ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mahanati Auditions: ನಟಿಯಾಗುವ ನಿಮ್ಮ ಕನಸನ್ನು ನನಸಾಗಿಸಲು ಬರ್ತಿದೆ ಮಹಾನಟಿ-2; ನಾಳೆಯಿಂದ ಆಡಿಷನ್ಸ್ ಶುರು

ನಟಿಯಾಗಬೇಕು, ಬೆಳ್ಳಿ ಪರದೆಯಲ್ಲಿ ಮಿಂಚಬೇಕು ಎಂದು ಎಷ್ಟೋ ಮಂದಿ ಕನಸು ಇಟ್ಟುಕೊಂಡಿರುತ್ತಾರೆ. ಆ ರೀತಿ ಕನಸು ಕಂಡ ಯುವತಿಯರಿಗೆ ಇದು ಬಹುದೊಡ್ಡ ವೇದಿಕೆಯಾಗಿದೆ. ಹಾಗಾಗಿ ತಮ್ಮ ನಟನಾ ಕಲೆಯನ್ನು ವ್ಯಕ್ತ ಪಡಿಸಲು ಇದು ಮಹತ್ವದ ಅವಕಾಶವಾಗಿದ್ದು ಝೀ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 ಗೆ ಸಿದ್ಧತೆ ನಡೆಸಿದ್ದು, ರಾಜ್ಯದ ವಿವಿಧ ಕಡೆಗಳಲ್ಲಿ ಆಡಿಷನ್ ನಡೆಯಲಿದೆ.

ಮಹಾನಟಿ ಸೀಸನ್‌ 2 ಏಪ್ರಿಲ್‌ 5ರಿಂದ ಈ ಜಿಲ್ಲೆಗಳಲ್ಲಿ ಆಡಿಷನ್‌ ಆರಂಭ!

Profile Pushpa Kumari Apr 4, 2025 11:17 AM

ಬೆಂಗಳೂರು: ಪ್ರಸಿದ್ಧ ಧಾರಾವಾಹಿಗಳು, ಸೂಪರ್ ಹಿಟ್ ವರ್ಲ್ಡ್ ಟೆಲಿ ವಿಷನ್ ಪ್ರೀಮಿಯರ್ ಗಳು ಮತ್ತು ಮನರಂಜಿಸುವ ರಿಯಾಲಿಟಿ ಶೋ ಗಳ ಮೂಲಕ ಕನ್ನಡಿಗರ ಮನಗೆದ್ದು ನಂಬರ್ 1 ಸ್ಥಾನವನ್ನು ಸ್ಥಾನದಲ್ಲಿರುವ ಝೀ ಕನ್ನಡ (Zee Kannada) ಈಗ ಮತ್ತೊಂದು ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಜನಪ್ರಿಯ ರಿಯಾಲಿಟಿ ಶೋಗಳಾದ ಡ್ರಾಮಾ ಜೂನಿಯರ್ಸ್‌ ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್, ಸರಿ ಗಮಪ, ಮಹಾ ನಟಿ ಸೀಸನ್-1 ಮೂಲಕ ಈಗಾಗಲೆ ಸಾಕಷ್ಟು ನಟನಟಿ ಯರು ,ಗಾಯಕ ಗಾಯಕಿಯರು ಹಾಗು ಕೊರಿಯೋಗ್ರಾಫರ್‌ ಗಳನ್ನು ನೀಡಿರುವ ಝೀ ಕನ್ನಡ ವಾಹಿನಿ ಇದೀಗ ಮಹಾನಟಿ ಸೀಸನ್-2 (Mahanati Season 2 Auditions) ಗೆ ಸಿದ್ಧತೆ ನಡೆಸಿದ್ದು, ರಾಜ್ಯದ ವಿವಿಧ ಕಡೆಗಳಲ್ಲಿ ಆಡಿಷನ್ ನಡೆಯಲಿದೆ.

ನಟಿಯಾಗಬೇಕು, ಬೆಳ್ಳಿ ಪರದೆಯಲ್ಲಿ ಮಿಂಚಬೇಕು ಎಂದು ಎಷ್ಟೋ ಮಂದಿ ಕನಸು ಇಟ್ಟುಕೊಂಡಿರುತ್ತಾರೆ. ಆ ರೀತಿ ಕನಸು ಕಂಡ ಯುವತಿಯರಿಗೆ ಇದು ಬಹುದೊಡ್ಡ ವೇದಿಕೆಯಾಗಿದೆ. ಹಾಗಾಗಿ ತಮ್ಮ ನಟನಾ ಕಲೆಯನ್ನು ವ್ಯಕ್ತ ಪಡಿಸಲು ಇದು ಮಹತ್ವದ ಅವಕಾಶ ವಾಗಿದ್ದು 18ರಿಂದ 28 ವರ್ಷದ ಯುವತಿಯರಿಗೆ ಮಾತ್ರ ಸೀಸನ್ 2 ಆಡಿಷ್ಸನ್ ನಲ್ಲಿ ಭಾಗವಹಿಸಲು ಅವಕಾಶ ಇದೆ.

