ಕರ್ನಾಟಕ ಬಜೆಟ್​ ವಿದೇಶ ಪುನೀತ್​ @ 50 ಫ್ಯಾಷನ್​ ಧಾರ್ಮಿಕ ಕ್ರೈಂ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

ಏಪ್ರಿಲ್ 1 ರಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ.ಶ್ರೀ.ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸ ಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸ ಬಹುದು.ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡ ಬೇಕು

ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವ

ಡಾ.ಶ್ರೀ ಶಿವಕುಮಾರ ಸ್ವಾಮೀಜಿ

Profile Ashok Nayak Mar 17, 2025 8:34 PM

ಬೆಂಗಳೂರು: ಶಿವಕುಮಾರ ಮಹಾ ಸ್ವಾಮಿಗಳವರ 118ನೇ ಹುಟ್ಟುಹಬ್ಬದಂದು ಶ್ರೀ ಸಿದ್ದಗಂಗಾ ಮಠದಲ್ಲಿ 118 ಮಕ್ಕಳಿಗೆ ನಾಮಕರಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ಶ್ರೀ ಶಿವಕುಮಾರ ಸ್ವಾಮೀಜಿ ದಾಸೋಹ ಟ್ರಸ್ಟ್‌ ತಿಳಿಸಿದೆ. ಏಪ್ರಿಲ್ 1 ರಂದು ಬೆಳ್ಳಿಗ್ಗೆ 7.30 ರಿಂದ 9.30 ರ ವರೆಗೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸ ಲಿದ್ದಾರೆ. ನಾಮಕರಣದ ಅರ್ಜಿ ನಾಮಕರಣದ ಅರ್ಜಿಯು, ಸಿದ್ದಗಂಗಾ ಮಠ ಆಡಳಿತಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ನಾಮಕರಣಕ್ಕೆ ಅರ್ಜಿ : 73488 53276 ಸಂಖ್ಯೆಯನ್ನು ಸಂಪರ್ಕಿಸ ಬಹುದು.ಇನ್ನು ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತು ಮಾಡಬೇಕು.

ಇದನ್ನೂ ಓದಿ: Bangalore Accident: ಬಿಎಂಟಿಸಿ ಬಸ್‌ಗಳ ನಡುವೆ ಸಿಲುಕಿ ಆಟೋ ಅಪ್ಪಚ್ಚಿಯಾದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನಾಮಕರಣಗೊಳ್ಳುವ ಮಗುವಿನ ಜನನ ಪ್ರಮಾಣ ಪತ್ರ.ತಂದೆ ಅಥವಾ ತಾಯಿಯ ಆಧಾರ ಕಾರ್ಡ್ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಕೊನೆಯ ಮಾ.31 ಕೊನೆ ದಿನ, ನಾಮಕರಣಗೊಳ್ಳಬಯ ಸುವ ಮಕ್ಕಳ ವಯಸ್ಸು : ನವಜಾತ ಶಿಶುವಿನಿಂದ 1 ವರ್ಷದೊಳಗಿನ ಮಕ್ಕಳು ಮಾತ್ರ. ಗಂಡು ಮಗುವಿಗೆ ಹುಟ್ಟು ಹೆಸರು ಶಿವಕುಮಾರಸ್ವಾಮಿ ಎಂತಲೂ ಹೆಣ್ಣು ಮಕ್ಕಳಿಗೆ ಅಕ್ಷರದಿಂದ ಪ್ರಾರಂ ಭವಾಗುವ ಹುಟ್ಟು ಹೆಸರನ್ನು ನಾಮಾಂಕಿತಗೊಳಿಸಲು ಕೋರಲಾಗಿದೆ.