CM Siddaramaiah: ರಾಜ್ಯದ ಮೂರು ವಿಮಾನ ನಿಲ್ದಾಣ ಅಭಿವೃದ್ಧಿಗೆ ಸಿಎಂ ಸಿದ್ದರಾಮಯ್ಯ ಮನವಿ
ವಿಸ್ತರಣಾ ಕಾರ್ಯಗಳನ್ನು ಯೋಜಿಸಲು, ಯುಟಿಲಿಟಿ ಸ್ಥಳಾಂತರಕ್ಕೆ ಅಗತ್ಯವಿರುವ 101.84 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ಭರಿಸಲು ಮತ್ತು ರನ್‌ವೇ ವಿಸ್ತರಣೆ / ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಕೋರಲಾಗಿದೆ.

ಸಿಎಂ ಸಿದ್ದರಾಮಯ್ಯ

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಶುಕ್ರವಾರ ನಾಗರಿಕ ವಿಮಾನಯಾನ (civil aviation) ಸಚಿವ ಕಿಂಜರಾಪು ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿಯಾಗಿ ರಾಜ್ಯದ (Karnataka) ಮೂರು ವಿಮಾನ ನಿಲ್ದಾಣಗಳ (Airports) ಅಭಿವೃದ್ಧಿ ಕುರಿತು ಚರ್ಚಿಸಿದರು. ಮೈಸೂರು, ಕಲಬುರಗಿ ಮತ್ತು ವಿಜಯಪುರ ವಿಮಾನ ನಿಲ್ದಾಣಗಳ ರನ್‌ವೇ ವಿಸ್ತರಣೆ ಯುಟಿಲಿಟಿ ಇತ್ಯಾದಿಗಳ ಅಭಿವೃದ್ಧಿಯ ಕುರಿತು ಚರ್ಚಿಸಲಾಯಿತು.
ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಅಗತ್ಯವಾದ 240 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರ್ಕಾರ 319.14 ಕೋಟಿ ರೂ.ಗಳ ವೆಚ್ಚವನ್ನು ಭರಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು. “ವಿಸ್ತರಣಾ ಕಾರ್ಯಗಳನ್ನು ಯೋಜಿಸಲು, ಯುಟಿಲಿಟಿ ಸ್ಥಳಾಂತರಕ್ಕೆ ಅಗತ್ಯವಿರುವ 101.84 ಕೋಟಿ ರೂ.ಗಳ ಅಂದಾಜು ವೆಚ್ಚವನ್ನು ಭರಿಸಲು ಮತ್ತು ರನ್‌ವೇ ವಿಸ್ತರಣೆ / ಅಭಿವೃದ್ಧಿ ಕಾರ್ಯಗಳನ್ನು ಶೀಘ್ರವಾಗಿ ಕೈಗೊಳ್ಳುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವನ್ನು ಕೋರಲಾಗಿದೆ” ಎಂದು ಅವರು ಕೇಂದ್ರ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮತ್ತು ರಾಜ್ಯ ಸರ್ಕಾರಿ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಳೆ ರಾಮನವಮಿ ಹಿನ್ನೆಲೆಯಲ್ಲಿ ಮಾಂಸ ಮಾರಾಟ ಬಂದ್
ಬೆಂಗಳೂರು: ರಾಮನವಮಿ (Ram Navami 2025) ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 06ರಂದು ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (bruhat bengaluru mahanagara palike) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಈ ಕುರಿತು ಬಿಬಿಎಂಪಿಯ ಪಶುಪಾಲನಾ ವಿಭಾಗ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.
ಭಾನುವಾರ ರಾಮನವಮಿ ಆಚರಣೆ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮತ್ತು ಪ್ರಾಣಿವಧೆ (animal slaughter and meat sale) ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಬಿಬಿಎಂಪಿಯ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಿದ್ದು. ”ಇದೇ ಏಪ್ರಿಲ್ 06) ರಾಮನವಮಿ ಹಬ್ಬದಂದು ಕುರಿ, ಕೋಳಿ, ಮೀನು, ಮಾಂಸ ಮಾರಾಟ ಹಾಗೂ ಪ್ರಾಣಿ ವಧೆಯನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.
ಭಾನುವಾರ ರಜೆ ಇರುವುದರಿಂದ ಸಾಮಾನ್ಯವಾಗಿ ಮಾಂಸಾಹಾರ ಪ್ರಿಯರು ಬಾಡೂಟ ಸವಿಯುತ್ತಾರೆ. ಅಂದು ಮಾಂಸದಂಗಡಿಗಳಿಗೂ ಹೆಚ್ಚಿನ ವ್ಯಾಪಾರ ನಡೆಯುವುದು ರೂಢಿಯಾಗಿದೆ. ಆದರೆ ಈ ಏಪ್ರಿಲ್ 6ರಂದು ಮಾಂಸ ಮಾರಾಟ ಇರುವುದಿಲ್ಲವಾದ್ದರಿಂದ ಮಾಂಸದಂಗಡಿಗಳೂ ತೆರೆಯುವುದಿಲ್ಲ.
ಇದನ್ನೂ ಓದಿ: Waqf Bill: ಕರ್ನಾಟಕದಲ್ಲಿ ವಕ್ಫ್ ಆಸ್ತಿ ಕಬಳಿಸಿದ ನಾಯಕರ ಹೆಸರು ಬಹಿರಂಗ; ಪಟ್ಟಿ ಇಲ್ಲಿದೆ