US Court : ಟ್ರಂಪ್‌ಗೆ ಬಿಗ್ ಶಾಕ್ ! ಅಧಿಕಾರಿಗಳ ವಜಾಗೊಳಿಸುವಿಕೆಯನ್ನು ತಡೆ ಹಿಡಿದ ಕೋರ್ಟ್
ಇತ್ತೀಚೆಗೆ ಅಮೆರಿಕದ ಫೆಡರಲ್ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ ಎಂದು ಹೇಳಿತ್ತು. ಇದೀಗ ನ್ಯಾಯಾಲಯ ಸರ್ಕಾರಕ್ಕೆ ಶಾಕ್ ನೀಡಿದ್ದು, ಸಾಮೂಹಿಕ ವಜಾಗಳನ್ನು ರದ್ದುಗೊಳಿಸುವಂತೆ ಫೆಡರಲ್ ನ್ಯಾಯಾಧೀಶರು ಗುರುವಾರ ಅಮೆರಿಕ ಸರ್ಕಾರಕ್ಕೆ ಆದೇಶಿಸಿದ್ದಾರೆ

ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆ ಡೊನಾಲ್ಡ್ ಟ್ರಂಪ್ (Donald Trump) ಆಯ್ಕೆಯಾದ ಮೇಲೆ ಹಲವು ಮಹತ್ವದ ಬದಲಾವಣೆಗಳನ್ನು ತರುತ್ತಿದ್ದಾರೆ. ಟ್ರಂಪ್ ಅವರ ದಕ್ಷತಾ (DOGE) ಇಲಾಖೆಯು ಇತ್ತೀಚೆಗೆ ಅಮೆರಿಕದ ಫೆಡರಲ್ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ ಎಂದು ಹೇಳಿತ್ತು. ಇದೀಗ ನ್ಯಾಯಾಲಯ ಸರ್ಕಾರಕ್ಕೆ ಶಾಕ್ ನೀಡಿದ್ದು, ಸಾಮೂಹಿಕ ವಜಾಗಳನ್ನು ರದ್ದುಗೊಳಿಸುವಂತೆ ಫೆಡರಲ್ ನ್ಯಾಯಾಧೀಶರು (US Court) ಗುರುವಾರ ಅಮೆರಿಕ ಸರ್ಕಾರಕ್ಕೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾ ನ್ಯಾಯಾಧೀಶ ವಿಲಿಯಂ ಅಲ್ಸಪ್ ಅವರು ಪ್ರೊಬೇಷನರಿ ನೌಕರರ ಸಾಮೂಹಿಕ ವಜಾಗೊಳಿಸುವಿಕೆಯು ಕಾನೂನುಬಾಹಿರವಾಗಿದೆ ಎಂದು ಹೇಳಿದ್ದಾರೆ. ಸಿಬ್ಬಂದಿ ನಿರ್ವಹಣಾ ಕಚೇರಿಯು ಫೆಡರಲ್ ಏಜೆನ್ಸಿಗಳಿಗೆ ಯಾವುದೇ ಕಾರ್ಮಿಕರನ್ನು ವಜಾಗೊಳಿಸುವಂತೆ ಆದೇಶಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ. ವಿಶ್ವದ ಇತಿಹಾಸದಲ್ಲಿ ಯಾವುದೇ ಕಾನೂನಿನ ಅಡಿಯಲ್ಲಿ ಸಿಬ್ಬಂದಿ ನಿರ್ವಹಣಾ ಕಚೇರಿ (OPM) ಯಾವುದೇ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಥವಾ ವಜಾಗೊಳಿಸಲು ಯಾವುದೇ ಅಧಿಕಾರವನ್ನು ಹೊಂದಿಲ್ಲ" ಎಂದು ಅವರು ಹೇಳಿದರು.
ಫೆಡರಲ್ ಏಜೆನ್ಸಿಗಳು ಎಲ್ಲಾ ಪ್ರೊಬೇಷನರಿ ಸಿಬ್ಬಂದಿಯನ್ನು ವಜಾಗೊಳಿಸುವ ಕಾನೂನುಬಾಹಿರ ಆದೇಶಗಳ ವಿರುದ್ಧ ಒಕ್ಕೂಟಗಳು ಮತ್ತು ವಕಾಲತ್ತು ಗುಂಪುಗಳು ಮೊಕದ್ದಮೆ ಹೂಡಿದ ನಂತರ ಗುರುವಾರದ ತೀರ್ಪು ಬಂದಿದೆ.
ಈ ಸುದ್ದಿಯನ್ನೂ ಓದಿ: Donald Trump: ಭಾರತಕ್ಕೆ ಎಂಟ್ರಿ ಕೊಡಲು ಟೆಸ್ಲಾ ಸಿದ್ಧತೆ; ಎಲಾನ್ ಮಸ್ಕ್ ನಿರ್ಧಾರ ಅನ್ಯಾಯ ಎಂದ ಡೊನಾಲ್ಡ್ ಟ್ರಂಪ್
ಇತ್ತೀಚೆಗೆ ದಕ್ಷತಾ ಇಲಾಖೆಯ ಮುಖ್ಯಸ್ಥ ಎಲಾನ್ ಮಸ್ಕ್ ಅಮೆರಿಕದ ಫೆಡರಲ್ ಅಧಿಕಾರಿಗಳಿಗೆ ಸರಿಯಾಗಿ ಕೆಲಸ ನಿರ್ವಹಿಸಿ ಇಲ್ಲವೇ ಉದ್ಯೋಗ ತೊರೆಯಿರಿ ಎಂದು ಹೇಳಿದ್ದರು. ಈ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಕಳೆದ ವಾರ ಏನು ಮಾಡಿದಿರಿ ಎಂಬುದರ ಬಗ್ಗೆ ಶೀಘ್ರದಲ್ಲಿ ನಿಮಗೆ ಇಮೇಲ್‌ಗಳು ಬರಲಿವೆ. ಒಂದು ವೇಳೆ ಅದಕ್ಕೆ ಉತ್ತರಿಸಲು ವಿಫಲರಾದರೆ ಅದನ್ನು ರಾಜಿನಾಮೆ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದರು. ಉದ್ಯೋಗಿಗಳು ಕಳೆದ ಏಳು ದಿನಗಳಲ್ಲಿ ತಮ್ಮ ಸಾಧನೆಗಳನ್ನು ಸರಿಸುಮಾರು ಐದು ಬುಲೆಟ್ ಪಾಯಿಂಟ್‌ಗಳಲ್ಲಿ ವಿವರಿಸಲು ಕೇಳಲಾಗಿತ್ತು.
ದಕ್ಷತಾ ಇಲಾಖೆಯ ನೇತೃತ್ವವನ್ನು ಎಲಾನ್ ಮಸ್ಕ್ ವಹಿಸಿಕೊಂಡ ನಂತರ ಸಾಕಷ್ಟು ಬದಲಾವಣೆಯಾಗಿದೆ. ಸರ್ಕಾರಿ ವೆಚ್ಚವನ್ನು ಮೇಲ್ವಿಚಾರಣೆ ಮಾಡಲು ಮತ್ತು ಸರಿಯಾದ ರೀತಿಯಲ್ಲಿ ವಿನಿಯೋಗಿಸಲು DOGE, 723 ಮಿಲಿಯನ್ ಡಾಲರ್ ವಿದೇಶಿ ನೆರವು ನಿಧಿಯನ್ನು ಕಡಿತಗೊಳಿಸಿದೆ.