿನ ತಮಗಿರುವ ಪ್ರಾಣಿಪ್ರೇಮವನ್ನು ವ್ಯಕ್ತಪಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ. ಪ್ರಾಣಿ ಪ್ರಿಯ ಮತ್ತು ರಕ್ಷಕ ದಂಪತಿ ಮಾಯಾಂಕ್ ಮೈಥಾನಿ ಮತ್ತು ಮುಗ್ಧಾ ಖತ್ರಿ ಅವರು ಪ್ರಾಣಿಗಳ ಬಗ್ಗೆ ಸಹಾನುಭೂತಿಯ ಅದ್ಭುತವಾದ ಸಂದೇಶವನ್ನು ಹಂಚಿಕೊಂಡಿದ್ದು, ಈ ವಿಡಿಯೊ ವೈರಲ್(Viral Video) ಆಗಿ ನೆಟ್ಟಿಗರ ಮನಗೆದ್ದಿದೆ.

ವೈರಲ್ ಆದ ವಿಡಿಯೊದಲ್ಲಿ ವರ ಸಾಂಪ್ರದಾಯಿಕ ಕುದುರೆ ಗಾಡಿಯಲ್ಲಿ ಬರುವ ಬದಲು ಕಾರಿನಲ್ಲಿ ಬಂದಿದ್ದಾನೆ ಹಾಗೂ ಕಾರಿನ ಸನ್ ರೂಫ್‍ನಲ್ಲಿ ನಿಂತು ಮದುವೆಯ ದಿನ ಕುದುರೆಯೇರಿ ಮೆರವಣಿಗೆ ಮಾಡುವ, ಶಾಪಿಂಗ್ ಮಾಡುವ ಬದಲು ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಿ ಎಂಬ ಪೋಸ್ಟರ್ ಹಿಡಿದುಕೊಂಡಿದ್ದಾನೆ. ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರುವ ಈ ವಿಡಿಯೊ ಈಗ ವೈರಲ್ ಆಗಿದೆ.

ದಂಪತಿಯ ಮದುವೆ ಮೆರವಣಿಗೆ ವಿಡಿಯೊ ಇಲ್ಲಿದೆ ನೋಡಿ...

ವರನು ತನ್ನ ಮದುವೆಯ ಮೆರವಣಿಗೆಯ ಸರಣಿ ಫೋಟೋಗಳನ್ನು ತನ್ನ ಸೋಶಿಯಲ್ ಮಿಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದಾನೆ ಮತ್ತು ಈ ಹಿಂದೆ ಪಾರ್ಶ್ವವಾಯುವಿಗೆ ಒಳಗಾದ ಮಾಲೀಕನಿಂದ ಆತನ ನಾಯಿ ಲೂನಾವನ್ನು ದತ್ತು ತೆಗೆದುಕೊಂಡು ಇದೀಗ ಸೋಶಿಯಲ್ ಮೀಡಿಯಾ ನೆಟ್ಟಿಗರಿಗೆ ಅದನ್ನು ಪರಿಚಯಿಸಿದ್ದಾನೆ. ಅವರ ದತ್ತು ನಾಯಿ ಲೂನಾ ಕೂಡ 'ಬರಾತ್' ನ ಭಾಗವಾಗಿತ್ತು. ಆ ಮೂಲಕ ತಮ್ಮ ಮದುವೆ ಆಚರಣೆಯಲ್ಲಿ ನಾಯಿಗಳನ್ನು ಸೇರಿಸಿಕೊಳ್ಳುವ ಮೂಲಕ ಪ್ರಾಣಿಗಳ ಬಗ್ಗೆ ಸ್ವಲ್ಪ ಕಾಳಜಿ ತೋರಿ ವಿಶೇಷ ಸಂದರ್ಭಗಳಲ್ಲಿ ಅವುಗಳಿಗೂ ಆನಂದಿಸಲು ಅವಕಾಶ ನೀಡುವಂತೆ ದಂಪತಿ ಜನರನ್ನು ಕೇಳಿಕೊಂಡಿದ್ದಾರೆ.

ಅಲ್ಲದೇ ಪಟಾಕಿಗಳ ದೊಡ್ಡ ಶಬ್ದದಿಂದ ಪ್ರಾಣಿಗಳು ಹೆದರುತ್ತವೆ ಎಂದು ಗಮನಿಸಿದ ವರ ಮಾಯಾಂಕ್, ಮದುವೆಯಲ್ಲಿ ಯಾವುದೇ ಪಟಾಕಿಗಳನ್ನು ಬಳಸಿಲ್ಲವಂತೆ. ಹಾಗೂ ಇಂದಿನ ದಿನಗಳಲ್ಲಿ ಪ್ರಾಣಿಗಳನ್ನು ವ್ಯವಹಾರಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂಬುದಾಗಿ ಬೇಸರವ್ಯಕ್ತಪಡಿಸಿದ್ದಾನೆ.

ಈ ವಿಶಿಷ್ಟ ರೀತಿಯ ವಿವಾಹ ಆಚರಣೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಅದನ್ನು ಹಂಚಿಕೊಂಡಿದ್ದಾರೆ. ಮತ್ತು ಈ ಪ್ರಾಣಿ ಸ್ನೇಹಿ ವಿವಾಹವು ನೆಟ್ಟಿಗರಿಂದ ಮೆಚ್ಚುಗೆಯನ್ನು ಗಳಿಸಿದೆ. ಅವರು ಸಂಪ್ರದಾಯ ಪಾಲಿಸುವುದನ್ನು ಬಿಟ್ಟು ಪ್ರಾಣಿಗಳ ಬಗ್ಗೆ ದಯೆ ಮತ್ತು ಸಹಾನುಭೂತಿ ತೋರಿದ್ದಕ್ಕೆ ದಂಪತಿಯನ್ನು ನೆಟ್ಟಿಗರು ಹರಸಿ ಹಾರೈಸಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಸಾಲಗಾರರ ಕಾಟಕ್ಕೆ ಬೇಸತ್ತು ಅಂಗಾಂಗ ಮಾರಾಟಕ್ಕೆ ಮುಂದಾದ ರೈತ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

"ಅದ್ಭುತ! ದೇವರು ಈ ದಂಪತಿಯನ್ನು ಹರಸಿ ಹಾರೈಸಲಿ " ಎಂದು ಒಬ್ಬರು ಬರೆದಿದ್ದಾರೆ. ನೆಟ್ಟಿಗರು ಒಟ್ಟಾಗಿ ಈ ಮದುವೆಯನ್ನು 2025 ರಲ್ಲಿ ನೋಡಿದ "ಅತ್ಯುತ್ತಮ ವಿಷಯ" ಎಂದು ಕರೆದಿದ್ದಾರೆ. ಪೀಪಲ್ ಫಾರ್ ಅನಿಮಲ್ಸ್ (ಪಿಎಫ್ಎ) ಕೂಡ ವಿಡಿಯೊಗೆ ಪ್ರತಿಕ್ರಿಯಿಸಿ, ದಂಪತಿಯನ್ನು ಹೊಗಳಿದ್ದಾರೆ. ಹಲವಾರು ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರು ದಂಪತಿಯ ಚಿಂತನಶೀಲ ವಿವಾಹ ಉತ್ಸವಗಳನ್ನು ಮೆಚ್ಚಿಕೊಂಡಿದ್ದಾರೆ.