Viral Video: ಕೋರ್ಟ್ ಹೊರಗೆ ವಕೀಲನಿಗೆ ಹಿಗ್ಗಾಮುಗ್ಗಾ ಥಳಿಸಿದ ಮಹಿಳೆಯರು; ಕಾರಣವೇನು? ಈ ವಿಡಿಯೊ ನೋಡಿ
ಮಹಿಳೆಯೊಬ್ಬಳನ್ನು ಮೌಖಿಕವಾಗಿ ನಿಂದಿಸಿದ್ದಕ್ಕೆ ಬಸ್ತಿ ಸಿವಿಲ್ ಕೋರ್ಟ್‍ನ ಗೇಟ್ ನಂ.3ರಲ್ಲಿ ವಕೀಲನೊಬ್ಬನ ಮೇಲೆ ಇಬ್ಬರು ಮಹಿಳೆಯರು ಸೇರಿ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ(ಏಪ್ರಿಲ್ 3) ನಡೆದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ.


ಲಖನೌ: ಕೋರ್ಟ್ ಆವರಣದಲ್ಲಿ ವಕೀಲರ ಮೇಲೆ ಹಾಗೂ ಆರೋಪಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವರದಿಯಾಗುತ್ತಿರುತ್ತದೆ. ಇದೀಗ ಬಸ್ತಿ ಸಿವಿಲ್ ಕೋರ್ಟ್‍ನ ಗೇಟ್ ನಂ.3ರಲ್ಲಿ ವಕೀಲನೊಬ್ಬನ ಮೇಲೆ ಇಬ್ಬರು ಮಹಿಳೆಯರು ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಘಟನೆ ಗುರುವಾರ(ಏಪ್ರಿಲ್ 3) ನಡೆದಿದೆ. ಈ ಹಿಂಸಾತ್ಮಕ ದಾಳಿಯನ್ನು ರೆಕಾರ್ಡ್ ಮಾಡಲಾಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಮಹಿಳೆಯರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಸ್ತಿ ಪೊಲೀಸರು ತಿಳಿಸಿದ್ದಾರೆ.
ವರದಿ ಪ್ರಕಾರ, ವಕೀಲ ಮಹಿಳೆಯರಲ್ಲಿ ಒಬ್ಬಳಿಗೆ ಫೋನ್ ಕರೆ ಮಾಡಿ ಮೌಖಿಕವಾಗಿ ನಿಂದಿಸಿದ್ದಾನಂತೆ. ಇದರಿಂದ ಕೋಪಗೊಂಡ ಮಹಿಳೆ ನ್ಯಾಯಾಲಯದ ಪ್ರವೇಶದ್ವಾರದಲ್ಲಿ ವಕೀಲನನ್ನು ತಡೆದು ವಾಗ್ವಾದ ನಡೆಸಿದ್ದಾಳೆ. ನಂತರ ಮತ್ತೊಬ್ಬ ಮಹಿಳೆ ಘಟನಾ ಸ್ಥಳಕ್ಕೆ ಬಂದಾಗ ವಾಗ್ವಾದವು ಜೋರಾಗಿ ಇಬ್ಬರು ಸೇರಿ ವಕೀಲನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.
ಮಹಿಳೆಯರು ವಕೀಲನ ಮೇಲೆ ಹಲ್ಲೆ ಮಾಡಿದ ವಿಡಿಯೊ ಇಲ್ಲಿದೆ ನೋಡಿ..