ಈಗಾಗಗಲೇ ಸೀಸನ್ 1 ರಲ್ಲಿ ಜಡ್ಜ್ ಆಗಿದ್ದ ತರುಣ್ ಸುಧೀರ್ ಹಾಗೂ ಮಹಾನಟಿ ಪ್ರೇಮ ಅವರ ನಟನೆಯ ಪಾಠಗಳು ,ಮನೋಜ್ಞ ನಟಿ ನಿಶ್ವಿಕ ಅವರ ಸ್ಫೂರ್ತಿ ಮಾತುಗಳು ,ಮಾಸ್ಟರ್ ಮೈಂಡ್ ಎಂದೇ ಖ್ಯಾತರಾದ ಶ್ರೀ ರಮೇಶ್ ಅರವಿಂದ್ ಅವರು ಮಾಸ್ಟರ್ ಕ್ಲಾಸ್ ಮೂಲಕ ನಟಿಯರ ಅಭಿನಯಕ್ಕೆ ಮತ್ತಷ್ಟು ಹುರುಪು ನೀಡಿದ್ದಾರೆ. ಇದೀಗ ಮಹಾನಟಿ ಸೀಸ ನ್-2 ಆಡಿಷನ್ 16 ಜಿಲ್ಲೆಗಳಲ್ಲಿ ನಡೆಯಲಿದ್ದು 18 ರಿಂದ 28 ವರ್ಷದ ಒಳಗಿನ ಕಲಾಸಕ್ತ ಯುವತಿಯರು ಈ ಆಡಿಷನ್ ನಲ್ಲಿ ಭಾಗವಹಿಸಬಹು ದಾಗಿದೆ. ಹಾಗೆಯೇ ಆಡಿಷನ್ ನಲ್ಲಿ ಭಾಗವಹಿಸಲು ಬರುವಾಗ ನಿಮ್ಮ ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಅಡ್ರೆಸ್ ಪ್ರೂಫ್ ತರುವುದು ಕಡ್ಡಾಯ ವಾಗಿದೆ.

ಇದನ್ನು ಓದಿ: Zee Kannada Mahasanchike: ಝೀ ಕನ್ನಡದಲ್ಲಿ ವಾರವಿಡೀ ನಿಮ್ಮ ನೆಚ್ಚಿನ ಧಾರಾವಾಹಿಯ ಮಹಾಸಂಚಿಕೆಯ ಮೆರವಣಿಗೆ

ಆಡಿಷನ್ ನಡೆಯುವ ಸ್ಥಳಗಳು:

ಏಪ್ರಿಲ್ 5 ಶನಿವಾರ ಮೈಸೂರು ಮತ್ತು ಬೆಳಗಾವಿ , ಏಪ್ರಿಲ್ 6 ಭಾನು ವಾರ ಬೆಂಗಳೂರು ಮತ್ತು ಹುಬ್ಬಳ್ಳಿ, ಏಪ್ರಿಲ್ 12 ಶನಿವಾರ ಚಿಕ್ಕಮಗ ಳೂರು ಮತ್ತು ಬಿಜಾಪುರ, ಏಪ್ರಿಲ್ 13 ಭಾನುವಾರ ಮಡಿಕೇರಿ ಹಾಗು ಕೊಪ್ಪಳ, ಏಪ್ರಿಲ್ 19 ಶನಿವಾರ ಮಂಗಳೂರು ಮತ್ತು ಶಿರಸಿ, ಏಪ್ರಿಲ್ 20 ಭಾನುವಾರ ಹಾಸನ ಹಾಗು ದಾವಣಗೆರೆ, ಏಪ್ರಿಲ್ 26 ಶನಿವಾರ ತುಮ ಕೂರು ಹಾಗು ಬಳ್ಳಾರಿ, ಏಪ್ರಿಲ್ 27 ಭಾನುವಾರ ಶಿವಮೊಗ್ಗ ಹಾಗು ಚಿತ್ರದುರ್ಗ ದಲ್ಲಿ ಆಡಿಷನ್ ನಡೆಯಲಿದೆ.