ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಲಾಲ್‌ಬಾಗ್‌ನಲ್ಲಿ ಹೋಳಿ ಸಂದರ್ಭ ನೇಪಾಳಿ ಗುಂಪುಗಳ ಘರ್ಷಣೆ

ನೇಪಾಳಿ ಯುವಕರು ದೊಣ್ಣೆಗಳಿಂದ ಹೊಡೆದಾಡಿಕೊಳ್ಳುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಾಲ್‌ಬಾಗ್ ಉದ್ಯಾನದಲ್ಲಿ ಶುಕ್ರವಾರ ಸಂಜೆ ಹೋಳಿ ಆಚರಣೆ ನಡೆದಿತ್ತು. ಈ ವೇಳೆ ನೇಪಾಳಿ ಮೂಲದವರ ಎರಡು ಗುಂಪುಗಳು ಹಿಂಸಾತ್ಮಕವಾಗಿ ಘರ್ಷಣೆ ನಡೆಸಿದರು.

ಲಾಲ್‌ಬಾಗ್‌ನಲ್ಲಿ ಹೋಳಿ ಸಂದರ್ಭ ನೇಪಾಳಿ ಗುಂಪುಗಳ ಘರ್ಷಣೆ

ಹೋಳಿ ಸಂದರ್ಭ ಘರ್ಷಣೆ

ಹರೀಶ್‌ ಕೇರ ಹರೀಶ್‌ ಕೇರ Mar 17, 2025 7:13 AM

ಬೆಂಗಳೂರು: ಬೆಂಗಳೂರಿನ (Bengaluru) ಲಾಲ್‌ಬಾಗ್‌ನಲ್ಲಿ (Lalbagh) ಆಚರಿಸಿದ ಹೋಳಿ (Holi Festival) ಸಂದರ್ಭದಲ್ಲಿ ಎರಡು ನೇಪಾಳಿಯರ ಗುಂಪುಗಳ ಮಧ್ಯೆ ತೀವ್ರ ಮಾರಾಮಾರಿ (Fight) ಉಂಟಾದ ಘಟನೆ ತಡವಾಗಿ ವರದಿಯಾಗಿದೆ. ಈ ಹೊಡೆದಾಟದ ವಿಡಿಯೋ ವೈರಲ್‌ (Viral video) ಆಗಿದ್ದು ಇದನ್ನು ನೋಡಿ ಜನ ಬೆಚ್ಚಿಬಿದ್ದಿದ್ದಾರೆ. ಹಬ್ಬದ ಕಾರಣ ಅಸಂಖ್ಯಾತ ಜನ ಲಾಲ್‌ಬಾಗ್ ಉದ್ಯಾನದಲ್ಲಿ ಸೇರಿದ್ದು, ಘರ್ಷಣೆಯ ಕಾರಣದಿಂದ ಆತಂಕ ಅನುಭವಿಸಿದರು. ಲಾಲ್‌ಬಾಗ್‌ ಉದ್ಯಾನದಲ್ಲಿ ಸಾರ್ವಜನಿಕರಿಗೆ ಭದ್ರತೆ, ಸುರಕ್ಷತೆ ಕುರಿತು ಆತಂಕ ವ್ಯಕ್ತಪಡಿಸಿದರು.

