Friday, 13th December 2024

ಯುಪಿಎಲ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ: 23 ಕಾರ್ಮಿಕರಿಗೆ ಗಾಯ

ಭರೂಚ್ : ಗುಜರಾತ್‌ ರಾಜ್ಯದ ಭರೂಚ್ ಜಿಲ್ಲೆಯ ಜಗಡಿಯಾದಲ್ಲಿರುವ ಯುಪಿಎಲ್ ರಾಸಾಯನಿಕ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, 23 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.

ಸ್ಫೋಟದ ತೀವ್ರತೆಗೆ ಕಾರ್ಖಾನೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮನೆಯ ಕಿಟಿಕಿ ಗಾಜುಗಳು ಒಡೆದಿವೆ ಎಂದು ತಿಳಿದು ಬಂದಿದೆ. ಮಧ್ಯರಾತ್ರಿ ಯುನೈಟೆಡ್ ಫಾಸ್ಪರಸ್ ಲಿಮಿಟೆಡ್ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇನ್ಸ್ ಪೆಕ್ಟರ್ ಪಿ.ಎಚ್.ವಾಸವಾ ತಿಳಿಸಿದ್ದಾರೆ.

20 ಕಾರ್ಮಿಕರು ಗಾಯಗೊಂಡಿದ್ದಾರೆ. ಎಂಟು ಮಂದಿಯನ್ನು ಭರೂಚ್ ಮತ್ತು ಅಂಕಲ್ೇಶ್ವರ್ ಆಸ್ಪತ್ರೆಗಳಿಗೆ ದಾಖಲಿಸ ಲಾಗಿದ್ದು, ಉಳಿದ 12 ಮಂದಿ ಪ್ರಾಥಮಿಕ ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿದ್ದಾರೆ’ ಎಂದು ಹೇಳಿದರು.

15 ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬೆಳಗ್ಗೆ ಬೆಂಕಿ ಯನ್ನು ಹತೋಟಿಗೆ ತರಲಾಯಿತು ಎಂದು ತಿಳಿಸಿದರು.