ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

L2:Empuraan: L2 ಎಂಪೂರಾನ್ ಸಿನಿಮಾ ನಿರ್ಮಾಪಕನ ಕಚೇರಿ ಮೇಲೆ ED ರೇಡ್‌

L2:Empuraan: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಆರೋಪದ ಮೇಲೆ ಎಂಪೂರಾನ್ ನಿರ್ಮಾಪಕರಲ್ಲಿ ಒಬ್ಬರಾದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ದಾಳಿ ನಡೆಸಿದೆ. ಗೋಪಾಲನ್ ಅವರ ಕಂಪನಿ ಶ್ರೀ ಗೋಪಾಲನ್ ಚಿಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ ಕೆಲವು NRIಗಳೊಂದಿಗೆ ₹1,000 ಕೋಟಿ ಮೊತ್ತದ FEMA ಉಲ್ಲಂಘನೆ ಮತ್ತು ಅವರ ವ್ಯವಹಾರಕ್ಕೆ ಸಂಬಂಧಿಸಿದ ಅನಧಿಕೃತ ವಹಿವಾಟುಗಳ ಬಗ್ಗೆ ಇಡಿ ತನಿಖೆ ನಡೆಸಿದೆ.

L2 ಎಂಪೂರಾನ್ ಸಿನಿಮಾ ನಿರ್ಮಾಪಕನ ಕಚೇರಿ ಮೇಲೆ ED ರೇಡ್‌

Profile Rakshita Karkera Apr 4, 2025 12:49 PM

ಚೆನ್ನೈ: ರಿಲೀಸ್‌ ಆದ ದಿನದಿಂದಲೂ ಸದಾ ಒಂದಿಲ್ಲೊಂದು ವಿವಾದದ ಮೂಲಕ ಸುದ್ದಿಯಾಗುತ್ತಿರುವ ಮಲಯಾಳಂನ ಸೂಪರ್‌ ಹಿಟ್‌ ಸಿನಿಮಾ L2:ಎಂಪುರಾನ್‌(L2:Empuraan) ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA)ಉಲ್ಲಂಘನೆ ಆರೋಪದ ಮೇಲೆ ಎಂಪುರಾನ್‌ ನಿರ್ಮಾಪಕರಲ್ಲಿ ಒಬ್ಬರಾದ ಉದ್ಯಮಿ ಗೋಕುಲಂ ಗೋಪಾಲನ್ ಅವರ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ (ED) ಶುಕ್ರವಾರ ದಾಳಿ ನಡೆಸಿದೆ. ಗೋಪಾಲನ್ ಅವರ ಕಂಪನಿ ಶ್ರೀ ಗೋಪಾಲನ್ ಚಿಟ್ ಅಂಡ್ ಫೈನಾನ್ಸ್ ಕಂಪನಿ ಲಿಮಿಟೆಡ್ ಕೆಲವು NRIಗಳೊಂದಿಗೆ ₹1,000 ಕೋಟಿ ಮೊತ್ತದ FEMA ಉಲ್ಲಂಘನೆ ಮತ್ತು ಅವರ ವ್ಯವಹಾರಕ್ಕೆ ಸಂಬಂಧಿಸಿದ ಅನಧಿಕೃತ ವಹಿವಾಟುಗಳ ಬಗ್ಗೆ ಇಡಿ ತನಿಖೆ ನಡೆಸಿದೆ.

ಕೊಚ್ಚಿ ಮತ್ತು ತಮಿಳುನಾಡಿನಲ್ಲಿ ಗೋಪಾಲನ್‌ ಅವರಿಗೆ ಸೇರಿದ ಐದು ವಿಭಿನ್ನ ಕಚೇರಿಗಳ ಮೇಲೆ ಶೋಧ ಕಾರ್ಯ ನಡೆಯುತ್ತಿವೆ. ಹಣ ವರ್ಗಾವಣೆ ತಡೆಗಟ್ಟುವಿಕೆಯ ಕಾನೂನಿನಡಿಯಲ್ಲಿ ED ಪರಿಶೀಲಿಸುತ್ತಿದೆ. ಗೋಪಾಲನ್ ಅವರು ಹಣಕಾಸು, ಶಿಕ್ಷಣ, ಆರೋಗ್ಯ ರಕ್ಷಣೆ, ಮಾಧ್ಯಮ ಮತ್ತು ಇತರ ಕ್ಷೇತ್ರಗಳಲ್ಲಿ ವಿವಿಧ ಘಟಕಗಳನ್ನು ನಿರ್ವಹಿಸುವ ಶ್ರೀ ಗೋಕುಲಂ ಗ್ರೂಪ್ ಆಫ್ ಕಂಪನಿಗಳ ಸ್ಥಾಪಕ ಮತ್ತು ಮಾಲೀಕರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: L2: Empuraan Movie: 'ಎಲ್ 2 ಎಂಪುರಾನ್' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

L2:ಎಂಪುರಾನ್ ವಿವಾದಗಳೇನು?

ಬಹು ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಮಲಯಾಳಂ ಚಿತ್ರ ʼಎಲ್‌ 2: ಎಂಪುರಾನ್‌ʼ (L2 Empuraan) ಸದ್ಯ ಕೇರಳ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದೆ. ಸಿನಿಮಾದಲ್ಲಿ 2002ರಲ್ಲಿ ನಡೆದ ಗುಜರಾತ್‌ ಗಲಭೆಯ ವಿವರಗಳನ್ನು ತಪ್ಪಾಗಿ ನಿರೂಪಿಸಿ ಬಲ ಪಂಥೀಯರ ವಿರುದ್ದ ಜನರನ್ನು ಎತ್ತಿ ಕಟ್ಟಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಆರ್‌ಎಸ್‌ಎಸ್‌, ಸಂಘ ಪರಿವಾರ, ಬಿಜೆಪಿ ನಾಯಕರು ಧ್ವನಿ ಎತ್ತಿದ್ದಾರೆ. ಆ ಮೂಲಕ ದೇಶಾದ್ಯಂತ ಚರ್ಚೆ ಆರಂಭವಾಗಿದೆ. ಜತೆಗೆ ಚಿತ್ರತಂಡ 17 ಕಡೆ ಕತ್ತರಿ ಪ್ರಯೋಗ ಮಾಡಿದೆ.