Chhangur Baba: ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ 40 ಖಾತೆಗಳಲ್ಲಿ ಒಂದಲ್ಲ... ಎರಡಲ್ಲ ಬರೋಬ್ಬರಿ 106 ಕೋಟಿ ರೂ.
ಒಂದು ಕಾಲದಲ್ಲಿ ತನ್ನ ಸೈಕಲ್‌ನಲ್ಲಿ ಉಂಗುರ, ತಾಯಿತಾ ಮಾರಾಟ ಮಾಡುತ್ತಿದ್ದ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ (Jamaluddin alias Chhangur Baba ) ಪ್ರಸ್ತುತ 40 ಖಾತೆಗಳಲ್ಲಿ 106 ಕೋಟಿ ರೂ. ಗೂ ಹೆಚ್ಚಿನ ಹಣ ಹೊಂದಿದ್ದಾನೆ. ಈತನ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಮಧ್ಯಪ್ರಾಚ್ಯದಿಂದ (Middle East country) ಬಂದಿರುವುದಾಗಿ ತನಿಖೆ ವೇಳೆ ಬಹಿರಂಗವಾಗಿದೆ.


ಬಲರಾಂಪುರ: ಒಂದು ಕಾಲದಲ್ಲಿ ತನ್ನ ಸೈಕಲ್ ನಲ್ಲಿ ಉಂಗುರ, ತಾಯತ ಮಾರಾಟ ಮಾಡುತ್ತಿದ್ದ ಜಮಾಲುದ್ದೀನ್ ಅಲಿಯಾಸ್ ಛಂಗೂರ್ ಬಾಬಾ ( Jamaluddin alias Chhangur Baba ) ಪ್ರಸ್ತುತ 40 ಖಾತೆಗಳಲ್ಲಿ 106 ಕೋಟಿ ರೂ. ಗೂ ಹೆಚ್ಚಿನ ಹಣ ಹೊಂದಿದ್ದಾನೆ. ಈತನ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಮಧ್ಯಪ್ರಾಚ್ಯದಿಂದ ( Middle East country) ಬಂದಿರುವುದಾಗಿ ತನಿಖೆ ವೇಳೆ ಬಹಿರಂಗವಾಗಿದೆ. ಮತಾಂತರ ಗ್ಯಾಂಗ್‌ನ ಮಾಸ್ಟರ್‌ಮೈಂಡ್ (Conversion Gang Mastermind) ಆಗಿರುವ ಛಂಗೂರ್ ಬಾಬಾನನ್ನು ಇತ್ತೀಚೆಗೆ ಉತ್ತರ ಪ್ರದೇಶದ (Uttarpradesh) ಬಲರಾಂಪುರ ಜಿಲ್ಲೆಯಲ್ಲಿ ಬಂಧಿಸಲಾಗಿದೆ.
