Kagiso Rabada: ಆರ್‌ಸಿಬಿ ವಿರುದ್ಧ ಗೆಲುವು ಪಡೆದ ಬೆನ್ನಲ್ಲೆ ಗುಜರಾತ್ ಟೈಟನ್ಸ್‌ಗೆ ಆಘಾತ!
Kagiso Rabada exits IPL 2025: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗೆಲುವು ಪಡೆದ ಬೆನ್ನಲ್ಲೆ ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಹಿರಿಯ ವೇಗಿ ಕಗಿಸೊ ರಬಾಡ ಅವರು ವೈಯಕ್ತಿಕ ಕಾರಣಗಳಿಂದ ಐಪಿಎಲ್ ಟೂರ್ನಿಯನ್ನು ತೊರೆದು ದಕ್ಷಿಣ ಆಫ್ರಿಕಕ್ಕೆ ಮರಳಿದ್ದಾರೆ.

2025ರ ಐಪಿಎಲ್ ತೊರೆದ ಕಗಿಸೊ ರಬಾಡ.

ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಿಂದ ಗುಜರಾತ್ ಟೈಟನ್ಸ್ (Gujarat Titans) ತಂಡದ ಹಿರಿಯ ವೇಗಿ ಕಗಿಸೊ ರಬಾಡ ಹೊರ ನಡೆದಿದ್ದಾರೆ. ಅವರು ವೈಯಕ್ತಿಕ ಕಾರಣಗಳಿಂದ ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ. ಅಂದ ಹಾಗೆ ಗುಜರಾತ್ ಟೈಟನ್ಸ್ ಪರ ಆರಂಭಿಕ ಎರಡು ಪಂದ್ಯಗಳಲ್ಲಿ ಕಗಿಸೊ ರಬಾಡ ( Kagiso Rabada) ಆಡಿದ್ದರು. ಆದರೆ, ಬುಧವಾರ ಬೆಂಗಳೂರಿನಲ್ಲಿ ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ ಪಂದ್ಯದಲ್ಲಿಯೂ ರಬಾಡ ಆಡಿರಲಿಲ್ಲ. ಇವರ ಬದಲು ಅರ್ಷದ್ ಖಾನ್ ಆಡಿದ್ದರು. ಈ ಪಂದ್ಯದಲ್ಲಿ ಗುಜರಾತ್ 8 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು.
ಆರಂಭಿಕ ಎರಡು ಪಂದ್ಯಗಳಲ್ಲಿ ಕಗಿಸೊ ರಬಾಡ ತಮ್ಮ ಪಾಲಿನ ಓವರ್‌ಗಳನ್ನು ಪೂರ್ಣಗೊಳಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ಬೌಲ್ ಮಾಡಿದ್ದ 8 ಓವರ್‌ಗಳಲ್ಲಿ 83 ರನ್‌ಗಳನ್ನು ನೀಡಿದ್ದ ಅವರು ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಆರ್‌ಸಿಬಿ ವಿರುದ್ಧದ ಪಂದ್ಯದ ಟಾಸ್ ವೇಳೆ ಶುಭಮನ್ ಗಿಲ್ ಅವರು ಕಗಿಸೊ ರಬಾಡ ಅವರ ಅಲಭ್ಯತೆ ಬಗ್ಗೆ ಮಾಹಿತಿ ನೀಡಿದ್ದರು. ವೈಯಕ್ತಿಕ ಕಾರಣಗಳಿಂದ ರಬಾಡ ಆಡುತ್ತಿಲ್ಲ. ಅವರ ಬದಲು ಅರ್ಷದ್ ಖಾನ್ ಆಡಲಿದ್ದಾರೆಂದುಯ ತಿಳಿಸಿದ್ದರು.
IPL 2025: ವಿರಾಟ್ ಕೊಹ್ಲಿಯ ಬೆರಳಿನ ಗಾಯದ ಬಗ್ಗೆ ಅಪ್‌ಡೇಟ್ ನೀಡಿದ ಆರ್‌ಸಿಬಿ ಕೋಚ್ ಆಂಡಿ ಫ್ಲವರ್!
