Friday, 13th December 2024

ನೀಟ್ ಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ

ವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಗೆ ತಯಾರಿ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ಯೊಬ್ಬಳು ರಾಜಸ್ಥಾನದ ಕೋಟಾದ ಹಾಸ್ಟೆಲ್ ನಲ್ಲಿ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದು ಈ ವರ್ಷದ ಎಂಟನೇ ಆತ್ಮಹತ್ಯೆ ಮತ್ತು ಎರಡು ದಿನಗಳಲ್ಲಿ ಇಂತಹ ಎರಡನೇ ಘಟನೆಯಾಗಿದೆ.

ಸಂತ್ರಸ್ತೆ ಸೌಮ್ಯ ಲಕ್ನೋ ನಿವಾಸಿ. ನೀಟ್ ತಯಾರಿಯ ಭಾಗವಾಗಿ ಅವರು ಖಾಸಗಿ ಕೋಚಿಂಗ್ ತರಗತಿಗಳಿಗೆ ಹಾಜರಾಗುತ್ತಿದ್ದರು. ಆಕೆಯ ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಆಕೆಯ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಸೌಮ್ಯ ಅವರ ಕುಟುಂಬ ಕೋಟಾಕ್ಕೆ ಬಂದ ನಂತರ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಾರ್ಚ್ 25 ರಂದು ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿ ಉರುಜ್ ಖಾನ್ (20) ಕೋಟಾದ ತನ್ನ ಬಾಡಿಗೆ ಕೋಣೆಯ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಉತ್ತರ ಪ್ರದೇಶದ ಕನೌಜ್ ಮೂಲದವರು.

ಕಳೆದ ವರ್ಷ, ದೇಶದ ‘ಕೋಚಿಂಗ್ ಹಬ್’ ಎಂದು ಕರೆಯಲ್ಪಡುವ ಕೋಟಾದಲ್ಲಿ ನೀಟ್ ಪರೀಕ್ಷೆಗೆ ತಯಾರಿ ನಡೆಸುವಾಗ 29 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.