📍 बस्ती: अधिवक्ता को देर रात महिला को फोन करना पड़ा भारी 📞
— भारत समाचार | Bharat Samachar (@bstvlive) April 3, 2025
💥 सिविल बार पहुंचकर दोनों महिलाओं ने जमकर पीटा
🎭 हाई वोल्टेज ड्रामा देख बीच बराव कराने पहुंचे अधिवक्ता
👩⚖️ हमलावर महिलाओं द्वारा वकील को दी गई गालियां
📍 एसपी ऑफिस के पास सिविल बार का पूरा मामला#Basti… pic.twitter.com/K8BxdmCtsQ
ಇಬ್ಬರು ಮಹಿಳೆಯರು ವಕೀಲರ ಮೇಲೆ ಆಕ್ರಮಣಕಾರಿಯಾಗಿ ಹಲ್ಲೆ ನಡೆಸಿದಾಗ ನ್ಯಾಯಾಲಯದಲ್ಲಿ ಹಾಜರಿದ್ದ ಇತರ ವಕೀಲರು ಸಹ ಮಧ್ಯಪ್ರವೇಶಿಸಿ ಹಿಂಸಾಚಾರವನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆದರೆ ಮಹಿಳೆಯರು ಹೆಚ್ಚು ಆಕ್ರೋಶಗೊಂಡು ತಮ್ಮ ದಾಳಿಯನ್ನು ಮುಂದುವರಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ದಾಳಿಗೊಳಗಾದ ವಕೀಲ ಇಬ್ಬರು ಮಹಿಳೆಯರ ವಿರುದ್ಧ ಕಾನೂನು ದೂರು ದಾಖಲಿಸಿದ್ದಾನೆ ಮತ್ತು ಬಾರ್ ಅಸೋಸಿಯೇಷನ್ ಅಧಿಕಾರಿಗಳಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾನೆ. ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಂಬಂಧಪಟ್ಟ ತಂಡಕ್ಕೆ ಕಳುಹಿಸಲಾಗಿದೆ ಮತ್ತು ಹಲ್ಲೆಕೋರ ಮಹಿಳೆಯರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಬಸ್ತಿ ಪೊಲೀಸರು ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ಕೋರ್ಟ್ ಹೊರಗಡೆ ವಕೀಲರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನ್ಯಾಯಾಲಯದ ಸಂಕೀರ್ಣದ ಹೊರಗೆ 30 ವರ್ಷದ ವಕೀಲರೊಬ್ಬರ ಮೇಲೆ ವ್ಯಕ್ತಿಯೊಬ್ಬ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನಿಂದ ಆಗ್ನೇಯಕ್ಕೆ 40 ಕಿ.ಮೀ ದೂರದಲ್ಲಿರುವ ಹೊಸೂರು ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಸುದ್ದಿಯನ್ನೂ ಓದಿ:Viral News: ರೈಲಿನಿಂದ ನೀರಿನ ಬಾಟಲಿ ಎಸೆದ ಪ್ರಯಾಣಿಕ; ಪುಟ್ಟ ಬಾಲಕನ ಪ್ರಾಣಕ್ಕೆ ಸಂಚಕಾರ- ಅಷ್ಟಕ್ಕೂ ನಡೆದಿದ್ದೇನು?
ಹಲ್ಲೆಗೊಳಗಾದ ವಕೀಲ ಕಣ್ಣನ್ ಎಂದು ಗುರುತಿಸಲಾಗಿದ್ದು, ಆತ ಹಿರಿಯ ವಕೀಲರೊಬ್ಬರ ಬಳಿ ಕೆಲಸ ಮಾಡುತ್ತಿದ್ದು, ಪ್ರಕರಣವೊಂದರಲ್ಲಿ ಹಾಜರಾದ ನಂತರ ನ್ಯಾಯಾಲಯದಿಂದ ಹೊರಬರುವಾಗ ಆನಂದನ್ ಎಂಬ ವ್ಯಕ್ತಿ , ಆತನನ್ನು ತಡೆದು, ಕುಡಗೋಲಿನಿಂದ ಕಣ್ಣನ್ ಮೇಲೆ ಹಲ್ಲೆ ಮಾಡಿದ್ದಾನೆ. ಕಣ್ಣನ್ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದ ನಂತರವೂ ದಾಳಿಕೋರನು ಕಣ್ಣನ್ ತಲೆಗೆ ಕುಡಗೋಲಿನಿಂದ ಪದೇ ಪದೆ ಹೊಡೆದಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಕಣ್ಣನ್ ಅವನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಇತ್ತ ಆರೋಪಿ ದಾಳಿಯ ಸ್ಥಳದಿಂದ ಓಡಿಹೋಗಿ ನಂತರ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶರಣಾಗಿದ್ದನಂತೆ.