ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Rohit Sharma: ಮುಂಬೈ ವಿರುದ್ಧ ಅಸಮಾಧಾನ ಹೊರಹಾಕಿದ ರೋಹಿತ್‌; ವಿಡಿಯೊ ವೈರಲ್‌

IPL 2025: ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ತಂಡದ ನಾಯಕನಾಗಿ ಮಾಡಿದಾಗಲೇ ರೋಹಿತ್‌ ಮುಂಬೈ ತಂಡ ತೊರೆಯಲಿದ್ದಾರೆ ಎನ್ನಲಾಗಿತ್ತು. ಅಲ್ಲದ ಕಳೆದ ಮೆಗಾ ಹರಾಜಿನಲ್ಲಿಯೂ ರೋಹಿತ್‌ ಪಾಲ್ಗೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಮುಂಬೈ ಫ್ರಾಂಚೈಸಿ ಅವರ ಮನವೊಲಿಸಿ ರೀಟೈನ್‌ ಮಾಡಿಕೊಂಡಿತ್ತು

ಮುಂಬೈ ವಿರುದ್ಧ ಅಸಮಾಧಾನ ಹೊರಹಾಕಿದ ರೋಹಿತ್‌; ವಿಡಿಯೊ ವೈರಲ್‌

Profile Abhilash BC Apr 4, 2025 11:52 AM

ಮುಂಬಯಿ: ಸತತ ಬ್ಯಾಟಿಂಗ್‌ ವೈಫಲ್ಯ ಎದುರಿಸುತ್ತಿರುವ ಮುಂಬೈ ಇಂಡಿಯನ್ಸ್‌(mumbai indians) ತಂಡದ ಮಾಜಿ ನಾಯಕ ರೋಹಿತ್‌ ಶರ್ಮ(Rohit Sharma) ಅವರು ಉದ್ದೇಶ ಪೂರ್ವಕವಾಗಿಯೇ ಕಳಪೆ ಪ್ರದರ್ಶನ ನೀಡುತ್ತಿದ್ದಾರಾ? ಎನ್ನುವ ಅನುಮಾನವೊಂದು ಮೂಡಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೋಹಿತ್‌ ಅವರು ಲಕ್ನೋ ತಂಡದ ಬೌಲಿಂಗ್‌ ಕೋಚ್ ಜಹೀರ್ ಖಾನ್(Zaheer Khan) ಜತೆ ನಡೆಸಿದ ಸಂಭಾಷಣೆಯೊಂದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಇಂದು(ಎ.4) ಮುಂಬೈ ತಂಡ ವಾಖೆಂಡೆಯಲ್ಲಿ ಲಕ್ನೋ ವಿರುದ್ಧ ಪಂದ್ಯವನ್ನಾಡಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಅಭ್ಯಾಸ ನಡೆಸುವ ವೇಳೆ ರೋಹಿತ್‌ ಅವರು ಜಹೀರ್‌ ಖಾನ್‌ ಬಳಿಕ ಕೆಲ ಕಾಲ ಮಾತುಕತೆ ನಡೆಸಿದರು. ಈ ವೇಳೆ ರೋಹಿತ್, 'ನಾನು ಏನು ಮಾಡಬೇಕೋ ಎಲ್ಲವನ್ನೂ ಮಾಡಿದ್ದೇನೆ. ಈಗ ನಾನು ಏನೂ ಮಾಡಲ್ಲ, ಅದರ ಅಗತ್ಯವೂ ನನಗಿಲ್ಲ' ಎಂದರು. ರೋಹಿತ್‌ ಅವರ ಈ ಮಾತು ಕೇಳುವಾಗ ಮುಂಬೈ ತಂಡದ ನಾಯಕತ್ವದಿಂದ ಕೆಳಗಿಳಿಸಿದ ನೋವು ಅವರಲ್ಲಿ ಈಗಲೂ ಇದ್ದ ಹಾಗೆ ಕಾಣುತ್ತಿದೆ. ಇದೇ ಕಾರಣಕ್ಕೆ ಅವರು ತಂಡದ ಪರ ಉತ್ತಮ ಪ್ರದರ್ಶನ ತೋರದಿರಲು ಕಾರಣ ಎನ್ನುವಂತಿದೆ.



ಹಾರ್ದಿಕ್‌ ಪಾಂಡ್ಯ ಅವರನ್ನು ಮುಂಬೈ ತಂಡದ ನಾಯಕನಾಗಿ ಮಾಡಿದಾಗಲೇ ರೋಹಿತ್‌ ಮುಂಬೈ ತಂಡ ತೊರೆಯಲಿದ್ದಾರೆ ಎನ್ನಲಾಗಿತ್ತು. ಅಲ್ಲದ ಕಳೆದ ಮೆಗಾ ಹರಾಜಿನಲ್ಲಿಯೂ ರೋಹಿತ್‌ ಪಾಲ್ಗೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಆದರೆ ಮುಂಬೈ ಫ್ರಾಂಚೈಸಿ ಅವರ ಮನವೊಲಿಸಿ ರೀಟೈನ್‌ ಮಾಡಿಕೊಂಡಿತ್ತು. ಕಳೆದ ಪಂದ್ಯದಲ್ಲಿ ರೋಹಿತ್‌ ಅವರನ್ನು ಇಂಪ್ಯಾಕ್ಟ್‌ ಆಟಗಾರನಾಗಿ ಮುಂಬೈ ಕಣಕ್ಕಿಳಿಸಿತ್ತು.ಈ ಬಗ್ಗೆಯೂ ರೋಹಿತ್‌ಗೆ ಅಸಮಾಧಾನ ಇದೆ ಎನ್ನಲಾಗಿದೆ. ಲಕ್ನೋ ವಿರುದ್ಧದ ಪಂದ್ಯದಲ್ಲಿ ರೋಹಿತ್‌ ಬ್ಯಾಟಿಂಗ್‌ ಪ್ರದರ್ಶನ ಹೇಗಿರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ IPL 2025 Points Table: ಕೊನೆಯ ಸ್ಥಾನದಿಂದ ಭಾರೀ ಜಿಗಿತ ಕಂಡ ಕೆಕೆಆರ್‌

ರೋಹಿತ್‌ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್‌ ಒಟ್ಟು 5 ಬಾರಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. ರೋಹಿತ್‌ ಇದುವರೆಗೆ 260 ಐಪಿಎಲ್‌ ಪಂದ್ಯಗಳನ್ನಾಡಿ 5074 ರನ್‌ ಬಾರಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 43 ಅರ್ಧಶತಕ ಒಳಗೊಂಡಿದೆ. ಬೌಲಿಂಗ್‌ನಲ್ಲಿಯೂ ಮಿಂಚಿರುವ ರೋಹಿತ್‌ ಹ್ಯಾಟ್ರಿಕ್‌ ಸಹಿತ ಒಟ್ಟು 15 ವಿಕೆಟ್‌ ಪಡೆದಿದ್ದಾರೆ.