ಮತಾಂತರ ದಂಧೆಗೆ ಸಂಬಂಧಿಸಿ ಶನಿವಾರ ಲಕ್ನೋದ ಹೊಟೇಲ್‌ನಲ್ಲಿ ಛಂಗೂರ್ ಬಾಬಾ ಮತ್ತು ಆತನ ಆಪ್ತ ಸಹಚರ ನೀತು ಅಲಿಯಾಸ್ ನಸ್ರೀನ್ ನನ್ನು ಬಂಧಿಸಲಾಗಿದೆ. ಬಡವರು, ಅಸಹಾಯಕ ಕಾರ್ಮಿಕರು, ದುರ್ಬಲ ವರ್ಗದವರು ಮತ್ತು ವಿಧವೆಯ ಮಹಿಳೆಯರಿಗೆ ಪ್ರೋತ್ಸಾಹ ಧನ, ಆರ್ಥಿಕ ನೆರವು, ಮದುವೆ ಭರವಸೆಯ ಆಮಿಷವೊಡ್ಡಿ ಅಥವಾ ಬೆದರಿಕೆ ಹಾಕಿ ಆರೋಪಿಗಳು ಧಾರ್ಮಿಕ ಮತಾಂತರ ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಛಂಗೂರ್ ಬಾಬಾ ಹಾಗೂ ಯಾವುದಾದರೂ ಭಯೋತ್ಪಾದಕ ಗ್ಯಾಂಗ್‌ಗೆ ಸಂಬಂಧವಿದೆಯೇ ಎನ್ನುವ ಕುರಿತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಹಾಗೂ ಛಂಗೂರ್ ಬಾಬಾ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಿಸಿರುವ ಯುಪಿ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತನಿಖೆ ನಡೆಸುತ್ತಿದೆ. ಅಲ್ಲದೇ ಧಾರ್ಮಿಕ ಮತಾಂತರದಲ್ಲಿ ಭಾಗಿಯಾಗಿರುವ ಬಲರಾಂಪುರದ ಇತರ ವ್ಯಕ್ತಿಗಳ ಬಗ್ಗೆಯೂ ಸ್ಥಳೀಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೀರ್ ಬಾಬಾ ಎಂದೂ ಕರೆಯಲ್ಪಡುವ ಛಂಗೂರ್ ಬಾಬಾ ಗಳಿಕೆಯ ಮೂಲವನ್ನು ಕಂಡುಹಿಡಿಯಲು ಜಾರಿ ನಿರ್ದೇಶನಾಲಯ (ಇಡಿ) ಕೂಡ ಪ್ರಕರಣ ದಾಖಲಿಸಿದ್ದು, ತನಿಖೆ ಪ್ರಾರಂಭಿಸಿದೆ.
ಛಂಗೂರ್ ಬಾಬಾ
ಒಂದು ಕಾಲದಲ್ಲಿ ಛಂಗೂರ್ ಬಾಬಾ ತನ್ನ ಸೈಕಲ್‌ನಲ್ಲಿ ಉಂಗುರ ಮತ್ತು ತಾಯತಗಳನ್ನು ಮಾರಾಟ ಮಾಡುತ್ತಿದ್ದನು. ಬಳಿಕ ಆತ ಗ್ರಾಮದ ಮುಖ್ಯಸ್ಥನಾಗಿದ್ದಾನೆ. ಪ್ರಸ್ತುತ ಆತ 40 ವಿಭಿನ್ನ ಖಾತೆಗಳಲ್ಲಿ 106 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ಜಮೆಯಾಗಿದೆ. ಈ ಎಲ್ಲಾ ಹಣವು ಮಧ್ಯಪ್ರಾಚ್ಯದ ಇಸ್ಲಾಮಿಕ್ ದೇಶಗಳಿಂದ ಬಂದಿದೆ ಎನ್ನುವುದು ತನಿಖೆ ವೇಳೆ ತಿಳಿದು ಬಂದಿದೆ.
ಉತ್ತರ ಪ್ರದೇಶದ ರೆಹ್ರಾ ಮಾಫಿ ಗ್ರಾಮದವನಾದ ಛಂಗೂರ್ ಬಾಬಾ ನೇಪಾಳದ ಗಡಿಯಲ್ಲಿರುವ ಬಲರಾಂಪುರ ಜಿಲ್ಲೆಯ ಉತ್ತರೌಲಾ ಪ್ರದೇಶದಲ್ಲಿ ತನ್ನ ಸಾಮ್ರಾಜ್ಯವನ್ನು ನಡೆಸುತ್ತಿದ್ದಾನೆ. ಛಂಗೂರ್ ಬಾಬಾ ರೆಹ್ರಾ ಮಾಫಿ ಗ್ರಾಮದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಮಧಪುರದಲ್ಲಿರುವ ದರ್ಗಾ (ದೇವಾಲಯ) ಪಕ್ಕದ ಭೂಮಿಯಲ್ಲಿ ಕಟ್ಟಡವನ್ನು ನಿರ್ಮಿಸಿದ್ದಾನೆ. ಈ ಕಟ್ಟಡ ಅಕ್ರಮ ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ. ಸರ್ಕಾರಿ ಭೂಮಿಯಲ್ಲಿ ನಿರ್ಮಾಣವಾಗಿರುವ ಈ ಅಕ್ರಮ ಕಟ್ಟಡವನ್ನು ಬುಧವಾರ ಅಧಿಕಾರಿಗಳು ಕೆಡವಿದ್ದಾರೆ.
