ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Myanmar Earthquake: ಮ್ಯಾನ್ಮಾರ್‌ ರಣಭೀಕರ ಭೂಕಂಪದ ಸ್ಯಾಟಲೈಟ್‌ ಫೊಟೋಗಳು ರಿಲೀಸ್‌!

ಭೂಕಂಪದ ಭೀಕರತೆಗೆ ಸಿಲುಕಿ ಮ್ಯಾನ್ಮಾರ್‌ ಸಂಪೂರ್ಣವಾಗಿ(Myanmar Earthquake) ನಾಶಗೊಂಡಿರುವುದು ಸ್ಯಾಟಲೈಟ್‌ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ಸೇತುವೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮೂಲ ಸೌಕರ್ಯಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಇನ್ನು ಸಾವಿನ ಸಂಖ್ಯೆ 1,700ಕ್ಕೆ ಏರಿಕೆ ಆಗಿದೆ.

ಮ್ಯಾನ್ಮಾರ್‌ ಭೂಕಂಪದ ಸ್ಯಾಟಲೈಟ್‌ ಫೊಟೋ ಫುಲ್‌ ವೈರಲ್‌

Profile Rakshita Karkera Mar 31, 2025 8:46 AM

ನೇಪಿಟಾವ್: ರಣಭೀಕರ ಮ್ಯಾನ್ಮಾರ್‌ ಭೂಕಂಪದ(Myanmar Earthquake) ರಣಭೀಕರತೆಗೆ ಸಂಭವಿಸಿದ ಸಾವಿನ ಸಂಖ್ಯೆ 1,700ಕ್ಕೆ ಏರಿಕೆ ಆಗಿದ್ದು, 3,400 ಗಾಯಗೊಂಡಿದ್ದಾರೆ. ಇನ್ನು ಈ ಭೂಕಂಪದ ಸ್ಯಾಟಲೈಟ್‌ ಫೊಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ. ಭೂಕಂಪದ ಭೀಕರತೆಗೆ ಸಿಲುಕಿ ಮ್ಯಾನ್ಮರ್‌ ಸಂಪೂರ್ಣವಾಗಿ ನಾಶಗೊಂಡಿರುವುದು ಸ್ಯಾಟಲೈಟ್‌ ದೃಶ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು ಮತ್ತು ಸೇತುವೆಗಳು ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಮೂಲ ಸೌಕರ್ಯಗಳು ಸಂಪೂರ್ಣವಾಗಿ ಹಾನಿಗೊಂಡಿವೆ. ಇನ್ನು ನೇಪಿಟಾವ್‌ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ನಿಯಂತ್ರಣ ಗೋಪುರ ಕುಸಿದು ಬಿದ್ದಿದ್ದು, ಭಾರತ ಮತ್ತು ಚೀನಾದ ರಕ್ಷಣಾ ತಂಡಗಳನ್ನು ಹೊತ್ತ ವಿಮಾನಗಳು ಮಂಡಲೆ ಮತ್ತು ನೇಪಿಟಾವ್‌ನ ಪ್ರಮುಖ ನಗರಗಳಿಗೆ ನೇರವಾಗಿ ಹೋಗುವ ಬದಲು ಯಾಂಗೊನ್‌ನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಯಿತು.

ಮ್ಯಾನ್ಮಾರ್ ಅನ್ನು ತಲ್ಲಣಗೊಳಿಸಿದ 7.7 ತೀವ್ರತೆಯ ಭೂಕಂಪವು 300 ಕ್ಕೂ ಹೆಚ್ಚು ಪರಮಾಣು ಬಾಂಬ್‌ಗಳಿಗೆ ಸಮಾನವಾದ ಶಕ್ತಿಯನ್ನು ಬಿಡುಗಡೆ ಮಾಡಿದೆ ಎಂದು ಭೂವಿಜ್ಞಾನಿಗಳು ತಿಳಿಸಿದ್ದಾರೆ. ವಿಜ್ಞಾನಿಗಳು ಈ ಪ್ರದೇಶದ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಮ್ಯಾನ್ಮಾರ್‌ನ ಮಂಡಲೇ ನಗರದಲ್ಲಿ ಕೇಂದ್ರಬಿಂದುವಾಗಿರುವ ಈ ಭೂಕಂಪವು ಮಧ್ಯಾಹ್ನ 10 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಭೂಕಂಪನ ಕುರಿತು ಮಾತನಾಡಿರುವ ಭೂ ವಿಜ್ಞಾನಿ ಜೆಸ್ ಫೀನಿಕ್ಸ್ ಈ ಭೂಕಂಪದಿಂದ ಬಿಡುಗಡೆಯಾಗುವ ಬಲವು ಸುಮಾರು 334 ಪರಮಾಣು ಬಾಂಬ್‌ಗಳಿಗೆ ಸಮಾನಗಿತ್ತು ಎಂದು ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆ 1,600 ಮೀರಿದೆ, ಆದರೆ ಯುಎಸ್ ಭೂವೈಜ್ಞಾನಿಕ ಸಮೀಕ್ಷೆಯು ಹಿಂದಿನ ಮುನ್ಸೂಚನೆಗಳ ಆಧಾರದ ಮೇಲೆ ಸಾವುನೋವುಗಳು 10,000 ಮೀರಬಹುದು ಎಂದು ಅಂದಾಜಿಸಿದೆ.

