ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಶ್ರೀ ದೇವರದಾಸಿಮಯ್ಯರವರ ತತ್ವ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ: ಉಪವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್

ದಾಸಿಮ್ಮಯ್ಯ ಅವರು 11ನೇ ಶತಮಾನದ ಆದಿಕವಿ, ಪ್ರಥಮ ವಚನಕಾರ, ಹೆಣ್ಣು-ಗಂಡು, ಮೇಲು-ಕೀಳು, ಆಚರಣೆಗಳ ಭೇದಗಳನ್ನು ವಿರೋಧಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯ ಗಳನ್ನು ಖಂಡಿಸಿದ ವಚನಕಾರ. ವಚನಕಾರರು ತಮ್ಮ ಕಾಲದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಸಮಾನವಾಗಿ ಕಾಣುತ್ತಿದ್ದರು.

ಸಮಾಜಕ್ಕೆ ಇಂಥಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿ

ದೇವರ ದಾಸಿಮಯ್ಯರವರು ಕನ್ನಡದ ಮೊದಲ ವಚನಕಾರ. ತನ್ನ ಜೀವನಕ್ಕಾಗಿ ಮಾಡುತ್ತಿದ್ದ ನೇಯ್ಗೆ ವೃತ್ತಿಯ ಜೊತೆಗೆ, ತನ್ನ ಕಾಯಕ  ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದರು ಎಂದು ಉಪವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್ ಬಣ್ಣಿಸಿದರು.

Profile Ashok Nayak Apr 4, 2025 1:08 PM

ಚಿಕ್ಕಬಳ್ಳಾಪುರ: ದೇವರ ದಾಸಿಮಯ್ಯರವರು ಕನ್ನಡದ ಮೊದಲ ವಚನಕಾರ. ತನ್ನ ಜೀವನಕ್ಕಾಗಿ ಮಾಡುತ್ತಿದ್ದ ನೇಯ್ಗೆ ವೃತ್ತಿಯ ಜೊತೆಗೆ, ತನ್ನ ಕಾಯಕ  ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡಿದರು ಎಂದು ಉಪವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್ ಅವರು ಬಣ್ಣಿಸಿದರು. ಜಿಲ್ಲಾ ಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗ ದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.  

ದಾಸಿಮ್ಮಯ್ಯ ಅವರು 11ನೇ ಶತಮಾನದ ಆದಿಕವಿ, ಪ್ರಥಮ ವಚನಕಾರ, ಹೆಣ್ಣು-ಗಂಡು, ಮೇಲು-ಕೀಳು, ಆಚರಣೆಗಳ ಭೇದಗಳನ್ನು ವಿರೋಧಿಸಿ ಸಾಮಾಜಿಕ ವ್ಯವಸ್ಥೆಯ ಅನ್ಯಾಯ ಗಳನ್ನು ಖಂಡಿಸಿದ ವಚನಕಾರ. ವಚನಕಾರರು ತಮ್ಮ ಕಾಲದಲ್ಲಿ ಮಹಿಳೆಯರು ಮತ್ತು ಪುರುಷರನ್ನು ಸಮಾನವಾಗಿ ಕಾಣುತ್ತಿದ್ದರು.