ಈ ಕಟ್ಟಡವು ಎರಡು ವಿಭಾಗಗಳನ್ನು ಹೊಂದಿತ್ತು. ಒಂದರಲ್ಲಿ ಛಂಗೂರ್ ಬಾಬಾ ಮತ್ತು ಆತನ ಕುಟುಂಬ, ಸಹಾಯಕರು ವಾಸಿಸುತ್ತಿದ್ದು, ಇನ್ನೊಂದರಲ್ಲಿ ಆಸ್ಪತ್ರೆ, ಶಾಲೆ, ಕಾಲೇಜು ಸೇರಿದಂತೆ ವಿವಿಧ ಯೋಜನೆಗಳನ್ನು ರೂಪಿಸಲಾಗಿತ್ತು. ಆದರೆ ಅವುಗಳನ್ನು ಅನುಷ್ಠಾನಗೊಳಿಸಿರಲಿಲ್ಲ. ಇದಕ್ಕೆ ಅನುಮತಿ ಪಡೆದು ಹಲವು ವರ್ಷಗಳು ಕಳೆದಿದ್ದರೂ ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದಲ್ಲಿ ಎರಡು ನಾಯಿಗಳು ಮತ್ತು 15 ಸಿಸಿಟಿವಿ ಕೆಮರಗಳಿವೆ.
ಇದನ್ನೂ ಓದಿ: CM Siddaramaiah: 2028ರಲ್ಲೂ ನಾನೇ ಪಕ್ಷವನ್ನು ಮುನ್ನಡೆಸುತ್ತೇನೆ: ಸಿಎಂ ಸಿದ್ದರಾಮಯ್ಯ
ಬಲರಾಂಪುರ ಕಟ್ಟಡದ ಜೊತೆಗೆ ಛಂಗೂರ್ ಬಾಬಾ ಮಹಾರಾಷ್ಟ್ರದ ಲೋನಾವಾಲ ಸೇರಿದಂತೆ ವಿವಿಧೆಡೆ ಹಲವಾರುಆಸ್ತಿಗಳನ್ನು ಹೊಂದಿದ್ದನು. ಸುಮಾರು 16.49 ಕೋಟಿ ರೂ. ಬೆಲೆಬಾಳುವ ಲೋನಾವಾಲದಲ್ಲಿರುವ ಆಸ್ತಿ ಛಂಗೂರ್ ಬಾಬಾ ಮತ್ತು ನವೀನ್ ಎಂಬಾತನ ಹೆಸರಿನಲ್ಲಿ ಖರೀದಿಸಲಾಗಿದೆ. 2023ರ ಆಗಸ್ಟ್ 2ರಂದು ನವೀನ್ ಅನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ಅಹ್ಮದ್ ಖಾನ್ ಎಂಬ ಹೆಸರು ಕೇಳಿ ಬಂದಿದೆ.
ಛಂಗೂರ್ ಬಾಬಾ ಅಕ್ರಮ ಕೆಲಸಗಳಿಗೆ ಸಹಾಯ ಮಾಡಿರುವ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳ ಬಗ್ಗೆಯೂ ಭದ್ರತಾ ಸಂಸ್ಥೆಗಳು ತನಿಖೆ ನಡೆಸುತ್ತಿದೆ. ಆತ ಎಷ್ಟು ಜನರನ್ನು ಮತಾಂತರಿಸಿದ್ದಾನೆ, ಅವರು ಪಡೆದ ಹಣವನ್ನು ರಾಷ್ಟ್ರವಿರೋಧಿ ಚಟುವಟಿಕೆಗಳಿಗೆ ಬಳಸಲಾಗಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.