ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SRH vs KKR: ಸನ್‌ರೈಸರ್ಸ್‌ ಹೈದರಾಬಾದ್‌ಗೆ ಹ್ಯಾಟ್ರಿಕ್‌ ಸೋಲು, ಕೋಲ್ಕತಾ ನೈಟ್‌ ರೈಡರ್ಸ್‌ಗೆ ಎರಡನೇ ಜಯ!

SRH vs KKR Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ತೋರಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 15ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 80 ರನ್‌ ಗೆಲುವು ಪಡೆಯಿತು.

SRH vs KKR: ಸನ್‌ರೈಸರ್ಸ್‌ಗೆ ಹೀನಾಯ ಸೋಲುಣಿಸಿದ ಕೋಲ್ಕತಾ!

ಎಸ್‌ಆರ್‌ಎಚ್‌ ಎದುರು ಕೆಕೆಆರ್‌ಗೆ 80 ರನ್‌ ಜಯ.

Profile Ramesh Kote Apr 3, 2025 11:42 PM

ಕೋಲ್ಕತಾ: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2025) ಟೂರ್ನಿಯ 15ನೇ ಪಂದ್ಯದಲ್ಲಿ (KKR vs SRH) ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 80 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಇದರೊಂದಿಗೆ ಅಜಿಂಕ್ಯ ರಹಾನೆ (Ajinkya Rahane) ನಾಯಕತ್ವದ ಕೆಕೆಆರ್‌ ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು. ಆದರೆ, ಪ್ಯಾಟ್‌ ಕಮಿನ್ಸ್‌ ನಾಯಕತ್ವದ ಸನ್‌ರೈಸರ್ಸ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಮುಖಭಂಗ ಅನುಭವಿಸಿದೆ ಹಾಗೂ ಪಾಯಿಂಟ್ಸ್‌ ಟೇಬಲ್‌ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.

ಗುರುವಾರ ಇಲ್ಲಿನ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ನೀಡಿದ್ದ 201 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಸನ್‌ರೈಸರ್ಸ್‌ ಹೈದರಾಬಾದ್‌ತಂಡ, ವೈಭವ್‌ ಅರೋರಾ (29 ಕ್ಕೆ 3) ಮಾರಕ ದಾಳಿ ಹಾಗೂ ವರುಣ್‌ ಚಕ್ರವರ್ತಿ (22 ಕ್ಕೆ 3) ಸ್ಪಿನ್‌ ಮೋಡಿಗೆ ನಲುಗಿ 16.4 ಓವರ್‌ಗಳಿಗೆ ಕೇವಲ 120 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಭಾರಿ ಅಂತರದಲ್ಲಿ ಸೋಲು ಅನುಭವಿಸಿತು.

IPL 2025: ಮೊಹಮ್ಮದ್‌ ಸಿರಾಜ್‌ರನ್ನು ಕೈ ಬಿಟ್ಟು ಆರ್‌ಸಿಬಿ ತಪ್ಪು ಮಾಡಿದೆ ಎಂದ ವೀರೇಂದ್ರ ಸೆಹ್ವಾಗ್‌!

ಗುರಿ ಹಿಂಬಾಲಿಸಿದ ಸನ್‌ರೈಸರ್ಸ್‌ ತಂಡದ ಪರ ಹೆನ್ರಿಚ್‌ ಕ್ಲಾಸೆನ್‌ (33), ಕಮಿಂದು ಮೆಂಡಿಸ್‌ (27) ಕೊಂಚ ಪ್ರತಿರೋಧ ನೀಡಿದ್ದು ಬಿಟ್ಟರೆ ಇನ್ನುಳಿದ ಅಗ್ರ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಟ್ರಾವಿಸ್‌ ಹೆಡ್‌ (4), ಅಭಿಷೇಕ್‌ ಶರ್ಮಾ(2) ಹಾಗೂ ಇಶಾನ್‌ ಕಿಶನ್‌ (2) ಅವರು ಬಹುಬೇಗ ವಿಕೆಟ್‌ ಒಪ್ಪಿಸಿದರು. ಇದರ ಪರಿಣಾಮ ಹೈದರಾಬಾದ್‌ ತಂಡ ಚೇಸಿಂಗ್‌ ಪಂದ್ಯದಲ್ಲಿ ಸೋಲು ಅನುಭವಿಸಬೇಕಾಯಿತು.



ಕೆಕೆಆರ್‌ ಪರ ಮಾರಕ ಬೌಲಿಂಗ್‌ ದಾಳಿ ನಡೆಸಿದ ವೈಭವ್‌ ಅರೋರ 29 ರನ್‌ ನೀಡಿ 3 ವಿಕೆಟ್‌ ಪಡೆದರೆ, ವರುಣ್‌ ಚಕ್ರವರ್ತಿ 22 ರನ್‌ ನೀಡಿ 3 ವಿಕೆಟ್‌ಗಳನ್ನು ಕಬಳಿಸಿದರು. ಆಂಡ್ರೆ ರಸೆಲ್‌ ಕೂಡ ಎರಡು ವಿಕೆಟ್‌ಗಳನ್ನು ಕಬಳಿಸಿದರು.

200 ರನ್‌ ಕಲೆ ಹಾಕಿದ ಕೆಕೆಆರ್

ಇದಕ್ಕೂ ಮುನ್ನ ಟಾಸ್‌ ಗೆದ್ದಿದ್ದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಆ ಮೂಲಕ ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ಆಹ್ವಾನಿಸಿದ್ದರು. ಆ ಮೂಲಕ ಕೆಕೆಆರ್‌ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆಯನ್ನು ರೂಪಿಸಿದ್ದರು. ಆದರೆ, ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್‌ ಇದನ್ನು ಸುಳ್ಳು ಮಾಡಿದರು. ಅಂಗ್‌ಕ್ರಿಷ್‌ ರಘುವಂಶಿ ಹಾಗೂ ವೆಂಕಟೇಶ್‌ ಅಯ್ಯರ್‌ ಅವರ ಅರ್ಧಶತಕಗಳ ಬಲದಿಂದ ಕೋಲ್ಕತಾ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎಸ್‌ಆರ್‌ಎಚ್‌ಗೆ 201 ರನ್‌ಗಳ ಕಠಿಣ ಗುರಿಯನ್ನು ನೀಡಿತು.



