ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Manoj Kumar: ಬಾಲಿವುಡ್ ನ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ ಇನ್ನಿಲ್ಲ

ಬಾಲಿವುಡ್ ನ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್(Manoj Kumar) ಅವರ ಸಾವಿಗೆ ತೀವ್ರವಾದ ಹೃದಯ ಸ್ನಾಯುವಿನ ಊತ ಅಥವಾ ಕಾರ್ಡಿಯೋಜೆನಿಕ್ ಆಘಾತ ಕಾರಣ. ಮನೋಜ್ ಅವರು ಕಳೆದ ಕೆಲವು ತಿಂಗಳುಗಳಿಂದ ಡಿಕಂಪನೇಟೆಡ್ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು. ಇದು ಅವರ ಆರೋಗ್ಯ ಕ್ಷೀಣಿಸಲು ಕಾರಣವಾಯಿತು. ತೀವ್ರವಾಗಿ ಅವರ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲಿ ಫೆಬ್ರವರಿ 21ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ನಟ ಮನೋಜ್ ಕುಮಾರ್ ವಿಧಿವಶ

ಮುಂಬೈ: ಬಾಲಿವುಡ್ ನ ಹಿರಿಯ ನಟ ಮತ್ತು ಚಲನಚಿತ್ರ ನಿರ್ದೇಶಕ ಮನೋಜ್ ಕುಮಾರ್(Manoj kumar) ಅವರು ಮುಂಬೈನಲ್ಲಿ ಶುಕ್ರವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 87 ವರ್ಷವಾಗಿತ್ತು. ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ 4.03ಕ್ಕೆ ಅವರು ನಿಧನರಾಗಿರುವುದಾಗಿ ತಿಳಿದುಬಂದಿದೆ. ತೀವ್ರ ಹೃದಯಾಘಾತ ಅವರ ಸಾವಿಗೆ ಕಾರಣ ಎನ್ನಲಾಗಿದೆ. ಮನೋಜ್ ಕುಮಾರ್ ಅವರ ಜುಹು ನಿವಾಸದಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗುತ್ತದೆ. ಶನಿವಾರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.

ಮನೋಜ್ ಕುಮಾರ್ ಅವರ ಸಾವಿಗೆ ತೀವ್ರವಾದ ಹೃದಯ ಸ್ನಾಯುವಿನ ಊತ ಅಥವಾ ಕಾರ್ಡಿಯೋಜೆನಿಕ್ ಆಘಾತ ಕಾರಣ. ಮನೋಜ್ ಅವರು ಕಳೆದ ಕೆಲವು ತಿಂಗಳುಗಳಿಂದ ಡಿಕಂಪನೇಟೆಡ್ ಲಿವರ್ ಸಿರೋಸಿಸ್ ನಿಂದ ಬಳಲುತ್ತಿದ್ದರು. ಇದರಿಂದ ಅವರ ಆರೋಗ್ಯ ಕ್ಷೀಣಿಸಲು ಕಾರಣವಾಯಿತು. ತೀವ್ರವಾಗಿ ಅವರ ಆರೋಗ್ಯ ಹದಗೆಟ್ಟ ಸ್ಥಿತಿಯಲ್ಲಿ ಫೆಬ್ರವರಿ 21ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವೈದ್ಯಕೀಯ ವರದಿ ತಿಳಿಸಿದೆ. ಮನೋಜ್ ಕುಮಾರ್ ಅವರು ವಿಶೇಷವಾಗಿ ದೇಶಭಕ್ತಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದರು. ಹೀಗಾಗಿ ಇವರನ್ನು 'ಭರತ್ ಕುಮಾರ್' ಎಂದು ಕರೆಯಾಗುತ್ತಿತ್ತು.

ಈ ಸುದ್ದಿಯನ್ನೂ ಓದಿ: Actor Arshad Warsi: ಬಾಲಿವುಡ್‌ ನಟನ ವಿರುದ್ಧ RCB ಫ್ಯಾನ್‌ ಕೆಂಡಾಮಂಡಲ; ಕಾರಣ ಏನ್‌ ಗೊತ್ತಾ?

