ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Haryana Horror: ಹರಿಯಾಣ ಕಾಂಗ್ರೆಸ್​ ಕಾರ್ಯಕರ್ತೆ ಹತ್ಯೆ ಪ್ರಕರಣ ; ಓರ್ವ ಆರೋಪಿಯ ಬಂಧನ

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಹರಿಯಾಣ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮಾರ್ಚ್ 1 ರಂದು ರೋಹ್ಟಕ್‌ನ ಹೆದ್ದಾರಿಯ ಬಳಿ ಸೂಟ್‌ಕೇಸ್‌ನಲ್ಲಿ ಹಿಮಾನಿ ನರ್ವಾಲ್ ಅವರ ಮೃತದೇಹ ಪತ್ತೆಯಾಗಿತ್ತು.

ಕಾಂಗ್ರೆಸ್​ ಕಾರ್ಯಕರ್ತೆ ಹತ್ಯೆ ಪ್ರಕರಣ; ಒಬ್ಬ ಆರೋಪಿ ಪೊಲೀಸ್‌ ಬಲೆಗೆ

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್

Profile Vishakha Bhat Mar 3, 2025 10:16 AM

ಚಂಡೀಗಢ: ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಹರಿಯಾಣ (Haryana Horror) ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮಾರ್ಚ್ 1 ರಂದು ರೋಹ್ಟಕ್‌ನ ಹೆದ್ದಾರಿಯ ಬಳಿ ಸೂಟ್‌ಕೇಸ್‌ನಲ್ಲಿ ಹಿಮಾನಿ ನರ್ವಾಲ್ ಅವರ ಮೃತದೇಹ ಪತ್ತೆಯಾಗಿತ್ತು. ಹತ್ಯೆಯ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (ಎಸ್‌ಐಟಿ) ರಚಿಸಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಕೊಲೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ವಿಭಾಗದ ತಂಡವು ಭಾನುವಾರ ತಡರಾತ್ರಿ ದೆಹಲಿಯಿಂದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ , ವಿಚಾರಣೆಗಾಗಿ ರೋಹ್ಟಕ್‌ಗೆ ಕರೆತಂದಿತ್ತು.

ನಂತರ ಇಬ್ಬರ ವಿಚಾರಣೆಯನ್ನು ನಡೆಸಿ, ಓರ್ವನನ್ನು ಬಂಧಿಸಿದ್ದರು. ನಾವು ಕೆಲವು ಗಂಟೆಗಳಲ್ಲಿ ವಿವರಗಳನ್ನು ಬಹಿರಂಗಪಡಿಸುತ್ತೇವೆ. ಅಪರಾಧದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ನಾವು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯು ಕೊಲೆಯಾದ ಮಹಿಳೆಗೆ ಪರಿಚಿತ ಎಂಬುದು ತಿಳಿದು ಬಂದಿದೆ. ಎಂದು ತನಿಖಾಧಿಕಾರಿಗಳಲ್ಲಿ ಒಬ್ಬರು ತಿಳಿಸಿದ್ದಾರೆ.

ರೋಹ್ಟಕ್‌ನ ವೈಶ್ ಕಾನೂನು ಕಾಲೇಜಿನಲ್ಲಿ ಕೋರ್ಸ್ ಕಲಿಯುತ್ತಿದ್ದ ಹಿಮಾನಿ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯ ಹರಿಯಾಣ ಪಾದಯಾತ್ರೆಯಲ್ಲಿ ಅವರೊಂದಿಗೂ ಭಾಗವಹಿಸಿದ್ದರು. ರೋಹ್ಟಕ್‌ನ ಪಂಡಿತ್ ಭಾಗವತ್ ದಯಾಳ್ ಶರ್ಮಾ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆ (ಪಿಜಿಐಎಂಎಸ್)ಯ ವೈದ್ಯರ ಮಂಡಳಿಯು ಮರಣೋತ್ತರ ಪರೀಕ್ಷೆಯನ್ನು ನಡೆಸಿತು.ಭಾನುವಾರ, ಆಕೆಯ ತಾಯಿ ಸವಿತಾ ರಾಣಿ ಕೂಡ ತನ್ನ ಮಗಳ ಕೊಲೆಗಾರರನ್ನು ಬಂಧಿಸುವವರೆಗೆ ಆಕೆಯ ಶವವನ್ನು ಅಂತ್ಯಕ್ರಿಯೆ ಮಾಡಲು ನಿರಾಕರಿಸಿದ್ದರು.

ಈ ಸುದ್ದಿಯನ್ನೂ ಓದಿ: Haryana Horror: ಹರ್ಯಾಣ ಕಾಂಗ್ರೆಸ್‌ ಕಾರ್ಯಕರ್ತೆ ಕೊಲೆ ಕೇಸ್‌ಗೆ ಬಿಗ್‌ ಟ್ವಿಸ್ಟ್‌! ಪಕ್ಷದವರ ಕೈವಾಡ? ಮೃತಳ ತಾಯಿ ಹೇಳಿದ್ದೇನು?

ಹಿಮಾನಿಯ ತಾಯಿ ಸವಿತಾ ಮಾತನಾಡಿ, ತಮ್ಮ ಮಗಳ ಸಾವಿಗೆ ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿದ್ದಾರೆ. ಪಕ್ಷದ ಅನೇಕ ಜನರು ಅವರ ಏರುತ್ತಿರುವ ರಾಜಕೀಯ ಜೀವನ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಿರಿಯ ನಾಯಕರೊಂದಿಗಿನ ಸಾಮೀಪ್ಯದಿಂದ ಬೆದರಿಕೆಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ. ನನ್ನ ಮಗಳು ಪಕ್ಷಕ್ಕಾಗಿ ಬಹಳಷ್ಟು ತ್ಯಾಗ ಮಾಡಿದ್ದಳು ಮತ್ತು ಪಕ್ಷದ ಸದಸ್ಯರು ನಮ್ಮ ಮನೆಗೆ ಭೇಟಿ ನೀಡುತ್ತಿದ್ದರು. ಅವಳ ಬೆಳವಣಿಗೆ ನೋಡಲು ಸಾಧ್ಯವಾಗದೆ ಇರುವವರು ಈ ರೀತಿ ಮಡಿದ್ದಾರೆ ಎಂದು ಅವರು ಆರೋಪಿಸಿದ್ದರು.