Monday, 16th September 2024

ಇಂದಿನಿಂದ ರಾಷ್ಟ್ರಪತಿ ಮುರ್ಮು 3 ದಿನ ಒಡಿಶಾ, ಆಂಧ್ರಪ್ರದೇಶ ಪ್ರವಾಸ

ವದೆಹಲಿ: ಇಂದಿನಿಂದ ರಾಷ್ಟ್ರಪತಿ ಮುರ್ಮು ಅವರು, 3 ದಿನಗಳ ಕಾಲ ಒಡಿಶಾ, ಆಂಧ್ರಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನ.20-22ರವರೆಗೆ ಒಡಿಶಾ ಮತ್ತು ಆಂಧ್ರಪ್ರದೇಶಕ್ಕೆ ಭೇಟಿ ನೀಡಲಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ನ.20ರಂದು ಮುರ್ಮು ಅವರು, ‘ಒಡಿಶಾದ ಬರಿಪದದಲ್ಲಿ ಅಖಿಲ ಭಾರತ ಸಂತಾಲಿ ಲೇಖಕರ ಸಂಘದ 36ನೇ ವಾರ್ಷಿಕ ಸಮ್ಮೇಳನದ ಉದ್ಘಾಟನೆ ನೆರವೇರಿಸಲಿದ್ದಾರೆ. ಅದೇ ದಿನ, ಅವರು ಕುಲಿಯಾನದಲ್ಲಿ ಏಕಲವ್ಯ ಮಾದರಿ ವಸತಿ ಶಾಲೆಯನ್ನು ಸಹ ಉದ್ಘಾಟಿಸಲಿದ್ದಾರೆ’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ನ.21 ರಂದು ಪಹಾದ್‌ಪುರ ಗ್ರಾಮದಲ್ಲಿ ಕೌಶಲ್ಯ ತರಬೇತಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ. ತರುವಾಯ ಬದಂಪಹಾರ್ ರೈಲು ನಿಲ್ದಾಣಕ್ಕೆ ಭೇಟಿ ಅಲ್ಲಿ ಅವರು ಮೂರು ಹೊಸ ರೈಲು(ಬದಂಪಹಾರ್- ಟಾಟಾನಗರ, ಬದಂಪಹಾರ್-ರೂರ್ಕೆಲಾ ಎಕ್ಸ್‌ಪ್ರೆಸ್ ಮತ್ತು ಬದಂಪಹಾರ್-ಶಾಲಿಮಾರ್ ಎಕ್ಸ್‌ಪ್ರೆಸ್) ಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಬಳಿಕ ಅವರು ಬದಂಪಹಾರ್-ಶಾಲಿಮಾರ್ ಎಕ್ಸ್‌ಪ್ರೆಸ್‌ನಲ್ಲಿ ಬದಂಪಹಾರ್‌ನಿಂದ ರೈರಂಗಪುರಕ್ಕೆ ಪ್ರಯಾಣಿಸುತ್ತಾರೆ. ಅದೇ ದಿನ ಸಂಜೆ ಬುರ್ಲಾದ ವೀರ್ ಸುರೇಂದ್ರ ಸಾಯಿ ತಂತ್ರಜ್ಞಾನ ವಿಶ್ವವಿದ್ಯಾಲಯದ 15ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

Leave a Reply

Your email address will not be published. Required fields are marked *