ನಶೆಮುಕ್ತ ಜಿಲ್ಲೆ ಮಾಡಲು ಸಾರ್ವಜನಿಕರ ಸಹಕಾರ ಅಗತ್ಯ : ಎಸ್ಪಿ ಕುಶಾಲ್ ಚೌಕ್ಸೆ
ಜಿಲ್ಲೆಗೆ ಗಾಂಜಾ ಸೇರಿ ಇತರೆ ಮಾದಕ ವಸ್ತುಗಳು ಪಕ್ಕದ ಆಂಧ್ರಪ್ರದೇಶ ದಿಂದ ಸರಬರಾಜು ಆಗುತ್ತಿದೆ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಠಾಣೆಗಳಾದ ಬಾಗೇ ಪಲ್ಲಿ, ಚೇಳೂರು, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ಮತ್ತು ಗೌರಿಬಿದನೂರು ಠಾಣೆಗಳಲ್ಲಿ ಈ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದರು


ಚಿಕ್ಕಬಳ್ಳಾಪುರ : ಜಿಲ್ಲೆಯನ್ನು ನಶೆ ಮತ್ತು ಮಾದಕ ವಸ್ತು ಮುಕ್ತ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟಿಬದ್ಧವಾಗಿದೆ.ಜಿಲ್ಲಾ ಪೊಲೀಸ್ ಇಲಾಖೆ ನಿರಂತರವಾಗಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು, ಗಾಂಜಾ ಸೇರಿ ಯಾವುದೇ ಮಾದಕವಸ್ತುಗಳ ಕಳ್ಳಸಾಗಣೆ, ಬಳಕೆ ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಸೆ ಮನವಿ ಮಾಡಿದರು.
ನಗರ ಹೊರವಲಯ ಎಸ್‌ಪಿ ಕಚೇರಿ ಆವರಣದಲ್ಲಿ ನಡೆದ ಈ ಬಗ್ಗೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಗೆ ಗಾಂಜಾ ಸೇರಿ ಇತರೆ ಮಾದಕ ವಸ್ತುಗಳು ಪಕ್ಕದ ಆಂಧ್ರಪ್ರದೇಶ ದಿಂದ ಸರಬರಾಜು ಆಗುತ್ತಿದೆ.ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಠಾಣೆಗಳಾದ ಬಾಗೇ ಪಲ್ಲಿ, ಚೇಳೂರು, ಬಟ್ಲಹಳ್ಳಿ, ಕೆಂಚಾರ್ಲಹಳ್ಳಿ ಮತ್ತು ಗೌರಿಬಿದನೂರು ಠಾಣೆಗಳಲ್ಲಿ ಈ ಬಗ್ಗೆ ಹೆಚ್ಚಿನ ನಿಗಾವಹಿಸಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: Chikkaballapur News: ಆರು ತಿಂಗಳಿಂದ ಸ್ಥಗಿತಗೊಂಡ ರಿಜಿಸ್ಟರ್ ಖಾತೆಗಳು ಪ್ರಾರಂಭ
ಪ್ರಸಕ್ತ ಸಾಲಿನ ಜನವರಿಯಲ್ಲಿ ೫ ಪ್ರಕರಣ ದಾಖಲಾಗಿದ್ದು, ೨೦೨೪ನೇ ಸಾಲಿನಲ್ಲಿ ೨೬ ಮಾದಕ ವಸ್ತುಗಳ ಕಳ್ಳ ಸಾಗಣೆ ಪ್ರಕರಣಗಳು ದಾಖಲಾಗಿವೆ.ಸಾರ್ವಜನಿಕರು ಮತ್ತು ಮಾಧ್ಯಮ ಸಹಕಾರ ದೊಂದಿಗೆ ಮಾದಕ ವಸ್ತು ಬಳಕೆ ಮುಕ್ತ ಜಿಲ್ಲೆ ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.ಈ ನಿಟ್ಟಿನಲ್ಲಿ ಮಾದಕ ವಸ್ತುಗಳ ಕಳ್ಳ ಸಾಗಣೆ ಸಂಬಂಧ ನಿರಂತರವಾಗಿ ಮಾಹಿತಿ ಕಲೆ ಹಾಕಲಾಗು ತ್ತಿದೆ. ಇಷ್ಟಾದರೂ ಆರೋಪಿಗಳು ಪೊಲೀಸರ ಕಣ್ತಪ್ಪಿಸಿ ಕಳ್ಳ ಮಾರ್ಗದಲ್ಲಿ ಗಾಂಜಾ ಸಾಗಿಸುತ್ತಿದ್ದು, ಅದನ್ನು ಹಿಡಿಯಲು ಇಲಾಖೆ ನಿರಂತರವಾಗಿ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ಗಾಂಜಾ ಪ್ರಕರಣ ಪತ್ತೆಯಾದ ಕೂಡಲೇ ಕೇವಲ ಆರೋಪಿತರನ್ನು ಮಾತ್ರ ತನಿಖೆಗೆ ಒಳಪಡಿಸದೆ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಿದ್ದೇವೆ.ಇನ್ನು ಶಾಲಾಕಾಲೇಜು ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಮಾಹಿತಿಯಿದ್ದಲ್ಲಿ ಸಾರ್ವಜನಿಕರು ಇಲಾಖೆ ಗಮನಕ್ಕೆ ತಪ್ಪದೆ ತರಬ ಹುದು. ಯಾವ ಕಾರಣಕ್ಕೂ ಮಾಹಿತಿದಾರರ ಹೆಸರು ಬಹಿರಂಗಪಡಿಸದೆ ಗೌಪ್ಯತೆ ಕಾಪಾಡಲಾಗು ವುದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಕಾಲಕಾಲಕ್ಕೆ ನಾರ್ಕೋಟೆಕ್ ಸಭೆಗಳನ್ನು ನಡೆಸುತ್ತಿದ್ದು ಜಿಲ್ಲಾಧಿ ಕಾರಿಗಳ ಅಧ್ಯಕ್ಷತೆಯಲ್ಲಿ ಕೂಡ ಇತರೆ ಇಲಾಖೆಗಳೊಂದಿಗೆ ಸಭೆ ನಡೆಸಿ, ಮಾಹಿತಿ ಹಂಚಿಕೊಳ್ಳ ಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಕ್‌ಪೋಸ್ಟ್ ಹಾಕಿ ಪರಿಶೀಲಿಸಲಾಗುತ್ತಿದೆ. ಚಿಂತಾಮಣಿ ತಾಲೂಕಿನ ರೈತರ ಜಮೀನಿನಲ್ಲಿ ಗಾಂಜಾ ಬೆಳೆಯುತ್ತಿರುವ ಬಗ್ಗೆ ಹೆಚ್ಚು ಪ್ರಕರಣಗಳು ದಾಖಲಾ ಗಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪ್ರದೇಶದಲ್ಲಿ ಗಾಂಜಾ ಸಾಗಣೆ ಮಾಡುವ ಬಗ್ಗೆ ದೂರುಗಳು ಬಂದಿವೆ. ಈ ಬಗ್ಗೆ ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.
ಇನ್ನು ಮಾದಕ ವಸ್ತುಗಳ ಬಳಕೆ ಮಾಡದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನೂ ಇಲಾಖೆ ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಇಲಾಖೆಯ ಗುರಿ ಮಾದಕ ವಸ್ತುಗಳ ಮುಕ್ತ ಜಿಲ್ಲೆ ಮಾಡುವುದಾಗಿದ್ದು, ಸಾರ್ವಜನಿಕರು ಸಹಕಾರ ದೊಂದಿಗೆ ಈ ಗುರಿ ಮುಟ್ಟಲು ಇಲಾಖೆ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ರಾಜಾ ಇಮಾಮ್ ಖಾಸಿಂ ಇದ್ದರು.
*
೨೪.೭೫೮ ಕೆ.ಜಿ ಗಾಂಜಾ ನಾಶ
ಜಿಲ್ಲೆಯಲ್ಲಿ ಕಳೆದ ವರ್ಷ ಅಂದರೆ ೨೦೨೪ರಲ್ಲಿ ಗಾಂಜಾ ಸಾಗಣೆ ಸೇರಿ ಇತರೆ ಮಾದಕ ವಸ್ತುಗಳಿಗೆ ಸಂಬAಧಿಸಿದ ಎನ್‌ಪಿಎಸ್ ಕಾಯ್ದೆಯಡಿ ಒಟ್ಟು ೨೬ ಪ್ರಕರಣಗಳು ದಾಖಲಾಗಿದ್ದು, ೧೧೮ ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಎಸ್‌ಪಿ ಕುಶಾಲಾ ಚೌಕ್ಸೆ ತಿಳಿಸಿದರು. ಕಳೆದ ಸಾಲಿನಲ್ಲಿ ವಶಕ್ಕೆ ಪಡೆದಿರುವ ಗಾಂಜಾ ಸೇರಿ ಇತರೆ ಮಾದಕ ವಸ್ತುಗಳಲ್ಲಿ ಒಟ್ಟು ೧೨ ಪ್ರಕರಣಗಳ ೯.೫ ಲಕ್ಷ ಮೌಲ್ಯದ ೨೪.೭೫೮ ಕೆ.ಜಿ ಗಾಂಜಾ ನಾಶ ಮಾಡಲು ನ್ಯಾಯಾಲಯದ ಅನುಮತಿ ಸಿಕ್ಕಿದ್ದು, ಹೊಸ ಕೋಟೆ ಕೈಗಾರಿಕಾ ಪ್ರದೇಶದ ಕಂಪನಿಯೊಂದರಲ್ಲಿ ಈ ಎಲ್ಲ ಮಾದಕ ವಸ್ತುಗಳ ನಾಶ ಮಾಡಲಾ ಗಿದೆ. ಉಳಿದ ಪ್ರಕರಣಗಳಲ್ಲಿ ದೊರೆತಿರುವ ಮಾದಕ ವಸ್ತುಗಳನ್ನೂ ನಾಶ ಮಾಡಲು ಅನುಮತಿ ಸಿಕ್ಕ ನಂತರ ನಾಶ ಪಡಿಸಲಾಗುವುದು.
ಎಸ್ಪಿ. ಕುಶಾಲ್ ಚೌಕ್ಸೆ ಚಿಕ್ಕಬಳ್ಳಾಪುರ