ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವರ್ತನಾ ವಿಜ್ಞಾನವನ್ನು ಬಳಸಿಕೊಂಡು ಬೆಂಗಳೂರು ಮೆಟ್ರೋ ಬಳಕೆ ಹೆಚ್ಚಿಸುವ ವಿನೂತನ ಯೋಜನೆ ಪ್ರಾರಂಭ

ಸ್ಟೇಷನ್ ಆಕ್ಸೆಸ್ ಆಂಡ್ ಮೊಬಿಲಿಟಿ ಪ್ರೋಗ್ರಾಂ (ಸ್ಟಾಂಪ್) ತಂಡವು ಟಿಎಂಎಫ್ ಮತ್ತು ಡಬ್ಲ್ಯೂ ಆರ್‌ಐ ಇಂಡಿಯಾ ಸಂಸ್ಥೆಗಳ ನೇತೃತ್ವದಲ್ಲಿ ಭಾರತದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ಸಂಪರ್ಕ ಕೊರತೆಯನ್ನು ತಗ್ಗಿಸಲು ಕೆಲಸ ಮಾಡುತ್ತದೆ. ಇದು ಎಲೆಕ್ಟ್ರಿಕ್ ಆಟೋರಿಕ್ಷಾಗಳಿಂದ ಹಿಡಿದು ಕಾರ್‌ ಪೂಲಿಂಗ್ ಆಪ್‌ ವರೆಗೆ ವಿನೂತನ ಆವಿಷ್ಕಾರಗಳನ್ನು ಒಟ್ಟುಗೂಡಿಸಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸು ತ್ತದೆ

ಬೆಂಗಳೂರು ಮೆಟ್ರೋ ಬಳಕೆ ಹೆಚ್ಚಿಸುವ ವಿನೂತನ ಯೋಜನೆ ಪ್ರಾರಂಭ

Profile Ashok Nayak Apr 14, 2025 3:56 PM

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸಲು ಸ್ಟಾಂಪ್ ಇನ್ನೋವೇಶನ್ ಚಾಲೆಂಜ್ ಕಾರ್ಯಕ್ರಮದ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಬೆಂಗಳೂರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್ (ಬಿಎಂಆರ್‌ಸಿಎಲ್‌), ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್‌ ಪೋರ್ಟ್ ಕಾರ್ಪೊರೇಶನ್ (ಬಿಎಂಟಿಸಿ), ಮತ್ತು ಎಲೆ ಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ಇಎಲ್‌ಸಿಐಎ) ಸಂಸ್ಥೆಗಳು ಟೊಯೋಟಾ ಮೊಬಿಲಿಟಿ ಫೌಂಡೇಶನ್ (ಟಿಎಂಎಫ್) ಮತ್ತು ಡಬ್ಲ್ಯೂಆರ್‌ಐ ಇಂಡಿಯಾ ಜೊತೆಗಿನ ಸಹಭಾಗಿತ್ವ ದಲ್ಲಿ “ಸ್ಟಾಂಪ್: ಪ್ರಯಾಣಿಕರ ವರ್ತನೆ ರೂಪಿಸುವಿಕೆ” ಎಂಬ ಹೊಸ ಯೋಜನೆಯನ್ನು ಪ್ರಾರಂ ಭಿಸಿದೆ. ಈ ಯೋಜನೆಯ ಮೂಲಕ ವರ್ತನಾ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸಿಕೊಂಡು ವೈಯಕ್ತಿಕ ವಾಹನ ಬಳಸುವವರಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳಲು ಪ್ರೇರೇಪಣೆ ನೀಡಲಾಗುತ್ತದೆ.

