ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

'ಅವನೇ ನನ್ನ ಗಂಡನಾಗುತ್ತಾನೆ'; ಚಹಲ್ ಜತೆಗಿನ ಪ್ರೀತಿ ಒಪ್ಪಿಕೊಂಡ ಮಹ್ವಾಶ್!

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಮಹ್ವಾಶ್, ನನ್ನ ಬದುಕಿನಲ್ಲಿ ಒಬ್ಬ ಹುಡುಗನಿಗೆ ಮಾತ್ರ ಜಾಗ. ಅವನೇ ನನ್ನ ಸ್ನೇಹಿತ, ಬೆಸ್ಟ್‌ ಫ್ರೆಂಡ್‌, ಬಾಯ್‌ ಫ್ರೆಂಡ್‌ ಮತ್ತು ಪತಿ' ಎಂದು ಹೇಳಿಕೊಂಡಿದ್ದಾರೆ. ಇದು ಚಹಲ್‌ ಜತೆಗಿನ ನಂಟಿನ ವದಂತಿಗಳಿಗೆ ತುಪ್ಪ ಸುರಿದಂತಾಗಿದೆ. ಇದಕ್ಕೆ ಸರಿಯಾಗಿ ಚಹಲ್‌ ಕೂಡ ಈ ಪೋಸ್ಟ್‌ಗೆ ಲೈಕ್‌ ಮಾಡಿದ್ದಾರೆ.

'ಅವನೇ ನನ್ನ ಗಂಡನಾಗುತ್ತಾನೆ'; ಚಹಲ್ ಜತೆಗಿನ ಪ್ರೀತಿ ಒಪ್ಪಿಕೊಂಡ ಮಹ್ವಾಶ್!

Profile Abhilash BC Apr 4, 2025 1:00 PM

ಮುಂಬಯಿ: ಇತ್ತೀಚೆಗೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಇನ್‌ಸ್ಟಾಗ್ರಾಮ್ ಸೆಲೆಬ್ರಿಟಿ, ಆರ್‌ಜೆ ಮಹ್ವಾಶ್(RJ Mahvash) ಅವರೊಂದಿಗೆ ಚಾಹಲ್(Yuzvendra Chahal) ಕಾಣಿಸಿಕೊಂಡಾಗಿನಿಂದ, ಇಬ್ಬರ ಬಗ್ಗೆ ಸಾಕಷ್ಟು ಊಹಾಪೋಹಗಳು ಕೇಳಿಬರುತ್ತಿವೆ. ಇದೀಗ ಮಹ್ವಾಶ್ ಮಾಡಿಡುವ ಒಂದು ವಿಡಿಯೊ ಇವರಿಬ್ಬರು ಪ್ರೀತಿಯಲ್ಲಿರುವು ಖಚಿತ ಎನ್ನುವಂತಿದೆ. ಕಳೆದ ತಿಂಗಳು ಚಹಲ್‌ ತಮ್ಮ ಪತ್ನಿ ಧನಶ್ರೀ ವರ್ಮಾಗೆ ವಿಚ್ಛೇದನ ನೀಡಿದ್ದರು.

ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿರುವ ಮಹ್ವಾಶ್, ನನ್ನ ಬದುಕಿನಲ್ಲಿ ಒಬ್ಬ ಹುಡುಗನಿಗೆ ಮಾತ್ರ ಜಾಗ. ಅವನೇ ನನ್ನ ಸ್ನೇಹಿತ, ಬೆಸ್ಟ್‌ ಫ್ರೆಂಡ್‌, ಬಾಯ್‌ ಫ್ರೆಂಡ್‌ ಮತ್ತು ಪತಿ' ಎಂದು ಹೇಳಿಕೊಂಡಿದ್ದಾರೆ. ಇದು ಚಹಲ್‌ ಜತೆಗಿನ ನಂಟಿನ ವದಂತಿಗಳಿಗೆ ತುಪ್ಪ ಸುರಿದಂತಾಗಿದೆ. ಇದಕ್ಕೆ ಸರಿಯಾಗಿ ಚಹಲ್‌ ಕೂಡ ಈ ಪೋಸ್ಟ್‌ಗೆ ಲೈಕ್‌ ಮಾಡಿದ್ದಾರೆ. ಹೀಗಾಗಿ ಈ ಜೋಡಿ ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ವಿಚ್ಛೇದನ ಒಪ್ಪಂದಂತೆ ಚಹಲ್‌ ಅವರು ಧನಶ್ರೀಗೆ 4.75 ಕೋಟಿ ಜೀವನಾಂಶ ನೀಡಬೇಕು ಎಂದಾಗಲೂ ಪರೋಕ್ಷವಾಗಿ ಚಹಲ್‌ಗೆ ಮಹ್ವಾಶ್ ಬೆಂಬಲ ಸೂಚಿಸಿದ್ದರು. 'ಜೂಟ್, ಲಾಲಾಚ್, ಔರ್ ಫರೇಬ್ ಸೆ ಪರೇ ಹೈಂ.. ಖುದಾ ಕ ಶುಕ್ರ್ ಐನೆ ಆಜ್ ಬಿ ಖಾಡೆ ಹೈಂ.. (ಸುಳ್ಳು, ದುರಾಸೆ ಮತ್ತು ವಂಚನೆಯಿಂದ ದೂರ... ದೇವರಿಗೆ ಧನ್ಯವಾದಗಳು, ನಾವು ಇಂದಿಗೂ ಕನ್ನಡಿಯಲ್ಲಿ ನಮ್ಮ ಮುಖ ನೋಡುತ್ತಾ ನಿಂತಿದ್ದೇವೆ.)' ಎಂದು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಇದಕ್ಕೆ ಚಾಹಲ್ ಲೈಕ್ ಜತೆಗೆ ಲವ್ ಎಮೋಜಿಯನ್ನು ಕೂಡ ಹಾಕಿದ್ದರು.

ಇದನ್ನೂ ಓದಿ ಧನಶ್ರೀ ವರ್ಮಾಗೆ 4.75 ಕೋಟಿ ರೂ. ಜೀವನಾಂಶ ನೀಡಲು ಯುಜ್ವೇಂದ್ರ ಚಹಲ್‌ ಒಪ್ಪಿಗೆ!

ಆರ್‌ಜೆ ಮಹ್ವಾಶ್ ದೆಹಲಿಯ ರೇಡಿಯೋ ಜಾಕಿ. ರೇಡಿಯೋ ಜಾಕಿಯಾಗಿರುವುದರ ಜೊತೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಕಂಟೆಂಟ್‌ ಕ್ರಿಯೇಟರ್‌ ಆಗಿದ್ದಾರೆ. ಅವರು ತಮ್ಮ ಉತ್ತಮ ಧ್ವನಿ ಮತ್ತು ಮನರಂಜನಾ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಹಿಂಬಾಲಕರನ್ನು ಹೊಂದಿದ್ದಾರೆ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ 1.4 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಅನ್ನು ಹೊಂದಿದ್ದಾರೆ. ಮಹ್ವಾಶ್‌ಗೆ ಬಿಗ್ ಬಾಸ್ ಮತ್ತು ನೆಟ್‌ಫ್ಲಿಕ್ಸ್ ಸರಣಿಯಲ್ಲಿ ಕೆಲಸ ಮಾಡುವ ಆಫರ್ ಸಿಕ್ಕಿತು ಎಂದು ಹೇಳಲಾಗಿತ್ತು. ಆದರೆ ಕೆಲವು ಕಾರಣಗಳಿಂದ ಅವರು ಕೆಲಸ ಮಾಡಲು ಸಾಧ್ಯವಾಗಲಿಲ್ಲ.