Pranitha Subhash: ಎರಡು ಮಕ್ಕಳಾದ ನಂತರ ಫ್ಯಾಷನ್ ಶೋಗಳಲ್ಲಿ ಬ್ಯುಸಿಯಾದ ನಟಿ ಪ್ರಣೀತಾ ಸುಭಾಷ್
Star Fashion: ಸ್ಯಾಂಡಲ್‌ವುಡ್ ಮಾತ್ರವಲ್ಲ, ಬಹುಭಾಷೆಗಳಲ್ಲಿ ನಟಿಸಿರುವ ಪ್ರಖ್ಯಾತ ನಟರೊಂದಿಗೆ ನಟಿಸಿರುವ ನಟಿ ಪ್ರಣೀತಾ ಸುಭಾಷ್ ಎರಡು ಮಕ್ಕಳಾದ ನಂತರ ಫ್ಯಾಷನ್ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ಯಾರೀಸ್ ಶೋನಲ್ಲಿ ಕಾಣಿಸಿಕೊಂಡ ನಂತರ ಇದೀಗ ಮುಂಬೈನಲ್ಲಿ ನಡೆದ ಫ್ಯಾಷನ್ ಶೋವೊಂದರಲ್ಲೂ ಹೆಜ್ಜೆ ಹಾಕಿದ್ದಾರೆ. ಈ ಶೋನಲ್ಲಿ ಅವರ ಔಟ್‌ಫಿಟ್ ಹೇಗಿತ್ತು? ಫ್ಯಾಷನ್ ವಿಮರ್ಶಕರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ.

ಚಿತ್ರಗಳು: ಪ್ರಣೀತಾ, ಸುಭಾಶ್, ಬಹುಭಾಷಾ ತಾರೆ.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಹುಭಾಷಾ ತಾರೆ ಪ್ರಣೀತಾ ಸುಭಾಶ್(Pranitha Subhash) ಇತ್ತೀಚೆಗೆ ಫ್ಯಾಷನ್ ಶೋಗಳಲ್ಲಿ (Star Fashion) ಬ್ಯುಸಿಯಾಗಿದ್ದಾರೆ. ಹೌದು, ಎರಡನೇ ಮಗುವಾದ ನಂತರ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ನಟಿ ಪ್ರಣೀತಾ ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಬದಲು ಫ್ಯಾಷನ್ ಶೋಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದಿಷ್ಟು ದಿನಗಳ ಹಿಂದೆ ಪ್ಯಾರೀಸ್ ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡಿದ್ದ ಅವರು, ಇದೀಗ ಮುಂಬಯಿಯಲ್ಲಿ ನಡೆದ ಪ್ರತಿಷ್ಠಿತ ಬ್ರಾಂಡ್ ವಿವಿಯೆನ್ನೆ ವೆಸ್ಟ್ವುಡ್ ಆಯೋಜಿಸಿದ್ದ ಸೆಲೆಬ್ರೆಟಿ ಫ್ಯಾಷನ್ ಶೋನಲ್ಲಿ ಕಾಣಿಸಿಕೊಂಡು ಹೆಜ್ಜೆ ಹಾಕಿದ್ದಾರೆ. ನಿಮಗೆ ಗೊತ್ತೇ! ಈ ಹಿಂದೆ ನಟಿ ಪ್ರಣೀತಾ ಅಷ್ಟಾಗಿ ಫ್ಯಾಷನ್ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ! ಆದರೆ ಎರಡನೇ ಮಗುವಾದ ನಂತರ ಪ್ಯಾರೀಸ್ ಫ್ಯಾಷನ್ ವೀಕ್‌ನಲ್ಲಿ ಅದರಲ್ಲೂ ಸ್ಟ್ರೀಟ್ ಶೋಗಳಲ್ಲಿ ಬೋಲ್ಡಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಇದೀಗ ಅದೇ ರೀತಿ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾ ಸ್ಥಳದಲ್ಲಿ ನಡೆದ ಫ್ಯಾಷನ್ ಶೋನಲ್ಲಿ ಬಾಲಿವುಡ್ ಸೆಲೆಬ್ರೆಟಿಗಳ ನಡುವೆ ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲೂ ಪಾಲ್ಗೊಂಡ ಮೊದಲ ಸ್ಯಾಂಡಲ್‌ವುಡ್ ನಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಪ್ರಣೀತಾ ಔಟ್‌ಫಿಟ್ ಹೇಗಿತ್ತು?
ವಿವಿಯೆನ್ನೆ ಶೋನಲ್ಲಿ ಕ್ರೀಮ್ ಶೇಡ್‌ನ ಸಿಲ್ಕ್ ಶಾರ್ಟ್ ಕೋ ಆರ್ಡ್ ಸ್ಕರ್ಟ್ ಸೆಟ್‌ಗೆ ಮಂಡಿ ಕೆಳಗಿನವರೆಗೆ ಇರುವಂತಹ ಪ್ಯಾಚ್ ವರ್ಕ್ ಶೈಲಿಯ ಕೇಪ್ ಧರಿಸಿರುವ ಪ್ರಣೀತಾ, ವಿವಿಯೆನ್ನೆಯ ಬ್ಯಾಗ್ ಹಿಡಿದು ಪೋಸ್ ನೀಡಿದ್ದಾರೆ. ವಿಶೇಷವೆಂದರೆ ಕೂದಲಿಗೆ ಪೋಮ್ ಪೋಮ್ ಆಕ್ಸೆಸರೀಸ್ ಮುಡಿದಿದ್ದಾರೆ. ತಂತಿಯಂತಹ ಚೋಕರ್ ಧರಿಸಿದ್ದಾರೆ. ಸ್ಕಿನ್ ಕಲರ್‌ನ ಹೀಲ್ಸ್ ಧರಿಸಿದ್ದಾರೆ. ಶ್ರೀಯಾ ಸಿಂಗ್ ಔಟ್‌ಫಿಟ್ ಹಾಗೂ ದೀಪಿಕಾ ರಾಮ್ನಾನಿ ಟೀಮ್‌ನ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪರ್ಫೆಕ್ಟ್ ಮಾಡೆಲ್‌ನಂತೆ ಪೋಸ್ ನೀಡಿದ್ದಾರೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರಾದ ಜಾನ್.

ಪ್ರಣೀತಾ ಡಿಟೇಲ್ಸ್
- ಪ್ರಣೀತಾ ಸುಭಾಷ್ ಹಿಂದಿ ಸೇರಿದಂತೆ ಸಾಕಷ್ಟು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ.
- ಬೆಂಗಳೂರು ಮೂಲದ ಜ್ಯುವೆಲರಿ ಬ್ರಾಂಡ್‌ಗಳಿಗೆ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.
- ಎರಡು ಮಕ್ಕಳ ತಾಯಿಯಾದ ನಂತರ ಫ್ಯಾಷನ್ ರ‍್ಯಾಂಪ್ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)
ಈ ಸುದ್ದಿಯನ್ನೂ ಓದಿ | Wedding Fashion: ವೆಡ್ಡಿಂಗ್ ಬ್ರೈಡಲ್‌ವೇರ್ ಶಾಪಿಂಗ್ ಮಾಡುವವರಿಗೆ 5 ಸಿಂಪಲ್ ಐಡಿಯಾ