ಯೋಜನೆಯ ಹಿನ್ನೆಲೆ

2025ರ ಕೊನೆಯಲ್ಲಿ ನಮ್ಮ ಮೆಟ್ರೋ ಯೆಲ್ಲೋ ಲೈನ್ ಪ್ರಾರಂಭವಾಗಲಿದೆ. ಇದರಿಂದ ಬೆಂಗಳೂ ರಿನ ಅತಿದೊಡ್ಡ ಉದ್ಯೋಗ ಕೇಂದ್ರವಾದ ಎಲೆಕ್ಟ್ರಾನಿಕ್ ಸಿಟಿಗೆ ಬೆಂಗಳೂರು ನಗರದಿಂದ ಉತ್ತಮ ಸಾರ್ವಜನಿಕ ಸಾರಿಗೆ ಸಂಪರ್ಕ ದೊರೆಯಲಿದೆ.

ಇದನ್ನೂ ಓದಿ: Bangalore News: ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವದಾನ ಮಾಡಿದಂತೆ

ಸ್ಟೇಷನ್ ಆಕ್ಸೆಸ್ ಆಂಡ್ ಮೊಬಿಲಿಟಿ ಪ್ರೋಗ್ರಾಂ (ಸ್ಟಾಂಪ್) ತಂಡವು ಟಿಎಂಎಫ್ ಮತ್ತು ಡಬ್ಲ್ಯೂ ಆರ್‌ಐ ಇಂಡಿಯಾ ಸಂಸ್ಥೆಗಳ ನೇತೃತ್ವದಲ್ಲಿ ಭಾರತದ ನಗರಗಳಲ್ಲಿ ಸಾರ್ವಜನಿಕ ಸಾರಿಗೆಯ ಸಂಪರ್ಕ ಕೊರತೆಯನ್ನು ತಗ್ಗಿಸಲು ಕೆಲಸ ಮಾಡುತ್ತದೆ. ಇದು ಎಲೆಕ್ಟ್ರಿಕ್ ಆಟೋರಿಕ್ಷಾಗಳಿಂದ ಹಿಡಿದು ಕಾರ್‌ ಪೂಲಿಂಗ್ ಆಪ್‌ ವರೆಗೆ ವಿನೂತನ ಆವಿಷ್ಕಾರಗಳನ್ನು ಒಟ್ಟುಗೂಡಿಸಿ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತದೆ.

2023ರಲ್ಲಿ ಟೊಯೋಟಾ ಮೊಬಿಲಿಟಿ ಫೌಂಡೇಶನ್ ಮತ್ತು ಡಬ್ಲ್ಯೂಆರ್‌ಐ ಇಂಡಿಯಾ ಬಿಡುಗಡೆ ಮಾಡಿದ “ಭಾರತದಲ್ಲಿ ಮೆಟ್ರೋ ಸೌಲಭ್ಯ ಸುಧಾರಣೆ: ಮೂರು ನಗರಗಳ ಅಧ್ಯಯನ ವರದಿ” ಎಂಬ ವರದಿಯು ಕೊನೆಯ ಹಂತದ ಸಾರಿಗೆ ಮತ್ತು ಹೆಚ್ಚು ಕಾಯುವ ಅನಿವಾರ್ಯತೆಯಿಂದಾಗಿ ಪ್ರಯಾಣಿಕರು ಮೆಟ್ರೋ ಬಳಕೆಯಿಂದ ದೂರ ಉಳಿಯುತ್ತಾರೆ ಎಂದು ತಿಳಿಸಿದೆ.

ಈ ಯೋಜನೆಯು ವಿಶೇಷವಾಗಿ ಸಾರ್ವಜನಿಕ ಸಾರಿಗೆಯನ್ನು ಆಯ್ಕೆಯಾಗಿ ಬಳಸುವ ಶ್ರೀಮಂತ ವ್ಯಕ್ತಿಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಈ ಹಿಂದಿನ ಸ್ಟಾಂಪ್ ಆವೃತ್ತಿಗಳಿಂದ ತಿಳಿದು ಬಂದಿರುವ ವಿಚಾರ ಏನೆಂದರೆ ಶ್ರೀಮಂತ ಪ್ರಯಾಣಿಕರಿಗೆ ಬೆಂಗಳೂರಿನಲ್ಲಿನ ಕೊನೆಯ ಹಂತದ ಪ್ರಯಾಣ ವೆಚ್ಚವು ನಾಗ್ಪುರ ಮತ್ತು ದೆಹಲಿಯಂತಹ ನಗರಗಳಿಗಿಂತ ಹೆಚ್ಚಾಗಿದೆ ಎಂಬುದು.