ಇದನ್ನೂ ಓದಿ: Chikkaballapur news: ಸಂವಿಧಾನವೇ ನಮ್ಮ ಧರ್ಮ ಗ್ರಂಥ : ಪ್ರೊ.ಬಿ.ರಾಮಚಂದ್ರಪ್ಪ

ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿದರು. ಹಾಗೆಯೇ, ದಾಸಿಮ್ಮಯ್ಯ ಅವರು ಹಲವಾರು ಊರುಗಳನ್ನು ಸಂಚರಿಸುತ್ತಾ ಜನ ಸಾಮಾನ್ಯರಿಗೆ ಶಿವ ಜ್ಞಾನ, ಸಾಮಾಜಿಕ ಅರಿವು ತುಂಬುವುದರಲ್ಲಿ ಮುಳುಗಿದರು. ಇವರು ಅಸಂಖ್ಯಾತ ವಚನಗಳನ್ನು ರಚಿಸಿದ್ದು ಅದರಲ್ಲಿ ಕೇವಲ 176 ವಚನಗಳು ಮಾತ್ರ ದೊರಕಿವೆ. ದೇವರದಾಸಿಮಯ್ಯ ಅವರ ವಚನಗಳು ಮನುಷ್ಯನ ದಿಕ್ಕನ್ನೆ? ಬದಲಿಸುತ್ತವೆ. ನೈಜ ಜೀವನದ ಅನುಭವಗಳು ಅವರ ವಚನಗಳಲ್ಲಿದೆ. ಅವರ ಚಿಂತನೆಗಳು ಹಾಗೂ ತತ್ವ ಗಳನ್ನು ನಮ್ಮ ಜೀವನದಲ್ಲಿ ಪಾಲಿಸುವ ಮೂಲಕ ನಮ್ಮ ಜೀವನವನ್ನು ಸಾರ್ಥಕ ಮಾಡಿ ಕೊಳ್ಳಬೇಕು. ಸಮಾಜಕ್ಕೆ ಇಂಥಹ ಮಹಾನ್ ವ್ಯಕ್ತಿಗಳ ಮಾರ್ಗದರ್ಶನ ಸಿಗಲಿ ಎಂದು ಉಪವಿಭಾಗಾಧಿಕಾರಿಗಳು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಡಾ.ಎಲ್,ಎನ್.ಗಿರಿಜಾದೇವಿ ರವರು ಮಾತನಾಡುತ್ತಾ ಶ್ರೀ ದೇವರದಾಸಿಮಯ್ಯ ಅವರು 11ನೇ ಶತಮಾನದ ಶ್ರೇಷ್ಠ ವಚನಕಾರ. ಇವರು ಶಂಕರಿ ಮತ್ತು ರಾಮಯ್ಯರೆಂಬ ದಂಪತಿಗಳ ಮಗನಾಗಿ  ಯಾದಗಿರಿ ಜಿಲ್ಲೆಯ ಕೆಂಭಾವಿ ತಾಲ್ಲೂ ಕಿನ ‘ಮುದೆನೂರು’ ಎಂಬ ಗ್ರಾಮದಲ್ಲಿ  ಜನಿಸಿದರು. ಇವರು ಬಾಲ್ಯವನ್ನು ಧ್ಯಾನ, ಪೂಜೆಗಳಲ್ಲಿ ಕಳೆದರು. ಹೆಚ್ಚಿನ ವಿದ್ಯಭ್ಯಾಸಕ್ಕಾಗಿ ಸುಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ಶ್ರೀಶೈಲಕ್ಕೆ ಹೋಗಿ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಆತನ ಅಪ್ಪಣೆಯಂತೆ ಅಲ್ಲಿನ ಮಠಾಧಿಪತಿಯಾಗಿದ್ದ ಚಂದ್ರಕೊAಡ ದೇಶೀಕೇಂದ್ರ ಅವರಿಂದ ಶಿವಾನುಭವವನ್ನು ಪಡೆದರು.ವಸ್ತ್ರಗಳನ್ನು ಮಾಡುವ ಕಾಯಕದಿಂದ ಗುರು, ಲಿಂಗ, ಜಂಗಮಗಳ ಆರಾಧನೆ ಯನ್ನು ಮಾಡಿದರು. ದಾಸಿಮಯ್ಯ ತನ್ನ ಮನೆತನದ ಆರಾಧ್ಯದೈವವಾದ ‘ರಾಮನಾಥ’ ನನ್ನೇ ವಚನಗಳಿಗೆ ಅಂಕಿತವನ್ನಾಗಿ ಮಾಡಿಕೊಂಡಿದ್ದಾನೆ ಎಂದು ತಿಳಿಸಿದರು.

ಈ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿರುವ ಸಮುದಾ ಯದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಸಮುದಾಯದ ಮುಖಂಡರು ಉಪ ವಿಭಾಗಾಧಿಕಾರಿ ಡಿ.ಹೆಚ್ ಅಶ್ವಿನ್ ರವರಿಗೆ ವಿವಿಧ ಬೇಡಿಕೆಗಳನ್ನು ಹಿಡೇರಿಸಲು ಕೋರಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಕುಮಾರ್, ಜವಳಿ ಮತ್ತು ಕೈಮಗ್ಗ ಇಲಾಖೆಯ ಉಪನಿರ್ದೇಶಕ ವಿರೂಪಾಕ್ಷಪ್ಪ, ಲೋಕೋಪಯೋಗಿ ಇಲಾಖೆಯ ಅಧಿಕಾರಿ ಸಂತೋಷ್,  ಜಿಲ್ಲಾ ನೇಕರಾಯರ ಒಕ್ಕೂಟದ ಅಧ್ಯಕ್ಷ ಎಚ್ ಕೆ ಲಕ್ಷ್ಮೀಪತಿ, ಕರ್ನಾಟಕ ರಾಜ್ಯ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತದ ಬಿ.ಜೆ ಗಣೇಶ್, ಸಮುದಾಯದ ಮುಖಂಡರಾದ ಕುಷ್ ಕುಮಾರ್, ಮಂಜು ನಾಥ್, ಶಿವಕುಮಾರ್, ಸಮುದಾಯದ ಸದಸ್ಯರು ಹಾಗೂ ಪದಾಧಿಕಾರಿಗಳು ಉಪಸ್ಥಿತ ರಿದ್ದರು.