sattelite visual

ಭೂಕಂಪದಿಂದಾಗಿ ಮ್ಯಾನ್ಮಾರ್‌ ನಲುಗಿ ಹೋಗಿದೆ. ಮ್ಯಾನ್ಮಾರ್‌ನ ಮಂಡಲೇಯಲ್ಲಿ, ಕಟ್ಟಡಗಳು ಕುಸಿದಿದೆ. ಸಾಗೈಂಗ್‌ನಿಂದ ಇರಾವಡ್ಡಿ ನದಿಗೆ ವ್ಯಾಪಿಸಿರುವ ಸುಮಾರು 100 ವರ್ಷಗಳಷ್ಟು ಹಳೆಯದಾದ ಅವಾ ಸೇತುವೆ ಕುಸಿದಿದೆ. ಭಾರತ ಸರ್ಕಾರ ಕೂಡ ಮಯನ್ಮಾರ್‌ಗೆ ಸಹಾಯ ಹಸ್ತ ಚಾಚಿದೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿದ್ದೇನೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ. ಔಷಧಿಗಳು,ಲಸಿಕೆಗಳು ಸೇರಿದಂತೆ ಅನೇಕ ಅತ್ಯಗತ್ಯ ವಸ್ತುಗಳನ್ನು ಭಾರತ, ಮ್ಯಾನ್ಮಾರ್ ಗೆ ರವಾನಿಸಿದೆ.

ಈ ಸುದ್ದಿಯನ್ನೂ ಓದಿ: Earthquake: ಮ್ಯಾನ್ಮಾರ್ ಭೂಕಂಪ '334 ಪರಮಾಣು ಬಾಂಬ್‌' ಶಕ್ತಿಯನ್ನು ಬಿಡುಗಡೆ ಮಾಡಿದೆ; ಭೂ ವಿಜ್ಞಾನಿಗಳ ಶಾಕಿಂಗ್ ಹೇಳಿಕೆ !

ಭಾರತ ಮ್ಯಾನ್ಮಾರ್‌ಗೆ ಸಹಾಯ ಹಸ್ತ ಚಾಚಿದ್ದು, ಆಪರೇಷನ್ ಬ್ರಹ್ಮ ' (Operation Brahma) ಎಂಬ ಬ್ಯಾನರ್ ಅಡಿಯಲ್ಲಿ ಎರಡು ನೌಕಾ ಹಡಗುಗಳನ್ನು ಕಳುಹಿಸಿದೆ. ಏರ್ ಲಿಫ್ಟ್ ಮಾಡಲು ಫೀಲ್ಡ್ ಆಸ್ಪತ್ರೆ ವ್ಯವಸ್ಥೆ ಮಾಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 118 ಸದಸ್ಯರ ಭಾರತೀಯ ಸೇನೆಯ ಫೀಲ್ಡ್ ಆಸ್ಪತ್ರೆಯ ಘಟಕ ಆಗ್ರಾದಿಂದ ಮಾಂಡಲೆಗೆ ತೆರಳುತ್ತಿದೆ. ಹದಿನೈದು ಟನ್‌ ಪರಿಹಾರ ಸಾಮಗ್ರಿಗಳನ್ನು ಹೊತ್ತು ಭಾರತದ ವಾಯುಪಡೆಯ ಸಿ-130 ಜೆ ವಿಮಾನವು ಮ್ಯಾನ್ಮಾರ್‌ನ ಯಾಂಗಾನ್‌ ನಗರವನ್ನು ತಲುಪಿದೆ.