ಯೋಜನೆಯ ಉದ್ದೇಶ

ಈ ಕಾರ್ಯಕ್ರಮವು ಕೊನೆಯ ಹಂತದ ಪ್ರಯಾಣ ಸಮಸ್ಯೆ ಮತ್ತು ಪ್ರಯಾಣದ ಹೆಚ್ಚಿನ ವೆಚ್ಚದ ಹೊರೆಯನ್ನು ತಗ್ಗಿಸಲು ವರ್ತನಾ ವಿಜ್ಞಾನದ ತತ್ವಗಳು ಮತ್ತು ತಂತ್ರಜ್ಞಾನ ಆಧಾರಿತ ಪರಿಹಾರ ಗಳನ್ನು ಬಳಸುವ ಗುರಿಯನ್ನು ಹೊಂದಿದೆ. ಈ ಮೂಲಕ ಎಲ್ಲರಿಗೂ ಹೆಚ್ಚು ಪರಿಣಾಮಕಾರಿ ಮತ್ತು ಸುಸ್ಥಿರವಾದ ನಗರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ಕೆಲಸ ನಡೆಯಲಿದೆ. ಈ ಯೋಜನೆ ಯು ಹೊಗೆಯನ್ನು ಕಡಿಮೆ ಮಾಡುವುದರ ಜೊತೆಗೆ ಟ್ರಾಫಿಕ್ ಜಾಮ್ ತಗ್ಗಿಸಲಿದೆ ಮತ್ತು ಪ್ರಯಾ ಣಿಕರಿಗೆ ಸುಸ್ಥಿರ ಸಾರಿಗೆ ವ್ಯವಸ್ಥೆಯನ್ನು ಬಳಸಲು ಉತ್ತೇಜಿಸುತ್ತದೆ.

ಸ್ಟಾಂಪ್ ಇನೋವೇಶನ್ ಚಾಲೆಂಜ್

ಈ ಯೋಜನೆಯ ಭಾಗವಾಗಿ ಸ್ಟೇಷನ್ ಆಕ್ಸೆಸ್ ಆಂಡ್ ಮೊಬಿಲಿಟಿ ಪ್ರೋಗ್ರಾಂ (ಸ್ಟಾಂಪ್) ಒಂದು ವಿನೂತನ ಇನ್ನೋವೇಷನ್ ಚಾಲೆಂಜ್ ಅನ್ನು ಪ್ರಾರಂಭಿಸಿದೆ. ಈ ಚಾಲೆಂಜ್ ಅಡಿಯಲ್ಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಮೆಟ್ರೋ ಬಳಕೆಯನ್ನು ಉತ್ತೇಜಿಸುವ ಉತ್ತಮ ಸಾರಿಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ ಕಂಪನಿಗಳು ಮತ್ತು ಉದ್ಯಮ ಪಾಲು ದಾರರಿಗೆ ಆಹ್ವಾನ ನೀಡಲಾಗುತ್ತದೆ. ವಿಶ್ವದಾದ್ಯಂತ ಇರುವ ಸಂಶೋಧಕರು ಅರ್ಜಿ ಸಲ್ಲಿಸಬಹು ದಾಗಿದ್ದು, ಅವರು ಭಾರತೀಯ ಪಾಲುದಾರರೊಂದಿಗೆ ಕೆಲಸ ಮಾಡಬೇಕಾಗಿರುತ್ತದೆ.