"ವೈಯಕ್ತಿಕ ಕಾರಣಗಳಿಂದ ಗುಜರಾತ್ ಟೈಟನ್ಸ್ ತಂಡ ವೇಗಿ ಕಗಿಸೊ ರಬಾಡ ಅವರು ಪ್ರಸ್ತುತ ನಡೆಯುತ್ತಿರುವ ಟಾಪಾ ಐಪಿಎಲ್ ಟೂರ್ನಿಯನ್ನು ತೊರೆದು ದಕ್ಷಿಣ ಆಫ್ರಿಕಾಗೆ ಮರಳಿದ್ದಾರೆ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಗುಜರಾತ್ ಟೈಟನ್ಸ್ ತಂಡದ ಆರಂಭಿಕ ಎರಡು ಪಂದ್ಯಗಳಲ್ಲಿ ಆಡಿದ್ದರು. ತಮ್ಮ ಮುಖ್ಯವಾದ ವೈಯಕ್ತಿಕ ಸಮಸ್ಯೆಗಳನ್ನು ಪರಿಹರಿಸಲು ಕಗಿಸೊ ರಬಾಡ ದಕ್ಷಿಣ ಆಫ್ರಿಕಕ್ಕೆ ತೆರಳಿದ್ದಾರೆ "ಎಂದು ಗುಜರಾತ್ ಟೈಟನ್ಸ್ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಗುಜರಾತ್ ಟೈಟನ್ಸ್‌ಗೆ ದೊಡ್ಡ ಹಿನ್ನಡೆ
ಕಗಿಸೊ ರಬಾಡ ಅವರನ್ನು ಕಳೆದುಕೊಂಡಿರುವುದು ಗುಜರಾತ್ ಟೈಟನ್ಸ್ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ಆದರೆ, ಕಳೆದ ವರ್ಷ ನಡೆದಿದ್ದ ಮೆಗಾ ಹರಾಜಿನಲ್ಲಿ ಆಶಿಶ್ ನೆಹ್ರಾ ಅವರು ಅತ್ಯುತ್ತಮ ವೇಗದ ಬೌಲರ್‌ಗಳನ್ನು ಖರೀದಿಸಿದ್ದಾರೆ. ಆದರೆ, ಇತ್ತೀಚಿನ ಬೆಳವಣಿಗೆಗಳಿಂದ ಪ್ರೀಮಿಯರ್ ವೇಗಿಯನ್ನು ಗುಜರಾತ್ ಟೈಟನ್ಸ್ ತಂಡ ಕಳೆದುಕೊಂಡಾಗಿದೆ.
🚨 RABDA RETURNED HOME. 🚨
— Mufaddal Vohra (@mufaddal_vohra) April 3, 2025
- Kagiso Rabada has travelled back to South Africa due to personal reasons. (Espncricinfo). pic.twitter.com/Eo6KYyTrmc
ಕಗಿಸೊ ರಬಾಡ ಅನುಪಸ್ಥಿತಿಯಲ್ಲಿಯೂ ಗುಜರಾತ್ ಟೈಟನ್ಸ್ ತಂಡ ವೇಗದ ಬೌಲರ್‌ಗಳು ತಮ್ಮ ಸಾಮರ್ಥ್ಯವನ್ನು ಮೆರೆದಿದ್ದರು. ಆರ್‌ಸಿಬಿ ತಂಡದ ತವರು ಅಂಗಣವಾದ ಬೆಂಗಳುರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ತಂಡದ ಮೊಹಮ್ಮದ್ ಸಿರಾಜ್ ಹಾಗೂ ಅರ್ಷದ್ ಖಾನ್ ಅವರು ತಮ್ಮ ಬೌಲಿಂಗ್‌ನಲ್ಲಿ ಪ್ರಾಬಲ್ಯವನ್ನು ಮೆರೆದಿದ್ದಾರೆ. ಗುಜರಾತ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತು, ಇನ್ನೊಂದು ಪಂದ್ಯದಲ್ಲಿ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ.