ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Turkey Airport: ವಿಮಾನದಲ್ಲಿ ತಾಂತ್ರಿಕ ದೋಷ-ಟರ್ಕಿ ಏರ್‌ಪೋರ್ಟ್‌ನಲ್ಲಿ ಸಿಲುಕಿ ಭಾರತೀಯರ ಪರದಾಟ

Turkey Airport: ಏಪ್ರಿಲ್ 2 ರಂದು ಲಂಡನ್‌ನಿಂದ ಮುಂಬೈಗೆ ತೆರಳಬೇಕಿದ್ದ ವಿಎಸ್ 358 ವಿಮಾನವು ತುರ್ತು ವೈದ್ಯಕೀಯ ಕಾರಣದಿಂದ ದಿಯರ್‌ಬಕಿರ್ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಲ್ಯಾಂಡಿಂಗ್ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

ಟರ್ಕಿಯಲ್ಲಿ ಏರ್‌ಪೋರ್ಟ್‌ನಲ್ಲಿ 250 ಭಾರತೀಯರು ಟ್ರ್ಯಾಪ್‌!

ಟರ್ಕಿ: ಹೆಚ್ಚಿನ ಭಾರತೀಯರು (Indian passengers ) ಸೇರಿದಂತೆ ಸುಮಾರು 250 ಜನರು ಟರ್ಕಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಲಂಡನ್ ನಿಂದ ಮುಂಬೈಗೆ ( London-Mumbai flight) ವರ್ಜಿನ್ ಅಟ್ಲಾಂಟಿಕ್ ವಿಮಾನದಲ್ಲಿ (Virgin Atlantic flight) ಹೊರಟಿದ್ದ 250ಕ್ಕೂ ಹೆಚ್ಚು ಮಂದಿ ಟರ್ಕಿಯ ದಿಯರ್‌ಬಕಿರ್ ವಿಮಾನ ನಿಲ್ದಾಣದಲ್ಲಿ (Turkey Airport) ಸುಮಾರು 40 ಗಂಟೆಗಳಿಗಿಂತಲೂ ಸಿಕ್ಕಿಹಾಕಿಕೊಂಡಿದ್ದಾರೆ. ಏಪ್ರಿಲ್ 2 ರಂದು ಲಂಡನ್‌ನಿಂದ ಮುಂಬೈಗೆ ತೆರಳಬೇಕಿದ್ದ ವಿಎಸ್ 358 ವಿಮಾನವು ತುರ್ತು ವೈದ್ಯಕೀಯ ಕಾರಣದಿಂದ ದಿಯರ್‌ಬಕಿರ್ ವಿಮಾನ ನಿಲ್ದಾಣಕ್ಕೆ ಬಂದಿತ್ತು. ಲ್ಯಾಂಡಿಂಗ್ ಬಳಿಕ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ವರ್ಜಿನ್ ಅಟ್ಲಾಂಟಿಕ್ ವಕ್ತಾರರು, ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆ ನಮ್ಮ ಆದ್ಯತೆಯಾಗಿದೆ. ಉಂಟಾಗಿರುವ ಸಮಸ್ಯೆಗಳಿಗೆ ನಾವು ಕ್ಷಮೆಯಾಚಿಸುತ್ತೇವೆ. ಅಗತ್ಯ ತಾಂತ್ರಿಕ ಅನುಮೋದನೆಗಳನ್ನು ಪಡೆದ ಬಳಿಕ ಏಪ್ರಿಲ್ 4ರಂದು ಶುಕ್ರವಾರ ಸ್ಥಳೀಯ ಸಮಯ 12 ಗಂಟೆಗೆ ದಿಯರ್‌ಬಕಿರ್ ವಿಮಾನ ನಿಲ್ದಾಣದಿಂದ ಮುಂಬೈಗೆ ವಿಎಸ್ 1358 ವಿಮಾನ ಪ್ರಯಾಣ ನಡೆಸಲಿದೆ ಎಂದು ಅವರು ಹೇಳಿದ್ದಾರೆ.



ಒಂದು ವೇಳೆ ಅನುಮೋದನೆ ಸಿಗುವುದು ವಿಳಂಬವಾದರೆ ಶನಿವಾರ ಟರ್ಕಿಯ ಮತ್ತೊಂದು ವಿಮಾನದಲ್ಲಿ ಗ್ರಾಹಕರನ್ನು ಕಳುಹಿಸಲಾಗುವುದು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಮಧ್ಯೆ, ಟರ್ಕಿಯಲ್ಲಿ ಪ್ರಯಾಣಿಕರಿಗೆ ರಾತ್ರಿಯ ಹೊಟೇಲ್ ವಸತಿ ಮತ್ತು ಉಪಹಾರಗಳನ್ನು ಒದಗಿಸಲಾಗುತ್ತಿದೆ. ಎಲ್ಲ ಸರಿಯಾದ ತಕ್ಷಣ ಗ್ರಾಹಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ವರ್ಜಿನ್ ಅಟ್ಲಾಂಟಿಕ್ ಹೇಳಿದೆ. ಟರ್ಕಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ ಮೂಲಕ ತಾವು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ದೂರಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ 300 ಪ್ರಯಾಣಿಕರಿಗೆ ಒಂದೇ ಶೌಚಾಲಯವನ್ನು ಒದಗಿಸಲಾಗಿದೆ ಎಂದು ಹಲವಾರು ಮಂದಿ ದೂರಿದ್ದಾರೆ.

ಇದನ್ನೂ ಓದಿ: Viral Video: ತನ್ನ ಕಾರಿಗೆ ತಾನೇ ಬೆಂಕಿ ಹಚ್ಚಿ ಅದರೊಳಗೆ ಕುಳಿತ ಭೂಪ! ಈತನ ಹುಚ್ಚಾಟದ ವಿಡಿಯೊ ಇಲ್ಲಿದೆ

ಇನ್ನು ಕೆಲವು ಪ್ರಯಾಣಿಕರು ಇಲ್ಲಿ ಚಳಿ ತೀವ್ರವಾಗಿದ್ದು, ಅದನ್ನು ಎದುರಿಸಲು ಪ್ರಯಾಣಿಕರಿಗೆ ಕಂಬಳಿಗಳನ್ನು ಒದಗಿಸಲಾಗಿಲ್ಲ ಎಂದು ತಿಳಿಸಿದ್ದಾರೆ.



ವಿಮಾನಯಾನ ವಿಳಂಬ ಮತ್ತು ಅನಿಶ್ಚಿತತೆಯ ಕಾರಣ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದ ಆಸನಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸುತ್ತಿರುವುದಾಗಿ ಹೇಳಿದೆ.