ಪರಿಹಾರೋಪಾಯದಲ್ಲಿ ಈ ಕೆಳಗಿನ ವಿಚಾರ ಒಳಗೊಂಡಿರಬೇಕು:

  • ಗೇಮಿಫಿಕೇಶನ್: ಪರಿಸರ ಸ್ನೇಹಿ ಸಾರಿಗೆ ಆಯ್ಕೆಗಳನ್ನು ಆರಿಸಿಕೊಳ್ಳುವವರಿಗೆ ಇನ್ಸೆಂಟಿವ್ ನೀಡಬೇಕು.
  • ತಕ್ಷಣದ ಪರಿಹಾರಗಳು: ಗರಿಷ್ಠ ಟ್ರಾಫಿಕ್ ಇರುವ ಸಮಯದಲ್ಲಿ ಹಂಚಿಕೆಯ ಸಾರಿಗೆ ವ್ಯವಸ್ಥೆಯನ್ನು ಬಳಸಲು ಪ್ರೋತ್ಸಾಹಿಸುವುದು ಮತ್ತು ಆ ಮೂಲಕ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಸೂಚಿಸುವುದು.
  • ಎಲ್ಲರಿಗೂ ಲಭ್ಯತೆ: ಕೊನೆಯ ಹಂತದ ಸಾರಿಗೆ ವ್ಯವಸ್ಥೆಯನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು, ಸುರಕ್ಷಿತವಾಗಿಸುವುದು ಮತ್ತು ವಿವಿಧ ರೀತಿಯ ಪ್ರಯಾಣಿಕರಿಗೆ ಸೂಕ್ತ ಅನುಕೂಲ ಕಲ್ಪಿಸುವುದು.

ಚಾಲೆಂಜ್ ನ ಅವಧಿ: ಏಪ್ರಿಲ್ – ಜೂನ್ 2025

ಆಯ್ಕೆಗೊಂಡ ತಂಡಗಳು ತಮ್ಮ ಐಡಿಯಾಗಳನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ಯರೂಪಕ್ಕೆ ತರಲು ಒಟ್ಟು 100,000 ಯುಎಸ್ ಡಾಲರ್ ಅನುದಾನವನ್ನು ಪಡೆಯುತ್ತವೆ. ಈ ಚಾಲೆಂಜ್ ಅಶೋಕಾ ವಿಶ್ವವಿದ್ಯಾಲಯದ ಸೆಂಟರ್ ಫಾರ್ ಸೋಶಿಯಲ್ ಆಂಡ್ ಬಿಹೇವಿಯರ್ ಚೇಂಜ್‌ ನಲ್ಲಿ ನಡೆಯಲಿರುವ ಬೂಟ್‌ ಕ್ಯಾಂಪ್ ಅನ್ನು ಒಳಗೊಂಡಿದ್ದು, ಈ ಬೂಟ್ ಕ್ಯಾಂಪ್ ನಲ್ಲಿ ವರ್ತನಾ ವಿಜ್ಞಾನದ ಕುರಿತು ಒಳನೋಟಗಳನ್ನು ಪಡೆಯಬಹುದು.

ಫೈನಲ್ ಹಂತಕ್ಕೆ ಬಂದವರು ಈ ಕೆಳಗಿನ ವಿಭಾಗಗಳಲ್ಲಿ ನೆರವು ಪಡೆಯಲಿದ್ದಾರೆ:

  1. ಎಂಟರ್‌ಪ್ರೈಸ್: ವ್ಯಾಪಾರ ಅಭಿವೃದ್ಧಿ, ಸ್ಟ್ರಾಟೆಜಿ, ಪೈಲಟ್ ವಿನ್ಯಾಸ, ಸರ್ಕಾರದೊಂದಿಗೆ ಸಂಪರ್ಕ ಮತ್ತು ತಾಂತ್ರಿಕ ಬೆಂಬಲ ಸೇರಿದಂತೆ ವಿವಿಧ ರೀತಿಯ ನೆರವು ಒದಗಿಸಲಾಗುವುದು.
  2. ಎಕ್ಸ್‌ ಪೋಷರ್: ಕ್ಷೇತ್ರ ತಜ್ಞರು, ಸರ್ಕಾರಿ ಮತ್ತು ಸ್ಥಳೀಯ ಅಧಿಕಾರಿಗಳ ಜೊತೆಗೆ ಸಂಪರ್ಕ ಹೊಂದುವ, ಅವರಿಂದ ಅಭಿಪ್ರಾಯ ಮತ್ತು ಸಲಹೆ ಪಡೆಯುವ ಅವಕಾಶ ಒದಗಿಸಲಾಗುವುದು.
  3. ಆರ್ಥಿಕ ಬೆಂಬಲ: ಆಯ್ದ ಉದ್ಯಮಗಳಿಗೆ ಅವರ ತಂತ್ರಜ್ಞಾನ, ಉತ್ಪನ್ನ ಅಥವಾ ಸೇವೆಗಳನ್ನು ಅಭಿವೃದ್ಧಿಪಡಿಸಲು ಬಹುಮಾನವಾಗಿ ಹಣಕಾಸು ನೆರವು ಒದಗಿಸಲಾಗುವುದು.

