Self Harming: ಎರಡು ಮಕ್ಕಳ ತಾಯಿ ಬಾಯ್‌ಫ್ರೆಂಡ್ ಜೊತೆ ಪರಾರಿ, ಪತಿ ಆತ್ಮಹತ್ಯೆ
ನಾಗೇಶನೇ ತನ್ನ ಸ್ನೇಹಿತ ಭರತನನ್ನು ರಂಜಿತಾಗೆ ಪರಿಚಯ ಮಾಡಿಸಿದ್ದ. ಬಳಿಕ ಅವರಿಬ್ಬರ ಮಧ್ಯ ಪ್ರೇಮಾಂಕುರವಾಗಿದೆ. ಬಳಿಕ ರಂಜಿತಾ ಭರತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೀಗ ಇಬ್ಬರು ಮಕ್ಕಳನ್ನು ಬಿಟ್ಟು ಭರತ್ ಜೊತೆ ಪರಾರಿಯಾಗಿದ್ದಾಳೆ.

ನಾಗೇಶ್, ರಂಜಿತಾ, ಭರತ್

ತುಮಕೂರು: ಪತ್ನಿ (Wife) ಆಕೆಯ ಬಾಯ್‌ಫ್ರೆಂಡ್ (Boyfriend) ಜೊತೆ ಪರಾರಿಯಾದ್ದರಿಂದ ಮನನೊಂದು ಪತಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ತುಮಕೂರಿನ (Tumkur news) ಗುಬ್ಬಿ ಪಟ್ಟಣದ ಗಟ್ಟಿ ಲೇಔಟ್‌ನಲ್ಲಿ ನಡೆದಿದೆ. ನಾಗೇಶ್ (35) ಮೃತ ವ್ಯಕ್ತಿ. ನಾಗೇಶ್ ಕಳೆದ 12 ವರ್ಷಗಳ ಹಿಂದೆ ರಂಜಿತಾಳನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ.
ರಂಜಿತಾ ಈಗ ಪ್ರೀತಿಸಿ ಮದುವೆಯಾದ ಗಂಡನನ್ನು ಬಿಟ್ಟು,ಇಬ್ಬರು ಮಕ್ಕಳನ್ನೂ ಬಿಟ್ಟು, ಮನೆ ಬಿಟ್ಟು ಬೇರೊಬ್ಬನ ಜೊತೆ ಪರಾರಿಯಾಗಿದ್ದಾಳೆ. ಇದರಿಂದ ಮನನೊಂದು ನಾಗೇಶ್, ನನ್ನ ಸಾವಿಗೆ ಪತ್ನಿ ರಂಜಿತಾ, ಸ್ನೇಹಿತ ಭರತ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿಟ್ಟು ನೇಣಿಗೆ ಶರಣಾಗಿದ್ದಾನೆ. ಈ ವಿಡಿಯೋ ನೋಡಿದ ಹಲವು ಸ್ನೇಹಿತರು ಮನೆಯತ್ತ ಧಾವಿಸುವ ವೇಳೆಗೆ ನಾಗೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ನಾಗೇಶನೇ ತನ್ನ ಸ್ನೇಹಿತ ಭರತನನ್ನು ರಂಜಿತಾಗೆ ಪರಿಚಯ ಮಾಡಿಸಿದ್ದ. ಬಳಿಕ ಅವರಿಬ್ಬರ ಮಧ್ಯ ಪ್ರೇಮಾಂಕುರವಾಗಿದೆ. ಬಳಿಕ ರಂಜಿತಾ ಭರತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಇದೀಗ ಇಬ್ಬರು ಮಕ್ಕಳನ್ನು ಬಿಟ್ಟು ಭರತ್ ಜೊತೆ ಪರಾರಿಯಾಗಿದ್ದಾಳೆ. ಈ ಘಟನೆಯಿಂದ ಮನನೊಂದ ನಾಗೇಶ್, ಹೆಂಡತಿ ಹೀಗೆ ಬೇರೊಬ್ಬನ ಜೊತೆ ಓಡಿಹೋಗಿದ್ದಾಳೆಂಬ ಮರ್ಯಾದೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಮುನ್ನ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ನಾಗೇಶ್ ಅಪ್ಲೋಡ್ ಮಾಡಿದ್ದಾನೆ. “ನನ್ನ ಸಾವಿಗೆ ಪತ್ನಿ ರಂಜಿತಾ ಹಾಗೂ ಸ್ನೇಹಿತ ಭರತ್ ಕಾರಣ. ನನಗೆ ನ್ಯಾಯ ಕೊಡಿಸಬೇಕು" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಗುಬ್ಬಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾಯಿ ಬೇರೊಬ್ಬನ ಜತೆ ಓಡಿಹೋಗಿದ್ದರೆ, ಇತ್ತ ತಂದೆ ಸಾವಿನ ಮನೆ ಸೇರಿದ್ದರಿಂದ ಎರಡು ಮಕ್ಕಳು ಅನಾಥವಾಗಿವೆ.
ಇದನ್ನೂ ಓದಿ: Road Accident: ಪಾನಮತ್ತರಾಗಿ ಕಾರು ಚಲಾಯಿಸಿ ಮರಕ್ಕೆ ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳು ಸಾವು