ನೇಪಾಳಿ ಯುವಕರು ದೊಣ್ಣೆಗಳಿಂದ ಹೊಡೆದಾಡಿಕೊಳ್ಳುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಲಾಲ್‌ಬಾಗ್ ಉದ್ಯಾನದಲ್ಲಿ ಶುಕ್ರವಾರ ಸಂಜೆ ಹೋಳಿ ಆಚರಣೆ ನಡೆದಿತ್ತು. ಈ ವೇಳೆ ನೇಪಾಳಿ ಮೂಲದವರ ಎರಡು ಗುಂಪುಗಳು ಹಿಂಸಾತ್ಮಕವಾಗಿ ಘರ್ಷಣೆ ನಡೆಸಿದರು. ಇದು ಉದ್ಯಾನಕ್ಕೆ ಬಂದಿದ್ದ ಸಾವಿರಾರು ಪ್ರವಾಸಿಗರಲ್ಲಿ ಭಯ ಉಂಟಾಗಲು ಕಾರಣವಾಯಿತು. ಉದ್ಯಾನದ ಬಂಡೆ ಮೇಲೆ ಕ್ಷುಲ್ಲಕ ಕಾರಣಕ್ಕೆ ನೇಪಾಳಿ ಮೂಲದ ಎರಡು ಗುಂಪುಗಳ ಮಧ್ಯೆ ಜಗಳ, ಮಾತಿನ ಚಕಮಕಿ ಹುಟ್ಟಿಕೊಂಡಿದ್ದು, ನಂತರ ಪೂರ್ಣ ಪ್ರಮಾಣದ ಗ್ಯಾಂಗ್ ಜಗಳಕ್ಕೆ ತಿರುಗಿದೆ. ಕೂಡಲೇ ಪೊಲೀಸರು ಮತ್ತು ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) ಸಿಬ್ಬಂದಿ ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಹತೋಟಿಗೆ ತಂದರು.



ಸ್ಥಳದಲ್ಲಿದ್ದವರ ಪ್ರಕಾರ, ಹೋಳಿ ಹಬ್ಬದಾಚರಣೆಗೆ ಈ ಎರಡು ಗುಂಪುಗಳು ಲಾಲ್‌ಬಾಗ್‌ ಬಂಡೆಯ ಮೇಲೆ ಜೊತೆಗೂಡಿವೆ. ಬಣ್ಣಗಳನ್ನು ವಿನಿಮಯ ಮಾಡಿಕೊಂಡಿವೆ. ನಂತರ ದಿಢೀರ್ ಘರ್ಷಣೆ ಹುಟ್ಟಿಕೊಂಡಿದ್ದು, ಕೋಲು, ದೊಣ್ಣೆಗಳಿಂದ ಒಬ್ಬರನ್ನೊಬ್ಬರು ಬೆನ್ನಟ್ಟಿ ಹೊಡೆದಾಡಿಕೊಂಡಿದ್ದಾರೆ. ಪರಸ್ಪರ ಬಾಟಲಿಗಳನ್ನು ಎಸೆದಿದ್ದು ಕಂಡು ಬಂದಿದೆ. ಇದರ ವಿಡಿಯೋ ಅನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ತೋಟಗಾರಿಕೆ ಇಲಾಖೆಯ ಭದ್ರತಾ ಸಿಬ್ಬಂದಿ ಕೂಡಲೇ ಕರೆ ಮಾಡಿ ಸಿದ್ದಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅವರು ಕೂಡಲೇ ಹತ್ತಿರದಲ್ಲೇ ಇದ್ದ ಕೆಎಸ್‌ಆರ್‌ಪಿ ಘಟಕದ ಸದಸ್ಯರ ಜೊತೆಗೆ ಧಾವಿಸಿ ಬಂದು ಗುಂಪುಗಳ ಮಾರಾಮಾರಿಯನ್ನು ಹತೋಟಿಗೆ ತಂದರು.

ವಿಡಿಯೋ ನೋಡಿದ ಬೆಂಗಳೂರಿಗರು, ಕನ್ನಡಿಗರು ಘರ್ಷಣೆ ಕುರಿತು ಆಕ್ರೋಶಗೊಂಡಿದ್ದಾರೆ. ಬೆಂಗಳೂರಿನಲ್ಲಿ ಹೊರದೇಶದ ಗ್ಯಾಂಗ್‌ಗಳೂ ಸಕ್ರಿಯವಾಗಿವೆಯೇ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಮಾಡುವುದರಿಂದ ಉದ್ಯಾನಕ್ಕೆ, ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತದೆ. ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Physical Abuse: ಹೋಳಿ ಹಬ್ಬದ ಪಾರ್ಟಿಯಲ್ಲಿ ಸೀರಿಯಲ್‌ ನಟಿಗೆ ಲೈಂಗಿಕ ಕಿರುಕುಳ; ಸಹ ನಟನ ಮೇಲೆ ದೂರು