ಅರ್ಜಿ ಪ್ರಕ್ರಿಯೆ, ಕೊನೆಯ ದಿನಾಂಕ ಮತ್ತು ಮತ್ತಿತರ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ – ಸ್ಟಾಂಪ್: ಪ್ರಯಾಣಿಕರ ವರ್ತನೆ ರೂಪಿಸುವಿಕೆ (ನಡ್ಜಿಂಗ್ ಕಮ್ಯುಟರ್ ಬಿಹೇವಿಯರ್)

ಕಾರ್ಯಕ್ರಮದ ಪಾಲುದಾರರು

ಸ್ಟಾಂಪ್ ನಡ್ಜ್ ಯೋಜನೆಯು ಬಿಎಂಆರ್‌ಸಿಎಲ್‌, ಬಿಎಂಟಿಸಿ, ಇಎಲ್‌ಸಿಐಎ ಮತ್ತು ಇತರ ಸಂಬಂಧಿತ ಸಂಸ್ಥೆಗಳನ್ನು ಸೇರಿ ಪ್ರಮುಖ ಪಾಲುದಾರರನ್ನು ಒಟ್ಟುಗೂಡಿಸಿ ಈ ವಿನೂತನ ಪರಿಹಾರೋಪಯ ಜಾರಿಗೆ ತರುವ ಗುರಿ ಹೊಂದಿದೆ.

ಟಿಪ್ಪಣಿಗಳು

ಈ ಕುರಿತು ಮಾತನಾಡಿರುವ ಟೊಯೋಟಾ ಮೊಬಿಲಿಟಿ ಫೌಂಡೇಶನ್ ಏಷಿಯಾದ ಎಕ್ಸಿಕ್ಯೂಟಿವ್ ಪ್ರೋಗ್ರಾಮ್ ಡೈರೆಕ್ಟರ್ ಪ್ರಸ್ ಗಣೇಶ್ ಅವರು, “ಭಾರತದ ನಗರಗಳಲ್ಲಿ ಮೆಟ್ರೋ ಬಳಕೆಯನ್ನು ಜಾಸ್ತಿ ಮಾಡಲು ಪ್ರೇರೇಪಿಸಲು ಸುಮಾರು 10 ವರ್ಷಗಳ ಹಿಂದೆ ಟೊಯೋಟಾ ಮೊಬಿಲಿಟಿ ಫೌಂಡೇಶನ್ ಸಂಸ್ಥೆಯು ಡಬ್ಲ್ಯೂ ಆರ್ ಐ ಇಂಡಿಯಾ ಜೊತೆ ಸೇರಿಕೊಂಡು ಸ್ಟಾಂಪ್ ಕಾರ್ಯಕ್ರಮವನ್ನು ಪ್ರಾರಂಭಿಸಿತು,” ಎಂದು ಹೇಳಿದರು.

ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಶನ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ್ ರಾವ್ ಐಎಎಸ್ ಅವರು ಮಾತನಾಡಿ, “ಬೆಂಗಳೂರಿನ ಮೆಟ್ರೋ ಜಾಲವು ಯೆಲ್ಲೋ ಲೈನ್‌ ಆರಂಭ ಮಾಡುತ್ತಿರುವ ಈ ಹೊತ್ತಿನಲ್ಲಿ ಪ್ರತೀ ಗಂಟೆಗೆ ಸಾವಿರಾರು ವಾಹನಗಳನ್ನು ರಸ್ತೆಯಲ್ಲಿ ಸಾಗುವುದು ಕಡಿಮೆಯಾಗಿ ಬಹಳಷ್ಟು ಟ್ರಾಫಿಕ್ ಜಾಮ್ ತಗ್ಗಲಿರುವುದನ್ನು ನಾವು ಊಹಿಸುತ್ತಿದ್ದೇವೆ. ಹೀಗಾಗಿ ಎಲೆಕ್ಟ್ರಾನಿಕ್ ಸಿಟಿಯ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾರ್ವಜನಿಕ ಸಾರಿಗೆಯನ್ನು ಬಳಸಿ ಕೊಳ್ಳಲು ಪ್ರೋತ್ಸಾಹಿಸಲು ನಾವು ಆಹ್ವಾನಿಸುತ್ತೇವೆ” ಎಂದು, ಹೇಳಿದರು.

ಬಿಎಂಟಿಸಿಯ ಚೀಫ್ ಟ್ರಾಫಿಕ್ ಮ್ಯಾನೇಜರ್ (ಆಪರೇಷನ್) ಜಿಟಿ ಪ್ರಭಾಕರ್ ರೆಡ್ಡಿ ಅವರು ಮಾತ ನಾಡಿ, “ಬಿಎಂಟಿಸಿ 6,800 ಬಸ್‌ಗಳ ಸಮೂಹವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ ಮತ್ತು ಪ್ರತಿದಿನ 61,000ಕ್ಕೂ ಹೆಚ್ಚು ಬಸ್ ಟ್ರಿಪ್‌ ಗಳನ್ನು ನಡೆಸುತ್ತದೆ. ಈ ಮೂಲಕ 40 ಲಕ್ಷಕ್ಕೂ ಹೆಚ್ಚು ಜನರು ಬೆಂಗಳೂರಿನಾದ್ಯಂತ ಪ್ರಯಾಣಿಸಲು ಸಹಾಯ ಒದಗಿಸಲಾಗುತ್ತದೆ. ಆದರೆ ಹೆಚ್ಚಿನ ಬಸ್‌ ಗಳನ್ನು ಮತ್ತು ಮಾರ್ಗಗಳನ್ನು ಸೇರಿಸುವುದರಿಂದ ಮಾತ್ರವೇ ಸಾರಿಗೆ ಉತ್ತಮಗೊಳಿಸಲು ಸಾಧ್ಯ ವಾಗುವುದಿಲ್ಲ. ಬದಲಿಗೆ ಹೆಚ್ಚಿನ ಜನರು ಸಾರ್ವಜನಿಕ ಸಾರಿಗೆಯನ್ನು ಆಯ್ಕೆ ಮಾಡುವಂತೆ ಆಗಬೇಕು ಮತ್ತು ಅವರು ಈ ವ್ಯವಸ್ಥೆಯನ್ನು ಉತ್ತಮವಾಗಿ ಅನುಭವಿಸುವ ಅವಕಾಶ ಕಲ್ಪಿಸ ಬೇಕು” ಎಂದು ಹೇಳಿದರು.

