Book Release: ಬೆಂಗಳೂರಿನಲ್ಲಿ ಫೆ.13 ರಂದು ʼಏರುಘಟ್ಟದ ನಡಿಗೆʼ ಕೃತಿ ಲೋಕಾರ್ಪಣೆ
Book Release: ಪ್ರೊ. ಮಾಧವ ಗಾಡ್ಗೀಳ್ ಅವರ ಆತ್ಮಕತೆ ʼA Walk up the Hill’ ನ ಕನ್ನಡ ಆವೃತ್ತಿ ʼಏರುಘಟ್ಟದ ನಡಿಗೆʼ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ ಫೆ.13 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಜರುಗಲಿದೆ. ಈ ಕುರಿತ ವಿವರ ಇಲ್ಲಿದೆ.
![ಬೆಂಗಳೂರಿನಲ್ಲಿ ʼಏರುಘಟ್ಟದ ನಡಿಗೆʼ ಕೃತಿ ಲೋಕಾರ್ಪಣೆ ನಾಳೆ](https://cdn-vishwavani-prod.hindverse.com/media/original_images/Book_Release.jpg)
ಫೆ.13 ರಂದು ʼಏರುಘಟ್ಟದ ನಡಿಗೆʼ ಕೃತಿ ಲೋಕಾರ್ಪಣೆ
![Profile](https://vishwavani.news/static/img/user.png)
ಬೆಂಗಳೂರು: ಪ್ರೊ. ಮಾಧವ ಗಾಡ್ಗೀಳ್ ಅವರ ಆತ್ಮಕತೆ ʼA Walk up the Hill’ ನ ಕನ್ನಡ ಆವೃತ್ತಿ ʼಏರುಘಟ್ಟದ ನಡಿಗೆʼ ಕೃತಿಯ ಲೋಕಾರ್ಪಣೆ (Book Release) ಕಾರ್ಯಕ್ರಮ ಫೆ.13 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಜರುಗಲಿದೆ. ಆಕೃತಿ ಆಶಯ ಪಬ್ಲಿಕೇಶನ್ಸ್, ಮಂಗಳೂರು ವತಿಯಿಂದ ಬೆಂಗಳೂರಿನ ರಾಜಾಜಿನಗರ ಪೇರೆಂಟ್ಸ್ ಅಸೋಸಿಯೇಷನ್ ಕಾಲೇಜು, ಪರಿಸರ ಸಂಗಮ, ಭೂಮಿ ಬುಕ್ಸ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಕೃತಿ ಬಿಡುಗಡೆಗೊಳಿಸುವರು. ಶಿಕ್ಷಣ ತಜ್ಞ, ಚಿಂತಕ ಪ್ರೊ.ಕೆ.ಈ. ರಾಧಾಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಸುದ್ದಿಯನ್ನೂ ಓದಿ | Rubber Board Recruitment 2025: ರಬ್ಬರ್ ಬೋರ್ಡ್‌ನಲ್ಲಿದೆ ಉದ್ಯೋಗಾವಕಾಶ; ಪದವಿ ವಿದ್ಯಾರ್ಹತೆ ಹೊಂದಿದವರು ಅಪ್ಲೈ ಮಾಡಿ
ನಿವೃತ್ತ ಪ್ರಧ್ಯಾಪಕ ಡಾ.ನರೇಂದ್ರ ರೈ ದೇರ್ಲ ಅವರು ಆತ್ಮಕತೆಯ ಅವಲೋಕನ ಮಾಡುವರು. ಮಾಜಿ ಸೈನಿಕ, ಚಿಂತಕ ಕ್ಯಾಪ್ಟನ್ ಜಿ.ಆರ್. ಗೋಪಿನಾಥ್, ಹಿರಿಯ ವಿಜ್ಞಾನ ಲೇಖಕ ಪ್ರೊ. ನಾಗೇಶ ಹೆಗಡೆ, ಪರಿಸರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಅಲ್ಕಿತ್ರಾ ಪಟೇಲ್, ನಟರಾಜ್ ಸಾಗರನಹಳ್ಳಿ ಹಾಗೂ ಪ್ರಕಾಶಕ ಕಲ್ಲೂರು ನಾಗೇಶ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.