ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಏ. 4ರಂದು ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಸ್ಮರಣಾರ್ಥ ಪೇಂಟಿಂಗ್ ಪ್ರದರ್ಶನ

ಭಾರತೀಯ ಕಲಾ ಲೋಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಎಂ.ಟಿ.ವಿ. ಆಚಾರ್ಯ ಅವರ ಜೀವನ ಮತ್ತು ಕೃತಿಗಳನ್ನು ಸಂಭ್ರಮಿಸುವ ವಿಶೇಷ ಸ್ಮರಣಾರ್ಥ ಪ್ರದರ್ಶನವನ್ನು ಏ. 4ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಏರ್ಪಡಿಸಲಾಗಿದೆ.

ಏ. 4: ಕಲಾವಿದ ಎಂ.ಟಿ.ವಿ. ಆಚಾರ್ಯರ ಸ್ಮರಣಾರ್ಥ ಪೇಂಟಿಂಗ್ ಪ್ರದರ್ಶನ

Profile Siddalinga Swamy Apr 3, 2025 8:01 PM

ಬೆಂಗಳೂರು: ಭಾರತೀಯ ಕಲಾ ಲೋಕದ ಶ್ರೇಷ್ಠ ಕಲಾವಿದರಲ್ಲಿ ಒಬ್ಬರಾಗಿದ್ದ ಎಂ.ಟಿ.ವಿ. ಆಚಾರ್ಯ ಅವರ ಜೀವನ ಮತ್ತು ಕೃತಿಗಳನ್ನು ಸಂಭ್ರಮಿಸುವ ವಿಶೇಷ ಸ್ಮರಣಾರ್ಥ ಪ್ರದರ್ಶನವನ್ನು ಏ. 4ರಂದು ಬೆಳಗ್ಗೆ 10:30ರಿಂದ ಸಂಜೆ 7 ಗಂಟೆಯವರೆಗೆ ಬೆಂಗಳೂರು ನಗರದ ಬಸವನಗುಡಿಯ ವಾಡಿಯಾ ರಸ್ತೆಯಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ಏರ್ಪಡಿಸಲಾಗಿದೆ. ʼಎಂ.ಟಿ.ವಿ. ಆಚಾರ್ಯರ ಜೀವನ ಮತ್ತು ಕಲಾ ಪಯಣʼ ಎಂಬ ವಿಷಯದ ಕುರಿತು ವಿಶೇಷ ದೃಶ್ಯಾವಳಿಯೊಂದಿಗೆ ಉಪನ್ಯಾಸ ಕೂಡ ನಡೆಯಲಿದ್ದು, ಇದು ಪ್ರಮುಖ ಆಕರ್ಷಣೆಯಾಗಿರಲಿದೆ.

ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್, ಹಿರಿಯ ಕಲಾವಿದ ಚಂದ್ರನಾಥ ಆಚಾರ್ಯ, ಚಿ.ಸು. ಕೃಷ್ಣ ಶೆಟ್ಟಿ ಹಾಗೂ ವಿಶೇಷ ಅತಿಥಿಯಾಗಿ ಗರುಡ ಫೌಂಡೇಶನ್ ಅಧ್ಯಕ್ಷೆ ಮೆದಿನಿ ಗರುಡಾಚಾರ್ ಅವರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮದಲ್ಲಿ ಕಲಾವಿದ ಮತ್ತು ಲೇಖಕ ಎಲ್. ಶಿವಲಿಂಗಪ್ಪ, ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಪಿ. ಶೇಷಾದ್ರಿ, ರಾಮ್ಸನ್ಸ್ ಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಆರ್.ಜಿ. ಸಿಂಗ್ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಶಿವಾನಂದ ಬಸವಂತಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | BESCOM: ಗ್ರಾಹಕರ ವಿದ್ಯುತ್‌ ಸಂಬಂಧಿತ ದೂರುಗಳಿಗೆ 8 ಜಿಲ್ಲೆಗೆ ವಾಟ್ಸಾಪ್ ಸಂಖ್ಯೆ ನೀಡಿದ ಬೆಸ್ಕಾಂ