Wednesday, 11th December 2024

ಡಿಕೆಶಿ ಮುಂಬೈ ನಿವಾಸದಲ್ಲಿ ಮೂರು ಕೋಟಿ ರೂಪಾಯಿ ಪತ್ತೆ

ಮುಂಬೈ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಮುಂಬೈ ನಿವಾಸದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಸೋಮವಾರ ಬೆಳಿಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಡಿಕೆ ಸಹೋದರರಿಗೆ ಸಂಬಂಧಪಟ್ಟ ನಿವಾಸ, ಕಚೇರಿ ದಾಳಿ ನಡೆಸಿದೆ.

ಇದಕ್ಕೂ ಮುನ್ನ, ಡಿ.ಕೆ.ಶಿವಕುಮಾರ್‌ ಕಚೇರಿಯಲ್ಲಿ ಶೋಧ ನಡೆಸಿದಾಗ, ಐವತ್ತು ಲಕ್ಷಕ್ಕಿಂತ ಹೆಚ್ಚು ನಗದು ಪತ್ತೆಯಾಗಿದೆ ಎಂದು ವರದಿಯಾಗಿತ್ತು.