ರಹಾನೆ-ಅಂಗ್‌ಕೃಷ್‌ ಜುಗಲ್‌ಬಂದಿ

ಕೆಕೆಆರ್‌ ಪರ ಇನಿಂಗ್ಸ್‌ ಆರಂಭಿಸಿದ ಸುನೀಲ್‌ ನರೇನ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ಬೇಗ ವಿಕೆಟ್‌ ಒಪ್ಪಿಸಿದರು. ಈ ಮೂರನೇ ವಿಕೆಟ್‌ಗೆ ಜೊತೆಯಾದ ಅಂಗ್‌ಕ್ರಿಷ್‌ ರಘುವಂಶಿ ಹಾಗೂ ನಾಯಕ ಅಜಿಂಕ್ಯ ರಹಾನೆ 81 ರನ್‌ಗಳನ್ನು ಕಲೆ ಹಾಕಿದರು. ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ವೇಳೆ ಅದ್ಭುತ ಬ್ಯಾಟ್‌ ಮಾಡಿದ ನಾಯಕ ರಹಾನೆ 27 ಎಸೆತಗಳಲ್ಲಿ 38 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಸ್ಪೋಟಕ ಬ್ಯಾಟ್‌ ಮಾಡಿದ ಅಂಗ್‌ಕ್ರಿಷ್‌, 32 ಎಸೆತಗಳಲ್ಲಿ 2 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 50 ರನ್‌ ಗಳಿಸಿ ಕೆಕೆಆರ್‌ ತಂಡದ ಮೊತ್ತವನ್ನು 100ರ ಗಡಿಯನ್ನು ದಾಟಿಸಿ ವಿಕೆಟ್‌ ಒಪ್ಪಿಸಿದರು.

IPL 2025: ವಿರಾಟ್‌ ಕೊಹ್ಲಿಯ ಬೆರಳಿನ ಗಾಯದ ಬಗ್ಗೆ ಅಪ್‌ಡೇಟ್‌ ನೀಡಿದ ಆರ್‌ಸಿಬಿ ಕೋಚ್‌ ಆಂಡಿ ಫ್ಲವರ್‌!

ಅಬ್ಬರಿಸಿದ ವೆಂಕಟೇಶ್‌ ಅಯ್ಯರ್‌

ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ವೆಂಕಟೇಶ್‌ ಅಯ್ಯರ್‌, ಸನ್‌ರೈಸರ್ಸ್‌ ಬೌಲರ್‌ಗಳನ್ನು ಬಲವಾಗಿ ದಂಡಿಸಿದರು. ಇವರು ಆಡಿದ ಕೇವಲ 29 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 60 ರನ್‌ ಗಳಿಸಿದರು. ಆ ಮೂಲಕ ಕೆಕೆಆರ್‌ ತಂಡದ ಮೊತ್ತವನ್ನು 200ರ ಸನಿಹ ತಂದರು. ಡೆತ್‌ ಓವರ್‌ಗಳಲ್ಲಿ ವೆಂಕಟೇಶ್‌ ಅಯ್ಯರ್‌ಗೆ ಮತ್ತೊಂದು ತುದಿಯಲ್ಲಿ ಸಾಥ್‌ ನೀಡುತ್ತಿದ್ದ ರಿಂಕು ಸಿಂಗ್‌ 17 ಎಸೆತಗಳಲ್ಲಿ ಅಜೇಯ 32 ರನ್‌ ಗಳಿಸಿ ಕೆಕೆಆರ್‌ಗೆ ಉಪಯುಕ್ತ ಕೊಡುಗೆಯನ್ನು ನೀಡಿದರು.

ಸ್ಕೋರ್‌ ವಿವರ

ಕೋಲ್ಕತಾ ನೈಟ್‌ ರೈಡರ್ಸ್‌: 20 ಓವರ್‌ಗಳಿಗೆ 200-6 (ವೆಂಕಟೇಶ್‌ ಅಯ್ಯರ್‌ 60, ಅಂಗ್‌ಕ್ರಿಷ್‌ ರಘುವಂಶಿ 50, ಅಜಿಂಕ್ಯ ರಹಾನೆ 38, ರಿಂಕು ಸಿಂಗ್‌ 32; ಮೊಹಮ್ಮದ್‌ ಶಮಿ 29 ಕ್ಕೆ 1, ಝೀಸನ್‌ ಅನ್ಸಾರಿ 25 ಕ್ಕೆ 1)

ಸನ್‌ರೈಸರ್ಸ್‌ ಹೈದರಾಬಾದ್‌: 16.4 ಓವರ್‌ಗಳಿಗೆ 120-10 (ಹೆನ್ರಿಚ್‌ ಕ್ಲಾಸೆನ್‌ 33, ಕಮಿಂದು ಮೆಂಡಿಸ್‌ 27; ವೈಭವ್‌ ಅರೋರ 29 ಕ್ಕೆ3, ವರುಣ್‌ ಚಕ್ರವರ್ತಿ 22 ಕ್ಕೆ3)

ಪಂದ್ಯ ಶ್ರೇಷ್ಠ ಪ್ರಶಸ್ತಿ: ವೈಭವ್‌ ಅರೋರ