Drowned: ಮಗುವನ್ನು ಉಳಿಸಲು ಹೋಗಿ ಮೂವರು ಮುಳುಗಿ ಸಾವು
ಮೃತರನ್ನು ಚಿಕ್ಕಬಳ್ಳಾಪುರ ನಿವಾಸಿಗಳಾದ ಫರೀನಾ ಬೇಗಂ (35), ಬಶೀರ್ (35) ಮತ್ತು ಬೆಂಗಳೂರಿನ ಮುನಿರೆಡ್ಡಿಪಾಳ್ಯ ನಿವಾಸಿ ಇಮ್ರಾನ್ (45) ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಗುವನ್ನು ರಕ್ಷಿಸಲಾಗಿದ್ದು ನೀರಿನಲ್ಲಿ ಮುಳುಗಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.


ಚಿಕ್ಕಬಳ್ಳಾಪುರ: ರಂಜಾನ್ ಹಬ್ಬದ (Ramadan Festival) ಹಿನ್ನೆಲೆಯಲ್ಲಿ ಪ್ರವಾಸಕ್ಕೆಂದು ತೆರಳಿದ್ದ ಮೂವರು ನೀರುಪಾಲಾಗಿರುವ (Drowned) ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಶ್ರೀನಿವಾಸಸಾಗರ ಜಲಾಶಯದಲ್ಲಿ (Srinivasanagara lake) ನಡೆದಿದೆ. ಮೃತರನ್ನು ಚಿಕ್ಕಬಳ್ಳಾಪುರ ನಿವಾಸಿಗಳಾದ ಫರೀನಾ ಬೇಗಂ (35), ಬಶೀರ್ (35) ಮತ್ತು ಬೆಂಗಳೂರಿನ ಮುನಿರೆಡ್ಡಿಪಾಳ್ಯ ನಿವಾಸಿ ಇಮ್ರಾನ್ (45) ಎಂದು ಗುರುತಿಸಲಾಗಿದೆ. ನೀರಿಗೆ ಬಿದ್ದ ಮಗುವನ್ನು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ. ಅದೃಷ್ಟವಶಾತ್ ಮಗುವನ್ನು ರಕ್ಷಿಸಲಾಗಿದ್ದು ನೀರಿನಲ್ಲಿ ಮುಳುಗಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಫರೀನಾ ಬೇಗಂ ಮತ್ತು ಸಂಬಂಧಿಕರು ರಜೆಯ ಕಾರಣ ಮೊದಲಿಗೆ ನಂದಿಬೆಟ್ಟಕ್ಕೆ ತೆರಳಲು ಮುಂದಾಗಿದ್ದರು. ಆದರೆ ನಂದಿಬೆಟ್ಟ ಬಂದ್ ಆಗಿದ್ದರಿಂದ ಜಲಾಶಯಕ್ಕೆ ಭೇಟಿ ನೀಡಿದ್ದರು. ಜಲಾಶಯದ ಬಂಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದ ವೇಳೆ ಮಗುವೊಂದು ಜಾರಿ ನೀರಿಗೆ ಬಿದ್ದಿದೆ. ಅದನ್ನು ರಕ್ಷಿಸಲು ಹೋದಾಗ ದುರ್ಘಟನೆ ಸಂಭವಿಸಿದೆ. ಚಿಕ್ಕಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಕ್ರಮ ಗಾಂಜಾ ಮಾರಾಟ, ಇಬ್ಬರ ಬಂಧನ
ಚಿಂತಾಮಣಿ: ಅಕ್ರಮ ಗಾಂಜಾ ಮಾರಾಟ ಮಾಡಲು ಬಂದ್ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಗ್ರಾಮಾಂತರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನಿಸ್ಸಾರ್ ಅಹಮದ್ ಬಿನ್ ನಾಸೀರ್ ಅಹಮದ್.(33 ವರ್ಷ)ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು ಫಯಾಜ್ ಪಾಷ ಬಿನ್ ಫಾರೂಕ್ ಪಾಷ,(32 ವರ್ಷ) ವಾರ್ಡ್ ನಂ13. ಕೈವಾರ ಗ್ರಾಮ, ಚಿಂತಾಮಣಿ ತಾಲ್ಲೂಕು,ಅರ್ಬಾಜ್ ಖಾನ್ ಬಿನ್ ವಜೀರ್ ಖಾನ್ ಎಂದು ಗುರುತಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲಾ ಎಸ್ ಪಿ ಕುಶಾಲ್ ಚೌಕ್ಸೆ,ಅಪಾರ ಜಿಲ್ಲಾ ರಕ್ಷಣಾಧಿಕಾರಿ ರಾಜಾ ಇಮಾಮ್ ಖಾಸಿಮ್,ಮಾರ್ಗದರ್ಶನದಲ್ಲಿ ಚಿಂತಾಮಣಿ ಉಪವಿಭಾಗರವರ ಮುರಳೀಧರ ಪಿ.ಡಿ.ವೈ.ಎಸ್.ಪಿ ನೇತೃತ್ವದಲ್ಲಿ,ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಠಾಣೆಯ ಸಿಬ್ಬಂದಿಯವ ರೊಂದಿಗೆ ಕೈವಾರದಲ್ಲಿ ಗಸ್ತು ಮಾಡಿಮಾಡಿಕೊಂಡು ಕೈವಾರ-ಗವಿ ಕಡೆಗೆ ಹೋಗುವ ರಸ್ತೆಯಲ್ಲಿ ಗಸ್ತಿನಲ್ಲಿದ್ದಾಗ ಮಾತೇಶ್ವರ ಇಂಡಿಯನ್ ಗ್ಯಾಸ್ ಗೋಡೌನ್ ಹಿಂಭಾಗದಲ್ಲಿರುವ ಸ್ಮಶಾನದ ಬಳಿ ಯಾರೋ ಇಬ್ಬರು ಒಂದು ಕವರ್ ನಲ್ಲಿ ಅಕ್ರಮ ಗಾಂಜಾವನ್ನು ಇಟ್ಟುಕೊಂಡಿದ್ದು ಪೊಲೀಸರು ಇವರನ್ನು ಸೆರೆ ಹಿಡಿದು ಅವರಿಂದ 1 ಕೆ.ಜಿ. 80 ಗ್ರಾಂ ತೂಕವಿದ್ದು ಗಾಂಜಾವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: Chitradurga Accident: ಚಿತ್ರದುರ್ಗದಲ್ಲಿ 15 ಪಲ್ಟಿ ಹೊಡೆದ ಕಾರು; ಮೂವರ ಸಾವು, ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