Friday, 26th April 2024

ಕಟೀಲು ಬ್ರೇಕಿಂಗ್: ಕರೋನಾ ವೈರಸ್ ಭೀತಿಗೆ ಜಾತ್ರೋತ್ಸವ ಅರ್ಧಕ್ಕೆ ಮೊಟಕು

ಮಂಗಳೂರು: ಕರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅಧಿದೇವತೆ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.

ಕಳೆದ ಸೋಮವಾರ ರಾತ್ರಿ ರಥೋತ್ಸವ ನಡೆದಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ವಿನಂತಿಯ ಬಳಿಕವೂ ಭಕ್ತರು ದೇವ ಸ್ಥಾನದ ರಥೋತ್ಸವದ ಸಂದರ್ಭದಲ್ಲಿ ಹಾಜರಿದ್ದರು. ದಕ್ಷಿಣ ಕನ್ನಡ ಜಿಲ್ಲಾಡಳಿತದ ಅಧಿಕಾರಿಗಳು, ತಹಸೀಲ್ದಾರ ಸೇರಿದಂತೆ ಅಧಿಕಾರಿಗಳು ಮಂಡಳಿಗೆ ಮತ್ತೆ ಸೂಚನೆ ನೀಡಿದ್ದು, ಜಾತ್ರೋತ್ಸವ ಅರ್ಧಕ್ಕೆ ಮೊಟಕುಗೊಂಡಿದೆ.

ಏ.13 ರಿಂದ 20 ರವರೆಗೆ ಕಟೀಲು ಜಾತ್ರೋತ್ಸವ ನಡೆಯಬೇಕಾಗಿದ್ದು, ಅರ್ಧಕ್ಕೆ ಮೊಟಕುಗೊಂಡಿದೆ. ಮಂಗಳವಾರ ದೇವಸ್ಥಾನ ದಲ್ಲಿ ಶಯನ, ಕವಾಟೋ ಧ್ಛಾಟನೆ, ರಾತ್ರಿ ರಥೋತ್ಸವ, ಅವಭೃತೋತ್ಸವ ನಡೆಯಬೇಕಿತ್ತು.

ಅದೇ ರೀತಿ, ಕಟೀಲು ಶ್ರೀದುರ್ಗಾಪರಮೇಶ್ವರಿಯ ಎಕ್ಕಾರು ಕೊಡಮಾಣಿತ್ತಾಯ ಭೇಟಿ ಮತ್ತು ಶಿಬರೂರು ಕೊಡಮಣಿತ್ತಾಯ ಭೇಟಿಯೂ ರದ್ದಾಗಿದೆ. ಕಟೀಲು ದುರ್ಗಾಪರಮೇಶ್ವರಿ ಜಾತ್ರೆಯ ಪ್ರಮುಖ ಆಕರ್ಷಣೆ ತೂಟೆದಾರ ಉತ್ಸವವೂ ರದ್ದಾಗಿದೆ.

Leave a Reply

Your email address will not be published. Required fields are marked *

error: Content is protected !!