ಎಲೆಕ್ಟ್ರಾನಿಕ್ಸ್ ಸಿಟಿ ಇಂಡಸ್ಟ್ರೀಸ್ ಅಸೋಸಿಯೇಷನ್ (ಇ ಎಲ್ ಸಿ ಐ ಎ) ಯ ವಕ್ತಾರರು, “ಎಲೆಕ್ಟ್ರಾನಿಕ್ ಸಿಟಿಯು ಬಹಳ ಕಾಲದಿಂದ ವಿನೂತನ ಆವಿಷ್ಕಾರ ವಿಚಾರದಲ್ಲಿ ಮುಂಚೂಣಿ ಯಲ್ಲಿದೆ. ಉತ್ತಮ ನಗರವನ್ನು ರೂಪಿಸಲು ಉತ್ತಮ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ ಕಲ್ಪಿಸುವುದು ನಮ್ಮ ಉದ್ದೇಶವಾಗಿದೆ.” ಎಂದು ಹೇಳಿದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಕಂಟ್ರಿ ಹೆಡ್ ಮತ್ತು ಕಾರ್ಪೊರೇಟ್ ಅಫೇರ್ಸ್ ಆಂಡ್ ಗವರ್ನೆನ್ಸ್‌ ನ ಕಾರ್ಯಕಾರಿ ಉಪಾಧ್ಯಕ್ಷ ವಿಕ್ರಮ್ ಗುಲಾಟಿ ಅವರು ಮಾತನಾಡಿ, “ಭಾರತದ ತ್ವರಿತ ಆರ್ಥಿಕ ಬೆಳವಣಿಗೆಯಿಂದ ಮತ್ತು ನಗರೀಕರಣದಿಂದ ಜನರ ಓಡಾಟ ಮತ್ತು ಸರಕುಗಳ ಸಾಗಾಣಿಕಾ ವಲಯದಲ್ಲಿ ಬಹಳ ಬೆಳವಣಿಗೆ ಉಂಟಾಗಿದೆ. ಇದರಿಂದ ಭಾರತದ ಇಂಧನ ಬಳಕೆ ಮತ್ತು ಇಂಗಾಲ ಹೊರಸೂಸುವಿಕೆ ಜಾಸ್ತಿಯಾಗಿದೆ. ಸಾರಿಗೆ ವಲಯವು ಈಗಾಗಲೇ ಭಾರತದ ಇಂಧನ-ಸಂಬಂಧಿತ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆಯ ಶೇ.12ರಷ್ಟನ್ನು ಒಳಗೊಂ ಡಿದೆ. ಈ ಸವಾಲುಗಳನ್ನು ಎದುರಿಸಲು ಸಾರ್ವಜನಿಕ ಸಾರಿಗೆಯನ್ನು ಬಳಸಿಕೊಳ್ಳುವುದು ಈ ಕ್ಷಣದ ತುರ್ತಾಗಿದೆ. ಈ ನಿಟ್ಟಿನಲ್ಲಿ ಗಮನಾರ್ಹ ಬದಲಾವಣೆ ಅವಶ್ಯವಾಗಿದೆ ಮತ್ತು ಮೂಲಸೌಕರ್ಯ ಸುಧಾರಣೆಯೊಂದೇ ಇದಕ್ಕೆ ಪರಿಹಾರವಲ್ಲ ಎಂಬುದು ನಮಗೆ ತಿಳಿದಿದೆ.” ಎಂದು ಹೇಳಿದರು.

ಡಬ್ಲೂ ಆರ್ ಐ ಇಂಡಿಯಾದ ಇಂಟಿಗ್ರೇಟೆಡ್ ಟ್ರಾನ್ಸ್‌ ಪೋರ್ಟ್, ಕ್ಲೀನ್ ಏರ್ & ಹೈಡ್ರೋಜನ್‌ ವಿಭಾಗದ ಕಾರ್ಯಕಾರಿ ನಿರ್ದೇಶಕ ಪವನ್ ಮುಲುಕುಟ್ಲ ಅವರು ಮಾತನಾಡಿ, “ಪ್ರಯಾಣಿಕರ ವರ್ತನೆಯನ್ನು ದೊಡ್ಡ ಪ್ರಮಾಣದಲ್ಲಿ ಬದಲಾಯಿಸಲು ನಾವು ಮೂಲಸೌಕರ್ಯ ಹೊರತಾಗಿ ಅವರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಹೇಗೆ ನೋಡುತ್ತಾರೆ ಎಂಬುದನ್ನು ತಿಳಿಯಬೇಕು.” ಎಂದು ಹೇಳಿದರು.