ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kidnap Case: ಬಂಡೀಪುರ ರೆಸಾರ್ಟ್‌ನಿಂದ ಕಿಡ್‌ನ್ಯಾಪ್‌ ಆದ ದಂಪತಿ ಪತ್ತೆ, ನಡೆದದ್ದೇನು?

ಬಂಡೀಪುರ ಖಾಸಗಿ ರೆಸಾರ್ಟ್‌ನಿಂದ ದಂಪತಿ ಹಾಗೂ ಮಗು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಪ್ರಕರಣ ಬೇದಿಸಿದ ಚಾಮರಾಜನಗರ ಪೊಲೀಸರು, ನಿಶಾಂತ್ ಹಾಗು ಪತ್ನಿ ಚಂದನಾ ಮತ್ತು 7 ವರ್ಷದ ಗಂಡು ಮಗುವನ್ನು ರಕ್ಷಿಸಿದ್ದಾರೆ. ಅಪಹರಿಸಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊನ್ನಹಳ್ಳಿ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದರು.

ಬಂಡೀಪುರ ರೆಸಾರ್ಟ್‌ನಿಂದ ಕಿಡ್‌ನ್ಯಾಪ್‌ ಆದ ದಂಪತಿ ಪತ್ತೆ, ನಡೆದದ್ದೇನು?

ಅಪಹೃತ ದಂಪತಿ

ಹರೀಶ್‌ ಕೇರ ಹರೀಶ್‌ ಕೇರ Mar 5, 2025 7:04 AM

ಚಾಮರಾಜನಗರ: ಭಾನುವಾರ ರಾತ್ರಿ ಬಂಡೀಪುರದಲ್ಲಿ (Bandipur) ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದ ಬೆಂಗಳೂರು ಮೂಲದ ಕುಟುಂಬವೊಂದು ನಿಗೂಢವಾಗಿ ನಾಪತ್ತೆಯಾಗಿದ್ದು, ಗಂಡ, ಹೆಂಡ್ತಿ ಮಗ ಮೂವರು ಕಾಣೆಯಾಗಿದ್ದರು. ಈ ಪ್ರಕರಣವನ್ನು 24 ಗಂಟೆಯೊಳಗೆ ಬೇದಿಸಿದ ಪೊಲೀಸರು (Chamarajanagara Police) ಅಪಹರಣಕ್ಕೆ (kidnap case) ಒಳಗಾದವರನ್ನು ರಕ್ಷಣೆ ಮಾಡಿ, ಆರೋಪಿಗಳನ್ನು (Crime news) ಬಂಧಿಸಿದ್ದಾರೆ.

ಬಂಡೀಪುರ ಖಾಸಗಿ ರೆಸಾರ್ಟ್‌ನಿಂದ ದಂಪತಿ ಹಾಗೂ ಮಗು ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಪ್ರಕರಣ ಬೇದಿಸಿದ ಚಾಮರಾಜನಗರ ಪೊಲೀಸರು, ನಿಶಾಂತ್ ಹಾಗು ಪತ್ನಿ ಚಂದನಾ ಮತ್ತು 7 ವರ್ಷದ ಗಂಡು ಮಗುವನ್ನು ರಕ್ಷಿಸಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಿದ್ದು, ಅಪಹರಿಸಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಹೊನ್ನಹಳ್ಳಿ ತೋಟದ ಮನೆಯಲ್ಲಿ ಬಚ್ಚಿಟ್ಟಿದ್ದರು. ನಿಶಾಂತ್ ಅವರು ಬಾಗಲಕೋಟೆ ಜಿಲ್ಲೆ ಧವಳೇಶ್ವರ ಗ್ರಾಮದ ಪುನೀತ್‌ ಈರಪ್ಪ ಹಾಗು ಸ್ನೇಹಿತ್‌ ಈರಪ್ಪ ಅವರಿಂದ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡದ ಹಿನ್ನೆಲೆ ಅಪಹರಣ ಮಾಡಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯ ಮಲ್ಲಿಕಾರ್ಜುನ್, ವಿಶ್ವನಾಥ್, ಯಾದಗಿರಿ ಜಿಲ್ಲೆಯ ಈರಣ್ಣ, ಸಿದ್ದರಾಜು ಎಂಬುವವರನ್ನು ಬಂಧಿಸಿದ್ದಾರೆ. ಪುನೀತ್‌ ಈರಪ್ಪ ಹಾಗು ಸ್ನೇಹಿತ್ ‌ಈರಪ್ಪ ಎಂಬವರಿಗಾಗಿ ಶೋಧ ನಡೆಸುತ್ತಿದ್ದಾರೆ. ತೋಟದ ಮನೆಯಿಂದ ದಂಪತಿ ಹಾಗೂ ಮಗುವನ್ನು ರಕ್ಷಿಸಿ ಪೊಲೀಸರು ಕರೆತಂದಿದ್ದಾರೆ.

ಕಿಡ್ನಾಪ್ ಆಗಿದ್ದ ಕುಟುಂಬದ ರಕ್ಷಣೆಗಾಗಿ ಎಸ್‌ಪಿ ಡಾ ಬಿಟಿ ಕವಿತಾ ಅವರು ವಿಶೇಷ ತಂಡ ರಚಿಸಿದ್ದರು. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಹಾಗೂ ಕಾರುಗಳ ನೋಂದಣಿ ಸಂಖ್ಯೆ ಆಧರಿಸಿ ಪ್ರಕರಣವನ್ನು ಪೊಲೀಸರು ಭೇಧಿಸಿದ್ದಾರೆ.

ಭಾನುವಾರ ರಾತ್ರಿ ಬಂಡೀಪುರದ ರೆಸಾರ್ಟ್‌ನಲ್ಲಿ ಕುಟುಂಬ ವಾಸ್ತವ್ಯ ಹೂಡಿತ್ತು. ರಾತ್ರಿ 10.30 ರ ಸುಮಾರಿಗೆ ನಿಶಾಂತ್ ಮತ್ತು ಪತ್ನಿ ಚಂದನಾ ತಮ್ಮ ತಂದೆಯ ಅಲ್ಟ್ರೋಜ್ ಕಾರಿನಲ್ಲಿ ರೆಸಾರ್ಟ್‌ನಿಂದ ಹೊರಟಿದ್ದರು. ಬೆಂಗಳೂರಿನಿಂದ ಬಂದಿದ್ದ ಎರಡು ತಂಡಗಳು ರೆಸಾರ್ಟ್ ಒಳಗೆ ಹೋಗಿ ನಿಶಾಂತ್ ಕುಟುಂಬ ಅಲ್ಲಿದೆಯೇ ಎಂದು ಖಚಿತಪಡಿಸಿಕೊಂಡು ಅಪಹರಣ ನಡೆಸಿದ್ದವು.

ಇದನ್ನೂ ಓದಿ: Road Accident: ರಾಯಚೂರಿನಲ್ಲಿ ಬೈಕ್‌ಗಳು ಡಿಕ್ಕಿಯಾಗಿ ಮೂವರು ಸಾವು