CSK vs DC: ಚೆನ್ನೈ-ಡೆಲ್ಲಿ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ವರದಿ, ಸಂಭಾವ್ಯ ತಂಡ ಹೇಗಿದೆ?
chennai weather: ಚೆನ್ನೈನಲ್ಲಿ ಯಾವುದೇ ಮಳೆ ಭೀತಿ ಇಲ್ಲ. ಹಗಲು ಪಂದ್ಯವಾದ ಕಾರಣ ಭಾರೀ ಬಿಸಿಲ ಝಳ ಆಟಗಾರನ್ನು ಆಯಾಸ ಉಂಟು ಮಾಡಲಿದೆ. ಪಂದ್ಯದ ಆರಂಭದ ವೇಳೆ ಗರಿಷ್ಠ 39 ಡಿಗ್ರಿಯಷ್ಟು ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಚೆನ್ನೈ: ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ(IPL 2025) ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್(CSK vs DC) ಮತ್ತು ಆರಂಭಿಕ ಪಂದ್ಯದ ಬಳಿಕ ಸತತ ಎರಡು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಶನಿವಾರ ಐಪಿಎಲ್‌ನ ಹಗಲು ಪಂದ್ಯದಲ್ಲಿ ಆಡಲಿದೆ. ಈ ಪಂದ್ಯದ ಪಿಚ್ ರಿಪೋರ್ಟ್, ಹವಾಮಾನ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಲ್ಲಿದೆ.
ಪಿಚ್ ರಿಪೋರ್ಟ್
ಚೆಪಾಕ್‌ನ(Chidambaram Stadium) ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಚೆನ್ನೈ ಹಾಗೂ ಡೆಲ್ಲಿ ಸ್ಪಿನ್ನರ್‌ಗಳ ನಡುವೆ ತೀವ್ರ ಸ್ಪರ್ಧೆ ಎದುರಾಗಬಹುದು. ಉಭಯ ತಂಡದಲ್ಲಿ ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಿದ್ದಾರೆ. ಆರ್.ಅಶ್ವಿನ್, ರವೀಂದ್ರ ಜಡೇಜಾ ಹಾಗೂ ನೂರ್ ಅಹ್ಮದ್ ಚೆನ್ನೈ ತಂಡದಲ್ಲಿದ್ದರೆ, ಅಕ್ಷರ್ ಪಟೇಲ್, ಕುಲ್‌ದೀಪ್ ಯಾದವ್ ಡೆಲ್ಲಿ ತಂಡದ ಸಿನ್ನರ್‌ಗಳಾಗಿದ್ದಾರೆ. 12 ಓವರ್‌ಗಳು ತಂಡಕ್ಕೆ ನಿರ್ಣಾಯಕ. ಇಲ್ಲಿ ನಡೆದ 87 ಪಂದ್ಯಗಳಲ್ಲಿ, ಮೊದಲು ಬ್ಯಾಟ್ ಮಾಡಿದ ತಂಡಗಳು 50 ಪಂದ್ಯಗಳನ್ನು ಗೆದ್ದಿದ್ದರೆ, ಚೇಸಿಂಗ್ ಮಾಡಿದ ತಂಡವು 37 ಪಂದ್ಯಗಳನ್ನು ಗೆದ್ದಿದೆ. ಈ ಲೆಕ್ಕಾಚಾರದಲ್ಲಿ ಟಾಸ್ ಗೆದ್ದ ತಂಡ ಬ್ಯಾಟಿಂಗ್ ಆಯ್ದುಕೊಳ್ಳಬಹುದು. ಕಳೆದ ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಕೈ ಸುಟ್ಟುಕೊಂಡಿತ್ತು.
ಹವಾಮಾನ ವರದಿ
ಚೆನ್ನೈನಲ್ಲಿ ಯಾವುದೇ ಮಳೆ ಭೀತಿ ಇಲ್ಲ. ಹಗಲು ಪಂದ್ಯವಾದ ಕಾರಣ ಭಾರೀ ಬಿಸಿಲ ಝಳ ಆಟಗಾರನ್ನು ಆಯಾಸ ಉಂಟು ಮಾಡಲಿದೆ. ಪಂದ್ಯದ ಆರಂಭದ ವೇಳೆ ಗರಿಷ್ಠ 39 ಡಿಗ್ರಿಯಷ್ಟು ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಖಾಮುಖಿ
ಡೆಲ್ಲಿ ಮತ್ತು ಚೆನೈ ಇದುವರೆಗೂ ಐಪಿಎಲ್‌ನಲ್ಲಿ 30 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಚೆನ್ನೈ 19 ಪಂದ್ಯ ಗೆದ್ದರೆ, ಡೆಲ್ಲಿ 11 ಪಂದ್ಯ ಜಯಿಸಿದೆ.
Nattu’s cool tips to beat the heat 😎🔥 pic.twitter.com/6jVWdBkmJd
— Delhi Capitals (@DelhiCapitals) April 4, 2025
ಸಂಭಾವ್ಯ ತಂಡ
ಡೆಲ್ಲಿ ಕ್ಯಾಪಿಟಲ್ಸ್: ಜೇಕ್ ಫ್ರೇಸರ್-ಮೆಕ್‌ಗುರ್ಕ್, ಫಾಫ್ ಡು ಪ್ಲೆಸಿಸ್, ಅಭಿಷೇಕ್ ಪೊರೆಲ್, ಕೆ.ಎಲ್ ರಾಹುಲ್ (ವಿ.ಕೀ.), ಅಕ್ಷರ್ ಪಟೇಲ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ವಿಪ್ರಜ್ ನಿಗಮ್, ಮಿಚೆಲ್ ಸ್ಟಾರ್ಕ್, ಕುಲ್ದೀಪ್ ಯಾದವ್, ಮೋಹಿತ್ ಶರ್ಮಾ/ಟಿ. ನಟರಾಜನ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಆಟಗಾರ: ಅಶುತೋಷ್ ಶರ್ಮಾ
ರಚಿನ್ ರವೀಂದ್ರ, ರಾಹುಲ್ ತ್ರಿಪಾಠಿ, ಋತುರಾಜ್ ಗಾಯಕ್ವಾಡ್ (ನಾಯಕ), ವಿಜಯ್ ಶಂಕರ್, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿ.ಕೀ.), ಜೇಮಿ ಓವರ್ಟನ್, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಮಥೀಶ ಪತಿರಾಣ, ಖಲೀಲ್ ಅಹ್ಮದ್.
ಇಂಪ್ಯಾಕ್ಟ್ ಪ್ಲೇಯರ್: ಶಿವಂ ದುಬೆ