ಮನೋಜ್ ಕುಮಾರ್ ಬಗ್ಗೆ ಮಾತನಾಡಿರುವ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ನಮ್ಮ ಸ್ಫೂರ್ತಿ ಮತ್ತು ಭಾರತೀಯ ಚಲನಚಿತ್ರೋದ್ಯಮದ 'ಸಿಂಹ' ಮನೋಜ್ ಕುಮಾರ್ ಅವರು ಇನ್ನಿಲ್ಲ ಎಂದು ತಿಳಿಸಲು ದುಃಖವಾಗಿದೆ. ಬಹಳ ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಅಂಧೇರಿಯ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದುಚಿತ್ರೋದ್ಯಮಕ್ಕೆ ಬಹು ದೊಡ್ಡ ನಷ್ಟ. ಮನೋಜ್ ಅವರನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ನಾವೆಲ್ಲರೂ ಅವರನ್ನು ಆಗಾಗ ಭೇಟಿಯಾಗುತ್ತಿದ್ದೆವು. ಅವರು ಯಾವಾಗಲೂ ಉತ್ಸಾಹದಿಂದ ಇದ್ದರು, ಯಾವಾಗಲೂ ಸಂತೋಷವಾಗಿದ್ದರು. ಅವರಂತಹ ಮಹಾನ್ ನಿರ್ಮಾಪಕ ಚಿತ್ರೋದ್ಯಮದಲ್ಲಿ ಮತ್ತೆ ಎಂದಿಗೂ ಬರುವುದಿಲ್ಲ ಎಂದು ಹೇಳಿದ್ದಾರೆ.

manoj (1)

ಪಂಜಾಬ್ ನಿಂದ ಮುಂಬೈವರೆಗೆ

1937ರ ಜುಲೈ 24ರಂದು ಪಂಜಾಬ್‌ನ ಅಮೃತಸರದಲ್ಲಿ ಜನಿಸಿದ ಹರಿಕೃಷ್ಣ ಗೋಸ್ವಾಮಿ ಹಿಂದಿ ಚಿತ್ರರಂಗದಲ್ಲಿ ಮನೋಜ್ ಕುಮಾರ್ ಹೆಸರಿಂದ ಖ್ಯಾತಿ ಗಳಿಸಿದರು. ಶಹೀದ್, ಉಪಕಾರ್ ಮತ್ತು ರಂಗ್ ದೇ ಬಸಂತಿಯಂತಹ ಚಲನಚಿತ್ರಗಳಲ್ಲಿನ ಅವರ ಪಾತ್ರಗಳು ಸಿನಿ ಪ್ರಿಯರಲ್ಲೂ ದೇಶಭಕ್ತಿಯ ಭಾವನೆಗಳನ್ನು ಬೆಳಗಿಸಿತ್ತು. ವೃತ್ತಿಜೀವನದುದ್ದಕ್ಕೂ ಮನೋಜ್ ಅವರು ರಾಷ್ಟ್ರೀಯತೆ, ಏಕತೆಯ ಮನೋಭಾವವನ್ನು ಹೊಂದಿರುವ ಚಲನಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ ಹೆಸರುವಾಸಿಯಾದರು.

ಭಾರತೀಯ ಚಿತ್ರರಂಗಕ್ಕೆ ಅವರ ಕೊಡುಗೆಗಳು ಅವರಿಗೆ ಹಲವಾರು ಪ್ರತಿಷ್ಠಿತ ಪುರಸ್ಕಾರಗಳನ್ನು ತಂದುಕೊಟ್ಟಿತು. ಅವುಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ವಿವಿಧ ವಿಭಾಗಗಳಲ್ಲಿ ಏಳು ಫಿಲ್ಮ್‌ಫೇರ್ ಪ್ರಶಸ್ತಿಗಳು ಸೇರಿವೆ.

ಇದನ್ನು ಓದಿ: Dharma KeerthiRaj: ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಮೊದಲ ಬಾರಿ ಗುಡ್ ನ್ಯೂಸ್ ಕೊಟ್ಟ ಧರ್ಮ ಕೀರ್ತಿರಾಜ್

ಭಾರತೀಯ ಚಿತ್ರೋದ್ಯಮಕ್ಕೆ ಅವರ ಅಪಾರ ಕೊಡುಗೆಯನ್ನು ಗುರುತಿಸಿ ಭಾರತ ಸರ್ಕಾರವು 1992 ರಲ್ಲಿ ಅವರಿಗೆ ಪದ್ಮಶ್ರೀ ಹಾಗೂ 2015 ರಲ್ಲಿ ಭಾರತೀಯ ಚಿತ್ರರಂಗದ ಅತ್ಯುನ್ನತ ಮನ್ನಣೆಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿತು.