Sunday, 28th April 2024

ಬಿಹಾರದ ಸಂಪ್ರೀತಿಗೆ ಗೂಗಲ್​ನಿಂದ 1.10 ಕೋಟಿ ರೂ. ಪ್ಯಾಕೇಜ್​​

ಪಾಟ್ನಾ: ಐಐಟಿ ವಿದ್ಯಾರ್ಥಿನಿ, ಬಿಹಾರದ ಹುಡುಗಿ ಸಂಪ್ರೀತಿ ಯಾದವ್​​ ಗೂಗಲ್​ನಲ್ಲಿ 1.10 ಕೋಟಿ ರೂಪಾಯಿ ವಾರ್ಷಿಕ ಪ್ಯಾಕೇಜ್​​ ಕೆಲಸ ಪಡೆಯುವ ಮೂಲಕ ಸುದ್ದಿಯಾಗಿದ್ದಾರೆ. ಫೆಬ್ರವರಿ 14ರಂದು ಗೂಗಲ್​ ಕಂಪನಿಗೆ ಸೇರಲಿದ್ದಾರೆ.

ಸಂಪ್ರೀತಿ ಕಳೆದ ವರ್ಷ ಮೇ ತಿಂಗಳಲ್ಲಿ ದೆಹಲಿ ತಾಂತ್ರಿಕ ವಿಶ್ವವಿದ್ಯಾಲಯ ದಿಂದ ಕಂಪ್ಯೂಟರ್​ ಸೈನ್ಸ್​ ಬಿ ಟೆಕ್​ ಪದವಿ ಪೂರ್ಣಗೊಳಿಸಿದ್ದಾರೆ. ಪ್ರಸ್ತುತ 44 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್​​ನಲ್ಲಿ ಮೈಕ್ರೋಸಾಫ್ಟ್​ನಲ್ಲಿ ಕೆಲಸ ಮಾಡುತ್ತಿ ದ್ದಾರೆ.

ಪಾಟ್ನಾದ ನೆಹರೂ ನಗರದ ನಿವಾಸಿಯಾದ ಬ್ಯಾಂಕ್​ ಅಧಿಕಾರಿ ರಾಮಶಂಕರ್​ ಯಾದವ್​​ ಹಾಗೂ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕಿ ಶಶಿಪ್ರಭಾ ದಂಪತಿಯ ಪುತ್ರಿ ಸಂಪ್ರೀತಿ ಉನ್ನತ ಶ್ರೇಣಿಯ ಕಂಪನಿಗಳಿಂದ ಉದ್ಯೋಗದ ಆಫರ್​​ಗಳನ್ನು ಪಡೆದಿದ್ದರು.

ಗೂಗಲ್​​ ಆನ್​ಲೈನ್​​ನಲ್ಲಿ 9 ಸುತ್ತುಗಳಲ್ಲಿ ಸಂದರ್ಶನಗಳನ್ನು ನಡೆಸಿತ್ತು. ಕಂಪನಿಯು 9 ಸುತ್ತುಗಳಲ್ಲಿ ನಡೆದ ಸಂದರ್ಶನ ದಲ್ಲಿ ನನ್ನ ಉತ್ತರಗಳಿಂದ ತೃಪ್ತವಾಯಿತು. ಹೀಗಾಗಿ ಕೆಲಸಕ್ಕೆ ಆಯ್ಕೆಯಾದೆ ಎಂದು ಸಂಪ್ರೀತಿ ಹೇಳಿದ್ದಾರೆ.

error: Content is protected !!